Published on: May 30, 2023

ಚುಟುಕು ಸಮಾಚಾರ : 27-29 ಮೇ 2023

ಚುಟುಕು ಸಮಾಚಾರ : 27-29 ಮೇ 2023

  • ಜಾನುವಾರು ಸಾಗಣೆಯ ಪರವಾನಗಿ ಪಡೆಯುವ ವ್ಯವಸ್ಥೆಗೆ ತಾಂತ್ರಿಕ ಸ್ಪರ್ಶ ನೀಡಿರುವ ಪಶುಸಂಗೋಪನಾ ಇಲಾಖೆಯು, ‘ಇ–ಪರವಾನಗಿ’ಯನ್ನು ಕಡ್ಡಾಯಗೊಳಿಸಿದೆ. ವಾಹನದಲ್ಲಿ ಸಾಗಣೆಯಾಗುವ ಜಾನುವಾರುಗಳ ಖಚಿತತೆಗೆ ಇದು ಸಹಕಾರಿಯಾಗುತ್ತಿದೆ. ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2021’ಕ್ಕೆ ಅನುಗುಣವಾಗಿ ನೂತನ ವ್ಯವಸ್ಥೆ ರೂಪುಗೊಂಡಿದೆ.
  • ಅಲಹಾಬಾದ್ನ ವಸ್ತುಸಂಗ್ರಹಾಲಯದಲ್ಲಿರುವ ತಮಿಳುನಾಡಿಗೆ ಸೇರಿದ ಐತಿಹಾಸಿಕ ‘ಸೆಂಗೋಲ್’ (ನ್ಯಾಯದಂಡ) ಅನ್ನು ನೂತನ ಸಂಸತ್ ಭವನದಲ್ಲಿ ಲೋಕಸಭೆಯ ಸ್ಪೀಕರ್ ಆಸನದ ಸಮೀಪದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಆಡಳಿತದ ಔಪಚಾರಿಕ ಹಸ್ತಾಂತರದ ಸಂಕೇತವಾಗಿ ಅದನ್ನು ಜವಹರಲಾಲ್ ನೆಹರೂ ಅವರಿಗೆ ಮೌಂಟ್ ಬ್ಯಾಟನ್ ಅವರು ನೀಡಿದ್ದರು. ಅದೇ ರಾಜದಂಡವನ್ನು ಹೊಸದಾಗಿ ನಿರ್ಮಿಸಿರುವ ಸಂಸತ್ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತದೆ”.
  • 2023 ಜೂನ್ 1ರಿಂದ ರಫ್ತಾಗುವ ಎಲ್ಲ ಕೆಮ್ಮಿನ ಸಿರಪ್ಗಳನ್ನೂ ಸರ್ಕಾರದ ಅಧಿಕೃತ ಲ್ಯಾಬ್ಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.: ಭಾರತೀಯ ಕಂಪೆನಿಗಳಿಂದ ಪೂರೈಕೆಯಾದ ಕೆಮ್ಮಿನ ಔಷಧಗಳು ವಿವಿಧ ದೇಶಗಳಲ್ಲಿ ಮಕ್ಕಳ ಸಾವು ಹಾಗೂ ಅನಾರೋಗ್ಯಕ್ಕೆ ಕಾರಣವಾಗಿರುವ ವರದಿಗಳು ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಕುರಿತಾದ ಕಳವಳ ಮೂಡಿಸಿರುವ ಸಂದರ್ಭದಲ್ಲಿ ಕೇಂದ್ರದ ಈ ಸೂಚನೆ ಹೊರಬಂದಿದೆ.
  • ಚಂದ್ರನ ಮೇಲ್ಮೈನಲ್ಲಿ ಕಪ್ಪು–ಬಿಳುಪು ಹೊರತಾದ ಬಣ್ಣಗಳಿಂದ ಕೂಡಿರುವ ರಚನೆಗಳೂ ಇರುವುದನ್ನು ಸ್ಪಷ್ಟವಾಗಿ ತೋರಿಸುವ ಚಿತ್ರವನ್ನು (ಚಿತ್ರಗಳನ್ನು) ಸೆರೆಹಿಡಿಯಲಾಗಿದೆ. ಈ ಚಿತ್ರವನ್ನು ‘ಗಿಗಾಮೂನ್’ ಎಂದು ಕರೆಯಲಾಗಿದೆ. ಅಮೆರಿಕದ ಖಗೋಳ ಛಾಯಾಗ್ರಾಹಕ ಆ್ಯಂಡ್ರೀ ವ್ ಮೆಕ್ಕಾರ್ತಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ.
  • ಭಾರತದ ಅತಿ ದೊಡ್ಡ ಹೈಕೋರ್ಟ್ ಕಟ್ಟಡ; ರಾಂಚಿಯಲ್ಲಿನ ದೇಶದ ಅತಿ ದೊಡ್ಡ ಹೈಕೋರ್ಟ್ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು.
  • ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ನೂತನ ಕಾನ್ಸುಲೇಟ್ ಕಚೇರಿ ತೆರೆಯಲಿದ್ದು, ಇದಕ್ಕೆ ಪ್ರತಿಯಾಗಿ ಭಾರತವೂ ಶೀಘ್ರವೇ ಬ್ರಿಸ್ಬೇನ್ನಲ್ಲಿ ಕಾನ್ಸುಲೇಟ್ ಕಚೇರಿ ಆರಂಭಿಸಲಿದೆ. ದೆಹಲಿ, ಮುಂಬೈ , ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಈಗಾಗಲೇ ಆಸ್ಟ್ರೇಲಿಯಾದ ಕಾನ್ಸುಲೇಟ್ ಕಚೇರಿಗಳಿವೆ. ಇದು 5ನೇ ಕಚೇರಿ ಎನಿಸಲಿದೆ. ಕ್ಯಾನ್ಬೆರಾದಲ್ಲಿ ಭಾರತದ ಹೈ ಕಮಿಷನ್ ಕಚೇರಿ ಜತೆಗೆ ಪರ್ತ್, ಮೆಲ್ಬರ್ನ್‌ ಮತ್ತು ಸಿಡ್ನಿಯಲ್ಲಿ ರಾಯಭಾರ ಕಚೇರಿಗಳಿವೆ.