Published on: June 26, 2023

ಚುಟುಕು ಸಮಾಚಾರ : 24 ಜೂನ್ 2023

ಚುಟುಕು ಸಮಾಚಾರ : 24 ಜೂನ್ 2023

  • ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದಲ್ಲಿ 12ನೇ ಶತಮಾನದ ಮೂರು ಶಾಸನಗಳು ಪತ್ತೆಯಾಗಿವೆ. ‘ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಎರಡು ಮತ್ತು ಈಶ್ವರ ದೇವಸ್ಥಾನದ ಆವರಣದಲ್ಲಿ ಒಂದು ಶಾಸನ ಪತ್ತೆಯಾಗಿವೆ.
  • ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ತುಮಕೂರು ಜಿಲ್ಲೆಯ ಹೆಮ್ಮೆಯ ತಳಿಗಳಾದ ‘ಸಿದ್ದು’ ಹಾಗೂ ‘ಶಂಕರ’ ಹಣ್ಣಿಗೆ ಹಕ್ಕು ಸ್ವಾಮ್ಯ (ಪೇಟೆಂಟ್) ಸಿಕ್ಕಿದೆ. ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿವಿಎಫ್ಆರ್ಎ) ಈ ಪೇಟೆಂಟ್ ನೀಡಿದೆ. ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಹಲಸಿಗೆ ಸಿಕ್ಕಿರುವ ಮೊದಲ ಪೇಟೆಂಟ್ ಆಗಿದೆ. ನಗರದ ಹೊರವಲಯದಲ್ಲಿರುವ ಐಐಎಚ್ಆರ್ ಸಂಸ್ಥೆಯು 2017ರಲ್ಲಿ ಗುಬ್ಬಿ ತಾಲ್ಲೂಕಿನ ಚೇಳೂರಿನ ‘ಸಿದ್ದು’ ಹಲಸು ಮತ್ತು 2019ರಲ್ಲಿ ಚೌಡ್ಲಾಪುರದ ‘ಶಂಕರ’ ಹಲಸಿನ ತಳಿಯನ್ನು ದೇಶದ ಅತ್ಯುತ್ತಮ ಹಲಸಿನ ತಳಿಗಳು ಎಂದು ಗುರುತಿಸಿದೆ.
  • ‘ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ’ಎ++’ ಶ್ರೇಣಿ ದೊರೆತಿದೆ’. ದೇಶದ ಕೆಲವೇ ಶೈಕ್ಷಣಿಕ ಸಂಸ್ಥೆಗಳು ನಾಲ್ಕನೇ ಆವೃತ್ತಿಗೆ ಮಂಡಳಿಯಿಂದ ಮಾನ್ಯತೆ ಪ‍ಡೆದಿವೆ. ಇವುಗಳಲ್ಲಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ನಂತರ ದೇಶದಲ್ಲಿ ಮೊದಲ ಬಾರಿಗೆ ಈ ಸಾಧನೆಗೈದಿರುವುದು ಬೆಂಗಳೂರು ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ವಿಷಯ. ಈ ಮೂಲಕ ವಿಶ್ವವಿದ್ಯಾಲಯವು ಸಂಪೂರ್ಣ ಸ್ವಾಯತ್ತತೆಯನ್ನು ಪ‍ಡೆಯುವ ಅವಕಾಶ ಪಡೆದುಕೊಂಡಿದೆ’. ‘ನ್ಯಾಕ್ ನಿಗದಿಪಡಿಸಿದ ಮಾನದಂಡಗಳಾದ ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತುನಿರ್ವಹಣೆ, ಸಾಂಸ್ಥಿಕ ಮೌಲ್ಯಗಳಲ್ಲಿವಿಶ್ವವಿದ್ಯಾಲಯವು ಗರಿಷ್ಠ 4 ಅಂಕಗಳಲ್ಲಿ 3.75 ಅಂಕಗಳನ್ನು ಪಡೆದುಕೊಂಡಿದೆ. ಐದು ವರ್ಷಗಳವರೆಗೆ ಈ ಮಾನ್ಯತೆ ಇರಲಿದೆ.
  • ಸೈಬರ್ ಕ್ಷೇತ್ರದಿಂದ ಬರುವ ಅಪಾಯಗಳ ಮೇಲೆ ಕಣ್ಗಾವಲಿಡುವ, ಬೇಹುಗಾರಿಕೆ ಪತ್ತೆಮಾಡುವ ಮತ್ತು ಬೇಹುಗಾರಿಕೆ ನಡೆಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಪ್ಯಾರಡೈಮ್ ಸಂಸ್ಥೆಗೆ (ಸಿಎಸ್ಐಆರ್ 4 ಪಿಐ) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
  • ದಕ್ಷಿಣ ಅಮೆರಿಕದ ಸುರಿನಾಮ್ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ದಿ ಚೈನ್ ಆಫ್ ಯೆಲ್ಲೋ ಸ್ಟಾರ್’ ಎಂಬ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರದಾನಮಾಡಿ ಗೌರವಿಸಿದೆ. ದ್ರೌಪದಿ ಮುರ್ಮು ಈ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ಭಾರತೀಯರಾಗಿದ್ದಾರೆ. ಮುರ್ಮು ಅವರು ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾ ಪೆರ್ಸ ದ್ ಸ್ಯಾಂಟೋಖಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
  • ಜನರಲ್ ಇಲೆಕ್ಟ್ರಿಕ್ (ಜಿಇ) ಏರೋಸ್ಪೇಸ್ ಭಾರತ ಸರ್ಕಾರಿ ಸ್ವಾಮ್ಯದ, ಯುದ್ಧ ವಿಮಾನಗಳನ್ನು ಉತ್ಪಾದಿಸುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯೊಡನೆ ಭಾರತೀಯ ವಾಯುಪಡೆಗೆ ಅಗತ್ಯವಿರುವ ಯುದ್ಧ ವಿಮಾನಗಳ ಇಂಜಿನ್ಗಳನ್ನು ಉತ್ಪಾದಿಸಲು ತಿಳಿವಳಿಕೆ ಒಪ್ಪಂದ (Mou)ಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿದೆ.