Published on: November 1, 2023

ಚುಟುಕು ಸಮಾಚಾರ : 30 ಅಕ್ಟೋಬರ್ 2023

ಚುಟುಕು ಸಮಾಚಾರ : 30 ಅಕ್ಟೋಬರ್ 2023

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವವರ ಪೈಕಿ  ಶೇ.70ರಷ್ಟು ಮಂದಿ  ರಸ್ತೆ ಅಪಘಾತಗಳಿಂದ    ಊನಕ್ಕೆ  ಒಳಗಾಗುತ್ತಿದ್ದಾರೆ.  ಈ ನಿಟ್ಟಿನಲ್ಲಿ  ವಿಶೇಷ ಚೇತನರ  ಕಲ್ಯಾಣ ಇಲಾಖೆಯು ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮೊದಲಿಗೆ ಬೆಂಗಳೂರು ಗ್ರಾಮಾಂತರ  ಜಿಲ್ಲೆಯಲ್ಲಿ  ಅಡ್ಪಾ  ((ADPA) ಅಪಘಾತಗಳಿಂದ ಆಗುವ  ಅಂಗವಿಕಲತೆಯ  ಮುನ್ನೆಚ್ಚರಿಕೆ  ಕಾರ್ಯಕ್ರಮ)  ಎನ್ನುವ ವಿಶೇಷ ಕಾರ್ಯಕ್ರಮ ರೂಪಿಸಿದೆ.
  • ಮೈಸೂರಿನಲ್ಲಿ ನಡೆಯುವ ದಸರಾ ಜಂಬೂ ಸವಾರಿ ಉತ್ಸವಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಶಿವಗಂಗೆ ಕ್ಷೇತ್ರದ ಇತಿಹಾಸ ಸಾರುವಂತಹ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಈ ಸ್ತಬ್ದ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಸ್ತಬ್ಧಚಿತ್ರದಲ್ಲಿ ಮೊದಲಿಗೆ ಅಸೀನವಾಗಿರುವ ನಂದಿ, ಅದರ ಹಿಂದೆ ಶಿವ ಪಾರ್ವ ತಿಯಮೂರ್ತಿಗಳಿವೆ. ನಂತರ ಹೊನ್ನಮ್ಮದೇವಿ, ಗಂಗಾಧರೇಶ್ವರ ಸ್ವಾಮಿ ದೇಗುಲ, ಬೆಟ್ಟದ ನಡುವಿರುವ ಗೋಪುರಗಳು, ಬೆಟ್ಟದ ತುದಿಯಲ್ಲಿರುವ ಬಸವಣ್ಣನ ವಿಗ್ರಹ, ಕುದುರೆ ಮೆಲೆಹೊರಟಿರುವ ನಾಡಪ್ರಭು ಕೆಂಪೇಗೌಡರ ಚಿತ್ರ, ಸುತ್ತಮುತ್ತಲ ಬೆಟ್ಟದ ವಿಹಂಗಮ ನೋಟ, ಕೊನೆಯಲ್ಲಿ ನಂದಿ ಆಸೀನವಾಗಿರುವ ಪ್ರವೇಶದ್ವಾರದ ಚಿತ್ರವಿದೆ. ಹಿಂದೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಶಿವಗಂಗೆ ಕ್ಷೇತ್ರ ಸ್ತಬ್ಧಚಿತ್ರಕ್ಕಾಗಿ ಆಯ್ಕೆಯಾಗಿತ್ತು.
  • ಭಾರತದ ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ಯೋಜನೆಯಡಿ ಹೊಸದಾಗಿ ಎರಡು ಮಾದರಿಯ ಗರ್ಭ ನಿರೋಧಕ ವೈದ್ಯಕೀಯ ತಂತ್ರಗಾರಿಕೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ‘ಸಿಂಗಲ್ ರಾಡ್ ಸಬ್ ಡೆರ್ಮಲ್ ಇಂಪ್ಲಾಂಟ್’ ಎಂಬ ಪದ್ಧತಿಯನ್ನು ಬೆಂಗಳೂರು ಹಾಗೂ ಬೀದರ್ ನಲ್ಲಿ ಜಾರಿಗೊಳಿಸಲಾಗಿದೆ. ‘ಸಬ್ ಕ್ಯೂಟಾನಿಯಸ್ ಇಂಜೆಕ್ಟಬಲ್ ಕಾಂಟ್ರಾಸೆಪ್ಟಿವ್’ ಎಂಬ ಹೆಸರಿನ ಮತ್ತೊಂದು ಪದ್ಧತಿಯನ್ನು ಯಾದಗಿರಿ ಹಾಗೂ ಮೈಸೂರಿನಲ್ಲಿ ಜಾರಿಗೊಳಿಸಲಾಗಿದೆ.
  • ‘ಆರ್‌ಐಎಸ್‌ಯುಜಿ ಚುಚ್ಚುಮದ್ದು: ಪುರುಷರಿಗಾಗಿ ಸಿದ್ಧಪಡಿಸಿರುವ ಗರ್ಭ ನಿರೋಧಕ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆ ಜಗತ್ತಿನಲ್ಲೇ ಮೊದಲ ಬಾರಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂ ಆರ್), ರಿವರ್ಸಿಬಲ್ ಇನ್ಹೆಬಿಲೆಷನ್ ಆಫ್ ಸ್ಪರ್ಮ್ ಅಂಡರ್ ಗೈಡೆನ್ಸ್ (‘ಆರ್‌ಐಎಸ್‌ಯುಜಿ ಚುಚ್ಚುಮದ್ದು) ಎಂಬ ಹೆಸರಿನಲ್ಲಿ ಪ್ರಯೋಗ ನಡೆಸಿದ್ದು, ಇದು ಸುರಕ್ಷಿತ ಬಳಕೆಯನ್ನು ಹೊಂದಿದೆ. ಅಲ್ಲದೇ ಇದು ಗರ್ಭವನ್ನು ತಡೆಯುವಲ್ಲಿ ಶೇ 99.02ರಷ್ಟು ಪರಿಣಾಮಕಾರಿಯಾಗಿದೆ. ಭಾರತೀಯ ಪ್ರಧಾನ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ಒಪ್ಪಿಗೆಯೊಂದಿಗೆ ಐಸಿಎಂಆರ್ ಈ ಚುಚ್ಚುಮದ್ದಿನ ಮೂರನೇ ಹಂತದ ಪ್ರಯೋಗವನ್ನು ದೆಹಲಿ, ಉದಮ್ಪುರ, ಲುಧಿಯಾನ, ಜೈಪುರ್ ಮತ್ತು ಖರಗ್ ಪುರದಲ್ಲಿ ನಡೆಸಿತು. ಆರ್‌ಐಎಸ್‌ಯುಜಿ ಚುಚ್ಚುಮದ್ದು ಭಾಗಿದಾರ ಪುರಷರಲ್ಲಿ ವೀರ್ಯದ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಶೇ 97.3ರಷ್ಟು ಪರಿಣಾಮಕಾರಿ ಸಾಧನೆ ತೋರಿದೆ. ಇದೇ ವೇಳೆ ಗರ್ಭ ತಡೆಯುವಲ್ಲಿ ಶೇ 99.02ರಷ್ಟು ಪರಿಣಾಮಕಾರಿಯಾಗಿದೆ. ಈ ಆರ್ಐಎಸ್ಯುಜಿಯನ್ನು ಹಾರ್ಮೋನಲ್ ಇಂಜೆಕ್ಷನ್ ರೀತಿ ರಕ್ತ ನಾಳದಲ್ಲಿ ಚುಚ್ಚುವ ಅಗತ್ಯವಿಲ್ಲ. ಇದನ್ನು ದೇಹ ಭಾಗದಲ್ಲಿ ಕೊಡಲಾಗುವುದು.
  • ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್ಐ) ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸೂಚ್ಯಂಕದಲ್ಲಿ ಒಟ್ಟು 125 ದೇಶಗಳಲ್ಲಿ ಭಾರತವು 68 (ಗಂಭೀರ ಎಂದು ಸೂಚಿಸುತ್ತದೆ) ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿದೆ. ಇದು ಭಾರತದ ಈವರೆಗಿನ ಕನಿಷ್ಠ ರ್ಯಾಂ ಕ್. 2022ರ ಸೂಚ್ಯಂಕದಲ್ಲಿ ದೇಶವು 107ನೇ ಸ್ಥಾನದಲ್ಲಿ ಇತ್ತು. ಇದು  ಜಾಗತಿಕ ಹಸಿವು ಸೂಚ್ಯಂಕದ 18 ನೇ ಆವೃತ್ತಿಯಾಗಿದೆ (2006 ರಿಂದ).
  • ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿಯು ವಾರ್ಷಿಕ ವರದಿಯಾಗಿದೆ (ಪೀರ್-ರಿವ್ಯೂಡ್) ಐರ್ಲೆಂಡ್ನ ಕನ್ಸರ್ನ್ ವರ್ಲ್ಡ್ವೈಡ್ ಮತ್ತು ವೆಲ್ತುಂಗರ್ಹಿಲ್ಫ್ (ಜರ್ಮನ್ ಲಾಭರಹಿತ ಸಂಸ್ಥೆ) ಪ್ರಕಟಿಸಿದೆ.  ಬೆಲಾರಸ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಚಿಲಿ, ಚೀನಾ ಅಗ್ರ ಶ್ರೇಯಾಂಕದ ದೇಶಗಳಲ್ಲಿವೇ  (ಅಂದರೆ, ಕಡಿಮೆ ಮಟ್ಟದ ಹಸಿವು) ಪ್ರಪಂಚದಲ್ಲಿ ಅತಿ ಹೆಚ್ಚು ಹಸಿವು ಇರುವ ಪ್ರದೇಶಗಳೆಂದರೆ ದಕ್ಷಿಣ ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾ. ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (102ನೇ), ಬಾಂಗ್ಲಾದೇಶ (81ನೇ), ನೇಪಾಳ (69ನೇ), ಮತ್ತು ಶ್ರೀಲಂಕಾ (60ನೇ) ಭಾರತಕ್ಕಿಂತ ಉತ್ತಮ ಅಂಕ ಗಳಿಸಿವೆ.
  • ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು ಮುಂಬೈನಲ್ಲಿ ಜಾಗತಿಕ ಸಾಗರ  ಇಂಡಿಯಾ ಶೃಂಗಸಭೆ 2023ರ 3ನೇ ಆವೃತ್ತಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಯ ನೀಲನಕ್ಷೆಯಾದ ‘ಅಮೃತ ಕಾಲದ ಮುನ್ನೋಟ 2047’ ಅನ್ನು ಸಹ ಅನಾವರಣಗೊಳಿಸಲಾಯಿತು.