Published on: March 28, 2023

ಚುಟುಕು ಸಮಾಚಾರ : 28 ಮಾರ್ಚ್ 2023

ಚುಟುಕು ಸಮಾಚಾರ : 28 ಮಾರ್ಚ್ 2023

  • ಪಂಜಾಬ್‌ನ ಹರ್ಜಿಂದರ್ ಕೌರ್ ಅವರು ಖೇಲೊ ಇಂಡಿಯಾ ಮಹಿಳೆಯರ ರಾಷ್ಟ್ರೀಯ ರ‍್ಯಾಂಕಿಂಗ್‌ ವೇಟ್‌ಲಿಫ್ಟಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 71 ಕೆಜಿ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಅವರಿಗೆ ಪದಕ ಒಲಿಯಿತು.
  • ಬೆಂಗಳೂರು ನಗರದ ಜಂಕ್ಷನ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿರಿಸಲು ಬಿಬಿಎಂಪಿ ರೂಪಿಸಿರುವ ‘ಸುರಕ್ಷ 75 ಮಿಷನ್ 2023’ ಯೋಜನೆಯ ಕಾಫಿ ಟೇಬಲ್‌ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಎಲ್ಲ ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳು ಸೇರಿದಂತೆ ರಸ್ತೆ ಅಪಘಾತಗಳಿಂದ ಸುರಕ್ಷಿತಗೊಳಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.
  • ಉಚಿತವಾಗಿ ವಿತರಿಸುವ ಪಡಿತರ ಪದಾರ್ಥಗಳು ಕಾಳಸಂತೆ ಪಾಲಾಗುವುದನ್ನು ತಡೆಯಲು, ಅರ್ಹ ಫಲಾನುಭವಿಗಳಿಗೇ ದೊರೆಯುವಂತೆ ಮಾಡಲು ನ್ಯಾಯಬೆಲೆ ಅಂಗಡಿಗಳಲ್ಲಿ ಏ.1ರಿಂದಲೇ ಐರಿಸ್‌ (ಕಣ್ಣಿನ ಪಾಪೆ) ಸ್ಕ್ಯಾನ್‌ ಕಡ್ಡಾಯಗೊಳಿಸಿ ಆಹಾರ ಇಲಾಖೆ ಆದೇಶ ಹೊರಡಿಸಿದೆ
  • ಸೂರತ್‌ನ ಸ್ಥಳೀಯ ನ್ಯಾಯಾಲಯವು ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ನಂತರ ಅವರ ಸಂಸತ್ ಸದಸ್ಯತ್ವ ರದ್ದಾಗಿದೆ.
  • ದೂರದ ಪ್ರದೇಶಕ್ಕೆ 50 ಕೆಜಿ ತೂಕ ಸಾಗಿಸುವ ಭಾರತದ ಅತೀ ದೊಡ್ಡ ಡ್ರೋನ್ ಈಗ ಬೆಂಗಳೂರಿನಲ್ಲಿ ಸಭಿಕರ ಗಮನ ಸೆಳೆದಿದೆ. ಐಐಟಿ ಮದ್ರಾಸ್‌ನಲ್ಲಿ ಈ ಡ್ರೋನ್ ತಯಾರಾಗಿದ್ದು, ಇದನ್ನು 2019 ರಲ್ಲಿ ಪ್ರೊಫೆಸರ್ ಸತ್ಯ ಚಕ್ರವರ್ತಿ ಸ್ಥಾಪಿಸಿದ ಇಪ್ಲೇನ್ ಕಂಪನಿ ಅಭಿವೃದ್ಧಿಪಡಿಸಿದೆ. ಈ ಹೈಬ್ರಿಡ್ ಮಾನವರಹಿತ ವೈಮಾನಿಕ ವಾಹನ (ಯುಎವಿ) 50 ಕೆಜಿ ಪೇಲೋಡ್ ಸೇರಿದಂತೆ 200 ಕೆಜಿ ಟೇಕ್-ಆಫ್ ತೂಕವನ್ನು ಹೊಂದಿದೆ. ಇದರ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದು 160 ಕಿಮೀ/ಗಂಟೆ ವೇಗದಲ್ಲಿ ತನ್ನ ಲೀಥಿಯಂ ಐಯಾನ್ ಬ್ಯಾಟರಿಗಳಿಂದ 200 ಕಿಮೀ ವರೆಗೆ ಚಲಿಸಬಲ್ಲದು. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರೋನ್‌ಗಳು ಪ್ರಸ್ತುತ 5 ಕೆಜಿ ಮತ್ತು 10 ಕೆಜಿ ತೂಕವನ್ನು ಹೊತ್ತೊಯ್ಯುತ್ತವೆ ಮತ್ತು ಗರಿಷ್ಠ 30 ಕಿಮೀ ದೂರ ಹಾರುತ್ತವೆ. 3 ಮೀಟರ್‌ನಿಂದ 3 ಮೀಟರ್‌ನ ಈ ವಾಹನವು ಹೆಲಿಕಾಪ್ಟರ್‌ಗಳು ಅಥವಾ ಹೆಲಿಪ್ಯಾಡ್ ಅಥವಾ ರನ್‌ವೇ ಅಗತ್ಯವಿರುವ ವಿಮಾನಗಳಿಗಿಂತ ಭಿನ್ನವಾಗಿ ಯಾವುದೇ ಸಮತಟ್ಟಾದ ಮೇಲ್ಮೈಯಲ್ಲಿ ಇಳಿಯಬಹುದು