Published on: April 3, 2023

ಚುಟುಕು ಸಮಾಚಾರ – 3 ಏಪ್ರಿಲ್ 2023

ಚುಟುಕು ಸಮಾಚಾರ – 3 ಏಪ್ರಿಲ್ 2023

  • ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ, ಆತ್ಮನಿರ್ಭರ ಬದುಕಿನ ನಿಟ್ಟಿನಲ್ಲಿ ಯಾವುದೇ ಭದ್ರತೆ ಪಡೆಯದೆ ನೀಡುವ ಪಿಎಂ ಸ್ವನಿಧಿ ಸಣ್ಣ ಸಾಲ ಯೋಜನೆ ಜಾರಿಯಲ್ಲಿ ಉಡುಪಿ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ 3,491 ಸಾಲ ನೀಡುವ ಗುರಿಗೆ 3,409 ಸಾಲ ನೀಡಿ, ಶೇ. 97ರಷ್ಟು ಸಾಧನೆ ಮಾಡಿದೆ. ರಾಯಚೂರು ಜಿಲ್ಲೆ 7,752 ಗುರಿಗೆ 6,709 ಸಾಧನೆ (ಶೇ. 86.55) ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದೆ.
  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಚಿನೂಕ್ ಹೆಲಿಕಾಪ್ಟರ್ ಬಳಸಿ ಚಿತ್ರದುರ್ಗದಲ್ಲಿ ತನ್ನ ಅಭಿವೃದ್ಧಿ ಹಂತದಲ್ಲಿರುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಲ್ಯಾಂಡಿಂಗ್ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿತು. ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ಆರ್ಎಲ್ವಿ, ಆರ್ಎಲ್ವಿ ಎಲ್ಇಎಕ್ಸ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ , ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಭಾರತೀಯ ವಾಯುಪಡೆ – ಎಂಸಿಸಿ ಕಾರ್ಯಾಚರಣೆಯನ್ನು ನೆರವೇರಿಸಿದವು.
  • ರಕ್ಷಣಾ ಸಾಮಗ್ರಿ ರಫ್ತಿನಲ್ಲಿ ಭಾರತ ಮಹತ್ತರ ಸಾಧನೆ ಗೈದಿದ್ದು, 2022-23ನೇ ಸಾಲಿನಲ್ಲಿ 15,920 ಕೋಟಿ ರೂ ಮೌಲ್ಯದ ರಕ್ಷಣಾ ಪರಿಕರಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. “2022 – 2023ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ವಲಯದ ರಫ್ತು ಸಾರ್ವಕಾಲಿಕ ದಾಖಲೆಯಾಗಿದೆ.
  • ವಿಶ್ವ ಆಟಿಸಂ ಜಾಗೃತಿ ದಿನವನ್ನು ಏಪ್ರಿಲ್ 2 ರಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007 ರಲ್ಲಿ ಅಂಗೀಕರಿಸಿ, ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನಾಗಿ ಅಳವಡಿಸಿಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಯಿತು. ಮೊದಲ ವಿಶ್ವ ಆಟಿಸಂ ಜಾಗೃತಿ ದಿನವನ್ನು ಏಪ್ರಿಲ್ 2, 2008 ರಂದು ಆಚರಿಸಲಾಯಿತು.