Published on: April 9, 2024

ಚುಟುಕು ಸಮಾಚಾರ : 8 ಏಪ್ರಿಲ್ 2024

ಚುಟುಕು ಸಮಾಚಾರ : 8 ಏಪ್ರಿಲ್ 2024

  • ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಕಡೆಬಾಗಿಲು ಬೆಟ್ಟದ ಮೇಲ್ಭಾಗದಲ್ಲಿ 1527ರ ವಿಜಯನಗರ ಕಾಲದ ಶಾಸನ ಪತ್ತೆಯಾಗಿದ್ದು, ಶಾಸನವು ಎಂಟು ಸಾಲುಗಳಲ್ಲಿದ್ದು, ಆನೆಗೊಂದಿಯ ಮಹಾಪ್ರಧಾನ ಲಕ್ಕಿಶೆಟ್ಟಿಯ ಮಗನಾದ ವಿಜಯನಾಥನು ಬೆಟ್ಟದ ಮೇಲಿನ ವೀರಭದ್ರ ದೇವರನ್ನು ಆರಾಧಿಸಿದ ಸಂಗತಿ ಬರೆಯಲಾಗಿದೆ.
  • ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಆರ್ಥಿಕ ವರ್ಷದಲ್ಲಿ ₹01 ಕೋಟಿ ಆದಾಯ ಗಳಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ಮೊದಲ ದೇವಸ್ಥಾನವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುತ್ತಿಗೆ, ತೋಟದ ಉತ್ಪನ್ನ, ಕಟ್ಟಡ ಬಾಡಿಗೆ, ಕಾಣಿಕೆ, ಕಾಣಿಕೆ ಹುಂಡಿ, ಹರಕೆ ಸೇವೆ, ಅನುದಾನ, ಶಾಶ್ವತ ಸೇವೆಗಳಿಂದ ಆದಾಯ ಬರುತ್ತಿದೆ.
  • ಅಪಘಾತ ತಪ್ಪಿ ಸಲು ಕೆಎಸ್ಆರ್ಟಿಸಿ ಚಾಲಕರಿಗೆ ‘ಉಸಿರು’ ತಪಾಸಣೆ: ಕುಡಿತದಿಂದ ಯಾವುದೇ ಅಪಘಾತ ಉಂಟಾಗಬಾರದು ಎಂಬ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕರಿಗೆ ಕರ್ತವ್ಯದ ಮಧ್ಯೆ ‘ಉಸಿರು ತಪಾಸಣೆ’ ನಡೆಸಲು ನಿಗಮ ನಿರ್ಧರಿಸಿದೆ. ಅಮಲು ಪದಾರ್ಥ ಸೇವಿಸಿ ಬಸ್ ಚಲಾಯಿಸುತ್ತಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ರಾತ್ರಿ ಸಂಚರಿಸುವ ಬಸ್ಗಳ ಚಾಲಕರಿಗೆ ಮಾರ್ಗ ಮಧ್ಯೆ ನಿಗದಿಪಡಿಸಿದ ಸ್ಥಳಗಳಲ್ಲಿ ಪ್ರತಿದಿನ ತಪ್ಪದೇ ‘ಉಸಿರು ತಪಾಸಣಾ ಯಂತ್ರಗಳ’ ಮೂಲಕ ‘ಮದ್ಯಪಾನ ತಪಾಸಣೆ’ ಮಾಡಬೇಕು. ಚಾಲಕರ ಸಂಖ್ಯೆ ಮತ್ತು ತಪಾಸಣೆಯ ಫಲಿತಾಂಶವನ್ನು ಕೇಂದ್ರ ಕಚೇರಿಯ ಕಂಟ್ರೋಲ್ ರೂಂ ಗೆ ರವಾನಿಸಬೇಕು ಎಂದು ನಿಗಮದ ಎಲ್ಲ ತನಿಖಾ ಸಂಯೋಜಕರಿಗೆ ಸೂಚನೆ ನೀಡಲಾಗಿದೆ.
  • 1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದರ ಸ್ಮರಣಾರ್ಥ ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. 2024ನೇ ಸಾಲಿನ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ ‘ನನ್ನ ಆರೋಗ್ಯ ನನ್ನ ಹಕ್ಕು‘
  • Numbeo ಎಂಬ ಆನ್ಲೈನ್ ಡಾಟಾ ಬೇಸ್ ಸಂಸ್ಥೆ, ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ಪ್ರಮುಖ ನಗರಗಳು ಯಾವುವು ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ವೆನಿಜುವೆಲಾದ ಕ್ಯಾರ್ಕಸ್ ನಗರ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಎರಡನೇ ಸ್ಥಾನ ಪಡೆದಿದೆ. ಜಾಗತಿಕವಾಗಿ ದೆಹಲಿ 70 ನೇ ಸ್ಥಾನ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಗರ ಎಂದು ಗುರುತಾಗಿದೆ. ವರದಿ ಪ್ರಕಾರ ಬೆಂಗಳೂರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಂಬರ್ 1 ನಗರವಾಗಿ ಗುರುತಾಗಿದ್ದು ಜಾಗತಿಕವಾಗಿ 102ನೇ ಸ್ಥಾನ ಪಡೆದಿದೆ
  • 92ನೇ ವಯಸ್ಸಲ್ಲಿದಲ ಮತದಾನ: ವಿಶೇಷ ಪ್ರಕರಣವೊಂದರಲ್ಲಿ, ಜಾರ್ಖಂಡ್ ರಾಜ್ಯ ರಾಜಧಾನಿ ರಾಂಚಿಯಿಂದ 450 ಕಿ.ಮೀ. ದೂರ ಇರುವ ಸಾಹಿಬ್ಗಂಜ್ ಜಿಲ್ಲೆಯ ಮುಂದ್ರೊ ಪ್ರದೇಶದ 92 ವರ್ಷದ ಅಂಗವಿಕಲ ವ್ಯಕ್ತಿ ಖಲೀಲ್ ಅನ್ಸಾರಿ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.
  • ಯುಪಿಐ ಆಧಾರಿತ ನಗದು ಠೇವಣಿ ಸೌಲಭ್ಯ: ಎಟಿಎಂ ಕೇಂದ್ರಗಳಲ್ಲಿ ಯುಪಿಐ ಆಧಾರಿತ ನಗದು ಠೇವಣಿ ಸೌಲಭ್ಯವನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ನಿರ್ಧರಿಸಿದೆ. ಇನ್ನ ಬಿಲ್ ಪಾವತಿ, ವ್ಯಾಪಾರ ವಹಿವಾಟು ಮತ್ತು ಇತರೆ ಡಿಜಿಟಲ್ ಪಾವತಿಗಳಿಗೆ ಸದ್ಯ ಯುಪಿಐ ಬಳಸಲಾಗುತ್ತಿದೆ. ಪ್ರಸ್ತುತ ಎಟಿಎಂ ಯಂತ್ರಗಳ ಮೂಲಕ ಡೆಬಿಟ್ ಕಾರ್ಡ್‌ ಬಳಸಿ ನಗದು ಠೇವಣಿ ಮಾಡಲಾಗುತ್ತಿದೆ. ಈ ವೇಳೆ ಗ್ರಾಹಕರು ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸ ಬೇಕಿದೆ. ಈ ಹೊಸ ವ್ಯವಸ್ಥೆಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಜೊತೆಗೆ, ಬ್ಯಾಂಕ್ಗಳ ಕರೆನ್ಸಿ ನಿರ್ವಹಣಾ ಪ್ರಕ್ರಿಯೆಯು ಸುಗಮವಾಗಲಿದೆ.
  • ರಷ್ಯಾದ ಸೊಯುಜ್ ಎಂ ಎಸ್–24 ಅಂತರಿಕ್ಷ ನೌಕೆ: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಯಶಸ್ವಿ ಭೇಟಿ ಬಳಿಕ ಭೂಮಿಗೆ ವಾಪಾಸಾಗುತ್ತಿದ್ದ, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಿದ್ದ ರಷ್ಯಾದ ‘ಸೊಯುಜ್’ ಅಂತರಿಕ್ಷ ನೌಕೆ ಕುಜಕಿಸ್ತಾನದ ನಿರ್ಜನ ಪ‍್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ. ಸೊಯುಜ್ ಎಂ ಎಸ್–24 ಹೆಸರಿನ ಈ ಅಂತರಿಕ್ಷ ನೌಕೆಯಲ್ಲಿ ರಷ್ಯಾದ ಒಲೆಗ್ ನೊವಿಟ್ಸ್ಕೈ, ನಾಸಾದ ಲೊರಲ್ ಒಹರ ಮತ್ತು ಬೆಲಾರಸ್ನ ರಷ್ಯಾದ ಒಲೆಗ್ ನೊವಿಟ್ಸ್ಕೈ ಇದ್ದರು. ‘ಸೊಯುಜ್’ ಅಂತರಿಕ್ಷ ನೌಕೆಯನ್ನು ಮಾ.23ರಂದು ಕಳುಹಿಸಲಾಗಿತ್ತು.