Published on: October 20, 2023

ಚುಟುಕು ಸಮಾಚಾರ:18 ಅಕ್ಟೋಬರ್ 2023

ಚುಟುಕು ಸಮಾಚಾರ:18 ಅಕ್ಟೋಬರ್ 2023

  • ಕರ್ನಾಟಕ ರಾಜ್ಯ ಸರ್ಕಾರ ಆಯ್ದ 35 ಗ್ರಾಮ ಪಂಚಾಯಿತಿಗಳಲ್ಲಿ ‘ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಿದೆ. 16ರಿಂ ದ 60 ವರ್ಷದ ಎಲ್ಲ ಗ್ರಾಮಸ್ಥರು ಡಿಜಿಟಲ್ ಸಾಕ್ಷರರಾದರೆ ಅಂತಹ ಗ್ರಾಮವನ್ನು ‘ಸಂಪೂರ್ಣ  ಡಿಜಿಟಲ್ ಸಾಕ್ಷರತಾ ಗ್ರಾಮ’ ಎಂದು ಘೋಷಿಸಲಾಗುತ್ತದೆ. ಕೇರಳದ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ತಂತ್ರಜ್ಞಾನ ಸಾಕ್ಷರತೆ ಘೋಷಣೆಯಾಗಿದೆ. ಇದೇ ಮಾದರಿ ಇಲ್ಲಿ ಅನುಸರಿಸಿ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 35 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ‘ಸಂಪೂರ್ಣ ಡಿಜಿಟಲ್ ಸಾಕ್ಷರತೆ’ ಸಾಧಿಸಲು ರಾಜ್ಯ ಸರ್ಕಾರ ಗುರಿ ಹೊಂದಿದೆ.  ರೈತರು, ಕೂಲಿ ಕಾರ್ಮಿಕರು, ಅಂಗವಿಕಲರು, ಮಹಿಳೆಯರು ಸೇರಿ ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಈ ಎರಡೂ ವರ್ಗದವರಿಗೂ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ತರಬೇತಿ ನೀಡಲಾಗುತ್ತದೆ.
  • ಸೇತು ಬಂಧನ್ ಯೋಜನೆಯಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿಅರುಣಾಚಲ ಪ್ರದೇಶದಲ್ಲಿ 118.50 ಕೋಟಿ ರೂಪಾಯಿ ಮೌಲ್ಯದ ಏಳು ಸೇತುವೆಗಳ ಯೋಜನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
  • UNICEF ನ ಪಾಸ್ಪೋರ್ಟ್ ಟು ಅರ್ನಿಂಗ್ (P2E) ಉಪಕ್ರಮವು ಭಾರತದಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಯುವಜನರನ್ನು ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಉತ್ಪಾದಕತೆಯ ಕ್ಷೇತ್ರಗಳಲ್ಲಿ ಪ್ರಮಾಣೀಕರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
  • ಖ್ಯಾತ ಲೇಖಕಿ ಮತ್ತು ಹೋರಾಟಗಾರ್ತಿ ಶಿವಶಂಕರಿ ಅವರಿಗೆ ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ತಮಿಳಿನಲ್ಲಿ ಬರೆದ ಸೂರ್ಯ ವಂಶಂ ಎಂಬ ಆತ್ಮಚರಿತ್ರೆಗಾಗಿ 2022 ರ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ನೀಡಿ ಗೌರವಿಸಲಾಯಿತು.