Published on: June 1, 2023

ಚುಟುಕು ಸಮಾಚಾರ : 30 ಮೇ 2023

ಚುಟುಕು ಸಮಾಚಾರ : 30 ಮೇ 2023

  • ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ‘ಗ್ರಾಮ ಆರೋಗ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆಯನ್ನು ವಿಸ್ತರಿಸಿ ಗ್ರಾಮ ಆರೋಗ್ಯ ರೂಪಿಸಲಾಗಿದೆ. ಕೂಲಿಕಾರರಿಗೆ ಆರೋಗ್ಯ, ಸುರಕ್ಷತೆಯ ದೃಷ್ಟಿಯಿಂದ ಗ್ರಾಮೀಣ ಆಯುಕ್ತಾಲಯದಿಂದ ಕೂಲಿಕಾರರಿಗೆ ‘ಆರೋಗ್ಯ ಅಮೃತ ಅಭಿಯಾನ’ದ ಅಡಿ ಆರೋಗ್ಯ ತಪಾಸಣೆ ನಡೆಯಲಿದೆ. ರಾಷ್ಟ್ರೀಯ ಆರೋಗ್ಯ ಮಿಷನ್, ಕೆಎಚ್ಪಿಟಿ (ಕರ್ನಾಟಕ ಆರೋ ಗ್ಯ ಪ್ರಚಾರ ಟ್ರಸ್ಟ್) ಸಹಯೋಗದಲ್ಲಿಈ ಆರೋಗ್ಯ ತಪಾಸಣೆ ನಡೆಯಲಿದೆ.
  • ‘ಸೆಂಟ್ರಲ್ ವಿಸ್ತಾ’ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಾಯಿತು. ಭವನವು ತ್ರಿಕೋನಾಕೃತಿಯಲ್ಲಿದೆ. ವಿನ್ಯಾಸಕಾರರು: ಎಚ್ಸಿಪಿ ಡಿಸೈನ್ ಪ್ಲ್ಯಾನಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಪ್ರೈ.ಲಿ. ಬಿಮಲ್ ಪಟೇಲ-ಕಟ್ಟಡದ ವಾಸ್ತುಶಿಲ್ಪಿ. ನಿರ್ಮಾಣ: ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ಒಟ್ಟು ವಿಸ್ತೀರ್ಣ: 64,500 ಚ.ಮೀ.
  • ನ್ಯಾವಿಗೇಷನ್ (ಪಥದರ್ಶ ಕ) ಉಪಗ್ರಹ ‘ಎನ್ವಿಎಸ್–01’ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸುಮಾರು 19 ನಿಮಿಷಗಳಲ್ಲಿ 251 ಕಿಮೀ ಎತ್ತರದ ಜಿಯೋ ಸಿಂಕ್ರೊನಸ್ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹವನ್ನು ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.
  • ಗುರುವಿನ ಚಂದ್ರಗಳ ಮೇಲ್ಮೈನಲ್ಲಿರುವ ಜೀವಿಗಳ ಕುರುಹು ಪತ್ತೆಗಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಇದನ್ನು ಸಿದ್ದಪಡಿಸಿದೆ. ಏರಿಯನ್-5 ರಾಕೆಟ್ ಮೂಲಕ ಜ್ಯೂಸ್ ನೌಕೆ ನಭಕ್ಕೆ ಚಿಮ್ಮಲಿದೆ.