Published on: January 30, 2023

ಚುಟುಕು ಸಮಾಚಾರ – 30 ಜನವರಿ 2023

ಚುಟುಕು ಸಮಾಚಾರ – 30 ಜನವರಿ 2023

  • 1960ರ ಸೆಪ್ಟೆಂಬರ್ನ ಸಿಂಧೂ ಜಲ ಒಪ್ಪಂದದ (ಐಡಬ್ಲ್ಯುಟಿ) ಅನುಷ್ಠಾನದ ಬಗ್ಗೆ ಪಾಕಿಸ್ತಾನವು “ನಿರುತ್ಸಾಹ” ತೋರಿದ ನಂತರ ಅದರ ಮಾರ್ಪಾಡಿಗಾಗಿ ಭಾರತವು ಒಪ್ಪಂದದ ನಿಬಂಧನೆಗಳ ಪ್ರಕಾರ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ.
  • ಇತರೆ ಪ್ರವಾಸಿ ತಾಣಗಳಲ್ಲಿ ಜೋಶಿಮಠದಂತಹ ವಿಪತ್ತನ್ನು ತಡೆಯಲು ಪ್ರವಾಸೋದ್ಯಮ ಸಚಿವಾಲಯವು ಎಲ್ಲಾ ಪ್ರವಾಸಿ ತಾಣಗಳಲ್ಲಿ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಭೂಮಿ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ. ಅಧ್ಯಯನದ ವರದಿ ಆಧರಿಸಿ ಮುಂದಿನ ಅಭಿವೃದ್ಧಿ ಕಾರ್ಯಗಳು ಹಾಗೂ ಅನುಮತಿಗಳನ್ನು ನೀಡಲು ಪ್ರವಾಸೋದ್ಯಮ ಸಚಿವಾಲಯವು ಚಿಂತನೆ ನಡೆಸುತ್ತಿದೆ.
  • ರಾಷ್ಟ್ರಪತಿಯವರ ಅಧಿಕೃತ ನಿವಾಸ ರಾಷ್ಟ್ರಪತಿ ಭವನದಲ್ಲಿರುವ ಜನಪ್ರಿಯ ಮೊಘಲ್ ಗಾರ್ಡನ್ ಗೆ ಅಮೃತ ಉದ್ಯಾನ ಎಂದು ಮರುನಾಮಕರಣ ಮಾಡಲಾಗಿದೆ.
  • ಜಾಗತಿಕ ತಾಪಮಾನ ಏರಿಕೆಯಂತಹ ಪರಿಸ್ಥಿತಿಯ ನಡುವೆಯೇ ವಿಜ್ಞಾನಿಗಳು ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ‘ಜಾಗತಿಕವಾಗಿ ಸದ್ಯ ಜಾರಿಯಲ್ಲಿರುವ ವಾಯುಮಾಲಿನ್ಯ ತಡೆ ನೀತಿಗಳು ಹೀಗೆ ಮುಂದುವರೆದರೆ 2066ರ ಹೊತ್ತಿಗೆ ಅಂಟಾರ್ಕ್ಟಿಕಾದ ಓಝೋನ್ ಪದರವು 1980ರ ಸ್ಥಿತಿಗೆ(ಓಜೋನ್ ರಂಧ್ರದ ಕಂಡುಬಂದ ಸಮಯ) ಮರಳಲಿದೆ. 2045ರ ಹೊತ್ತಿಗೆ ಆರ್ಕ್ಟಿಕ್ನಲ್ಲಿ ಮತ್ತು 2040ರ ಹೊತ್ತಿಗೆ ಜಗತ್ತಿನ ಇತರೆಡೆ ಓಝೋನ್ ಪದರ ಸಾಮಾನ್ಯ ಸ್ಥಿತಿಗೆ ಮರಳಲಿದೆ’
  • ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರು ಹಾಗೂ ಸಲಹೆಗಾರರನ್ನಾಗಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಹ್ಮದಾಬಾದ್ ಫ್ರಾಂಚೈಸಿ 5 ತಂಡಗಳ ಪೈಕಿ ಅತಿ ದುಬಾರಿಯ ತಂಡ ಎಂಬ ಹೆಗ್ಗಳಿಕೆಗ ಪಾತ್ರವಾಗಿತ್ತು. ಈ ತಂಡವು ಅದಾನಿ ಸ್ಪೋರ್ಟ್ಸ್ ಲೈನ್ ಗೆ ಸೇರಿದೆ.