Published on: February 8, 2024

ಚುಟುಕು ಸಮಾಚಾರ : 7 ಫೆಬ್ರವರಿ 2024

ಚುಟುಕು ಸಮಾಚಾರ : 7 ಫೆಬ್ರವರಿ 2024

  • ಕರ್ನಾಟಕದ ಮುಖ್ಯಮಂತ್ರಿ ಅವರು 100 ಹೊಸವಿನ್ಯಾಸ ಹಾಗೂ ಹೊಸಬ್ರಾಂಡ್ನ ‘ಪಾಯಿಂಟ್ ಟು ಪಾಯಿಂಟ್ ಎಕ್ಸ್ಪ್ರೆಸ್‘– ‘ಅಶ್ವಮೇಧ’ ಕರ್ನಾಟಕ ಸಾರಿಗೆ ಬಸ್ಗಳಿಗೆ ಚಾಲನೆ ನೀಡಿದರು. ಅಶ್ವಮೇಧ (ಕ್ಲಾಸಿಕ್) ಬಸ್ ಅನ್ನು ‘ಪ್ರಯಾಣದ ಮರು ಕಲ್ಪನೆ’ ಎಂಬ ಘೋಷವಾಕ್ಯದೊಂದಿಗೆ ಪರಿಚಯಿಸಲಾಗುತ್ತಿದೆ. ಈ ಅಶ್ವಮೇಧ ಕ್ಲಾಸಿಕ್ ಬಸ್​ಗಳಲ್ಲೂ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
  • ಭಾರತೀಯ ವಾಯುಪಡೆಯು 17ನೇ ಫೆಬ್ರವರಿ 2024 ರಂದು ಜೈಸಲ್ಮೇರ್ ಬಳಿಯ ಪೋಖ್ರಾನ್ ಏರ್ ಟು ಗ್ರೌಂಡ್ ರೇಂಜ್‌ನಲ್ಲಿ ವಾಯು ಶಕ್ತಿ-24 ವ್ಯಾಯಾಮವನ್ನು ನಡೆಸಲಿದೆ. ಭಾರತೀಯ ವಾಯುಪಡೆಯು ವಾಯು ಶಕ್ತಿ, ಗಗನ್ ಶಕ್ತಿ ಮತ್ತು ತರಂಗ್ ಶಕ್ತಿ ಎಂಬ ಮೂರು ದೊಡ್ಡ ಪ್ರಮಾಣದ ಯುದ್ಧದ ವ್ಯಾಯಾಮಗಳನ್ನು ನಡೆಸಲು ನಿರ್ಧರಿಸಿದೆ.
  • ಭಾರತದ ಪ್ರಧಾನಮಂತ್ರಿಯವರು ಗೋವಾದಲ್ಲಿ ಇಂಡಿಯಾ ಎನರ್ಜಿ ವೀಕ್ (IEW) 2024 ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ONGC) ಸೀ ಸರ್ವೈವಲ್ ಸೆಂಟರ್ ಅನ್ನು ಉದ್ಘಾಟಿಸಿದರು ಮತ್ತು ವಿಕ್ಷಿತ್ ಭಾರತ್, ವಿಕ್ಷಿತ್ ಗೋವಾ 2047 ಕಾರ್ಯಕ್ರಮದಲ್ಲಿ ಭಾಗವಹಿಸಿದರು.
  • ಅಮೆರಿಕದ ಲಾಸ್ ಏಂಜಲೀಸನಲ್ಲಿ ನಡೆದ 66 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ‘ದಿಸ್ ಮೂಮೆಂಟ್’ ಆಲ್ಬಮ್ಗಾಗಿ ಗಾಯಕ ಶಂಕರ್ ಮಹದೇವನ್, ತಬಲ ವಾದಕ ಜಾಕೀರ್ ಹುಸೇನ್, ಗಿಟಾರಿಸ್ಟ್ ಜಾನ್ ಮೆಕ್ಲಾಲಿನ್, ಪಿಟೀಲು ವಾದಕ ಗಣೇಶ್ ರಾಜಗೋಪಾಲನ್, ತಾಳ ವಾದಕ ವಿ.ಸೆಲ್ವ ಗಣೇಶ್ ಅವರನ್ನೊಳಗೊಂಡ ಫ್ಯೂಷನ್ ಬ್ಯಾಂಡ್ ‘ಶಕ್ತಿ’, ‘Best Global Music Album’ ಪ್ರಶಸ್ತಿ ಪಡೆದಿದೆ. ಟೇಲರ್ ಸ್ವಿಫ್ಟ್ ಅವರು “ಮಿಡ್ನೈಟ್ಸ್” ಆಲ್ಬಮಗಾಗಿ ವರ್ಷದ ಆಲ್ಬಮ್ ಪ್ರಶಸ್ತಿಯನ್ನು ಅನ್ನು ಪಡೆದುಕೊಂಡರು, ವರ್ಗದಲ್ಲಿ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದ ಮೊದಲ ವ್ಯಕ್ತಿಯಾಗಿದ್ದಾರೆ.
  • ಇತ್ತೀಚೆಗೆ, ಹಿರಿಯ ನಾಯಕ, ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಲಾಲ್ ಕೃಷ್ಣ ಅಡ್ವಾಣಿ ಅವರು 2002 ರಿಂದ 2004 ರವರೆಗೆ ಭಾರತದ 7 ನೇ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಗೃಹ ಸಚಿವರಾಗಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ನವೆಂಬರ್ 8, 1927 ರಂದು ಕರಾಚಿಯಲ್ಲಿ (ಇಂದಿನ ಪಾಕಿಸ್ತಾನ) ಜನಿಸಿದ ಅವರು 1942 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು
  • ಭಾರತದ ಪಾವತಿ ಮಾದರಿ ಯುಪಿಐ (Unified Payments Interface) ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಖ್ಯಾತಿ ಗಳಿಸುತ್ತಿದ್ದು, ಇದೀಗ ಫ್ರಾನ್ಸ್ ನಲ್ಲೂ ಕೂಡ UPI ಪಾವತಿ ಸೇವೆ ಆರಂಭಗೊಂಡಿದೆ. ಭಾರತವು ಔಪಚಾರಿಕವಾಗಿ ಪ್ಯಾರಿಸ್ ಪ್ರವಾಸೋಧ್ಯೋಮದ ಕೇಂದ್ರ ಬಿಂದು ಐಫೆಲ್ ಟವರ್ ನಲ್ಲಿ ತನ್ನ ಯುಪಿಐ ಸೇವೆಯನ್ನು ಆರಂಭಿಸಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಭಾರತೀಯ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ಯುಪಿಐ ಎನ್ನುವುದು ಎನ್‌ಪಿಸಿಐ ಪ್ರಕಾರ, ಹಲವಾರು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ (ಯಾವುದೇ ಭಾಗವಹಿಸುವ ಬ್ಯಾಂಕ್‌ನ) ಕಾರ್ಯಗತಗೊಳಿಸುವ ವ್ಯವಸ್ಥೆಯಾಗಿದೆ.