Published on: September 28, 2023

ಚುಟುಕು ಸಮಾಚಾರ : 27 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 27 ಸೆಪ್ಟೆಂಬರ್ 2023

  • ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಇಲಾಖೆ 2022–23ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ 233 ಹಾಗೂ ‘ವಿಶೇಷ ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ನಾಲ್ಕು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿದೆ. ಪಂಚಾಯತ್ ರಾಜ್ ಇಲಾಖೆ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತ ಬಂದಿದೆ. ಪ್ರತಿ ತಾಲ್ಲೂಕಿನ ಒಂದೊಂದು ಗ್ರಾಮವನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹೊಸಾಡು, ಉಡುಪಿ ತಾಲೂಕು ಬಡಗೆಬೆಟ್ಟು, ಉತ್ತರ ಕನ್ನಡ ಜಿಲ್ಲೆ ತಟ್ಟೇಗೇರಿ ಹಾಗೂ ಬೆಳವಟಿಕೆ ಗ್ರಾಮ ಪಂಚಾಯಿತಿಗಳು ವಿಶೇಷ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
  • ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಖ್ಯಾತಿಯ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು, ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಭಾಜನವಾಗಿದೆ.
  • ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ-ಆರೋಗ್ಯ ಕರ್ನಾಟಕ’ (ಎಬಿ-ಪಿಎಂಜೆಎವೈ-ಎಆರ್) ಸೌಲಭ್ಯ ಮತ್ತಷ್ಟು ಉತ್ತಮಗೊಂಡಿದ್ದು, ಇದಕ್ಕಾಗಿ ಹೊಸದಾಗಿ (ಎಬಿಎಆರ್ಕೆ ಕೋ ಬ್ರ್ಯಾಂಡೆಡ್ ಕಾರ್ಡ್) ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ.
  • ಗ್ರಾಮ ಪಂಚಾಯಿತಿಗಳು ನಿರ್ವಹಿಸುತ್ತಿರುವ ಎಲ್ಲ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಅನುದಾನದಲ್ಲಿ ಶೇ.5 ಅನ್ನು ಸ್ತ್ರೀಸಬಲೀಕರಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸುವಂತೆ ರಾಜ್ಯ ಸರ್ಕಾರ ಸ್ಪಷ್ಟ ಸುತ್ತೋಲೆ ಹೊರಡಿಸಲಾಗಿದೆ.
  • ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವದಾದ್ಯಂತ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.ಭಾರತವು ತನ್ನದೇ ಆದ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಪ್ರತ್ಯೇಕವಾಗಿ ಆಚರಿಸುತ್ತದೆ. ಇದನ್ನು ದೇಶದಲ್ಲಿ ಪ್ರತಿ ವರ್ಷ ಜನವರಿ 25 ರಂದು ಆಚರಿಸಲಾಗುತ್ತದೆ. 2023 ರ ವಿಷಯ : ‘ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆ’
  • 1919 – 20ರಲ್ಲಿ ವಿಶ್ವವನ್ನು ಆವರಿಸಿದ್ದ ಸ್ಪ್ಯಾನಿಷ್ ಫ್ಲೂ ಮಾದರಿಯಲ್ಲೇ ಹೊಸ ವೈರಸ್ ದಾಳಿ ಇಡಲಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಇದನ್ನು ‘ಡಿಸೀಸ್ ಎಕ್ಸ್’ ಎಂದು ಕರೆದಿದೆ. ಈ ವೈರಸ್ ಸಂಬಂಧ ಬ್ರಿಟನ್ನ ಲಸಿಕಾ ಕಾರ್ಯಪಡೆ ಮುಖ್ಯಸ್ಥರಾಗಿದ್ದ ಕೇಟ್ ಬಿಂಗ್ಹಾಮ್ ಅವರು ಸಮಗ್ರ ಮಾಹಿತಿ ನೀಡಿದ್ದಾರೆ. ಇದು ಹೊಸ ಮಾದರಿಯ ರೋಗಾಣು ಆಗಿದ್ದು ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್.. ಯಾವುದೇ ಮಾದರಿಯಲ್ಲಿ ಇರಬಹುದಾಗಿದೆ.