Published on: October 28, 2023

ಚುಟುಕು ಸಮಾಚಾರ:28 ಅಕ್ಟೋಬರ್ 2023

ಚುಟುಕು ಸಮಾಚಾರ:28 ಅಕ್ಟೋಬರ್ 2023

  • ಮೈಸೂರಿನ ರಾಮಕೃಷ್ಣನಗರದ ಲಿಂಗಾಂಬುಧಿ ಸಸ್ಯವಿಜ್ಞಾನ ತೋಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉದ್ಯಾನದಲ್ಲಿ ಅಳಿವಿನಂಚಿನಲ್ಲಿರುವ ಹಾಗೂ ಜಿಐ ಟ್ಯಾಗ್ ಹೊಂದಿರುವ ನಂಜನಗೂಡು ರಸಬಾಳೆ ಮುಂತಾದ ಬೆಳೆಗಳನ್ನು ಬೆಳೆದು ಸಂರಕ್ಷಣೆ ಮಾಡಲಾಗಿದೆ. ವಿಶೇಷ: ಮೈಸೂರಿನ ಮೊದಲ ಸಸ್ಯವಿಜ್ಞಾನ ತೋಟವಾಗಿದೆ. ತೋಟಗಾರಿಕೆ ಇಲಾಖೆಯು ಅಭಿವೃದ್ಧಿಪಡಿಸಿರುವ ಈ ಉದ್ಯಾನದಲ್ಲಿ 350ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ಇಲ್ಲಿವೆ. ದೇಶ ವಿದೇಶದ ಸಸ್ಯ ಪ್ರಭೇದಗಳ ಪರಿಚಯ, ಸ್ಥಳೀಯ ವಾತಾವರಣಕ್ಕೆ ಒಗ್ಗಿಸುವಿಕೆ, ಸಂರಕ್ಷಣೆ, ಸಸ್ಯಾಭಿವೃದ್ಧಿ ಮತ್ತು ಪ್ರಸರಣ ಕೈಗೊಳ್ಳುವುದು ಇದರ ಉದ್ದೇಶವಾಗಿದೆ.
  • ಗೋವಾದ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು. • ಗೋವಾದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟ ಅ.26ರಿಂದ ಆರಂಭವಾಗಿ ನ.9ರವರೆಗೆ ನಡೆಯಲಿದೆ.  ದೇಶದ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 43 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಮ್ಯಾಸ್ಕಾಟ್ :’ಮೊಗಾ’ ಹೆಸರಿನ ಮ್ಯಾಸ್ಕಾಟ್  ಭಾರತೀಯ ಕಾಡೆಮ್ಮೆ ಪ್ರತಿನಿಧಿಸುತ್ತದೆ. (ಗೋವಾದ ರಾಜ್ಯ ಪ್ರಾಣಿ : ಭಾರತೀಯ ಕಾಡೆಮ್ಮೆ ‘ಗೌರ್’), ಥೀಮ್: ರಾಷ್ಟ್ರೀಯ ಐಕ್ಯತೆ
  • ವಿಶ್ವದ ಎರಡನೇ ಮತ್ತು ಭಾರತದ ಮೊದಲ ಸೋಲಾರ್ ರೂಫ್ ಸೈಕ್ಲಿಂಗ್ ಟ್ರ್ಯಾಕ್ ಅನ್ನು ಹೈದರಾಬಾದ್‌ನಲ್ಲಿ ತೆರೆಯಲಾಗಿದೆ. ದಕ್ಷಿಣ ಕೊರಿಯಾದ (ವಿಶ್ವದ ಮೊದಲ ಸೌರ ಮೇಲ್ಛಾವಣಿಯ ಸೈಕಲ್ ಟ್ರ್ಯಾಕ್) ಸೌರ ಫಲಕದಿಂದ ಆವೃತವಾದ ಸೈಕಲ್ ಟ್ರ್ಯಾಕ್‌ನಿಂದ ಪ್ರೇರಿತವಾಗಿದೆ. ಇದನ್ನು ಹೆಲ್ತ್‌ವೇ ಸೈಕ್ಲಿಂಗ್ ಟ್ರ್ಯಾಕ್ ಎಂದು ಕರೆಯಲಾಗುತ್ತದೆ. ನಿರ್ದಿಷ್ಟ ಭೌಗೋಳಿಕ ಪ್ರದೇಶ ಗಳಲ್ಲಿಉತ್ಪಾದನೆ ಯಾಗುವ ಕೃಷಿ ಉತ್ಪನ್ನಗಳಿಗೆ ಮತ್ತು ವಸ್ತುಗಳಿಗೆ ನೀಡುವ ಭೌಗೋಳಿಕ ಸೂಚಕ ಸ್ಥಾನಮಾನವನ್ನು ಇತ್ತೀಚೆಗೆ ಗೋವಾದ ಗೋಡಂಬಿಗೆ ನೀಡಲಾಗಿದೆ.
  • ಪ್ರತಿದಿನ ಮನೆಗಳಿಗೆ ದಿನ ಪತ್ರಿಕೆಗಳನ್ನು ಹಂಚಿಕೆ ಮಾಡುವವರನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಜೂನ್ 01, 2020 ರಂದು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (PM SVANIdhi) ಯೋಜನೆಯನ್ನು ಪ್ರಾರಂಭಿಸಿದೆ
  • ಪರಿಸರಕ್ಕೆ ಮಾರಕ ಎಂಬ ಹಿನ್ನೆಲೆಯಲ್ಲಿ ಪೇಪರ್ ಕಪ್ಗಳ ಬಳಕೆ ನಿಷೇಧಿಸಿದ್ದ ಕ್ರಮಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ತಮಿಳುನಾಡಿನಲ್ಲಿ 2019ರಲ್ಲಿಇಂತಹ ಕಪ್ಗಳ ಬಳಕೆಗೆ ಚಾಲನೆ ನೀಡಲಾಗಿತ್ತು. ಪೇಪರ್ ಕಪ್ಗಳು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇವುಗಳ ತಯಾರಿಕೆಗೆ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಮರುಬಳಕೆ ಪ್ರಕ್ರಿಯೆಯೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬ ಐಐಟಿ ವರದಿ ಆಧರಿಸಿ ಬಳಕೆಯನ್ನು ನಿಷೇಧಿಸಲಾಗಿತ್ತು. ‘ಪೇಪರ್ ಕಪ್ಗಳ ಬಳಕೆ ನಿಷೇಧಿಸಲು ವೈಜ್ಞಾನಿಕ ಆಧಾರವಿದೆ. ನಿಷೇಧ ಮಾಡಿರುವುದು ಸರ್ಕಾರದ ನೀತಿಯಾಗಿದ್ದು, ಇದರಲ್ಲಿ ಸಾರ್ವಜಜನಿಕ ಹಿತಾಸಕ್ತಿ ಇದೆ. ಈ ವಿಷಯದಲ್ಲಿಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ ಎಂದು ಪೀಠ ಹೇಳಿದೆ.
  • ಇನ್ಫೋಸಿಸ್ ಸಹ-ಸಂಸ್ಥಾಪಕಿ ಸುಧಾ ಮೂರ್ತಿ ಅವರು ಗ್ಲೋಬಲ್ ಇಂಡಿಯನ್ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆಯಾಗಿದ್ದಾರೆ. ಕೆನಡಾ ಇಂಡಿಯಾ ಫೌಂಡೇಶನ್(CIF ) ಗ್ಲೋಬಲ್ ಇಂಡಿಯನ್ ಪ್ರಶಸ್ತಿಯು ಭಾರತೀಯ ಅಥವಾ ಭಾರತೀಯ ಮೂಲದ ವ್ಯಕ್ತಿಗೆ ನೀಡುವ  ವಾರ್ಷಿಕ ಪ್ರಶಸ್ತಿಯಾಗಿದೆ. ಇದನ್ನು ಕೆನಡಾ ಇಂಡಿಯಾ ಫೌಂಡೇಶನ್ 2008 ರಲ್ಲಿ ಸ್ಥಾಪಿಸಿದ್ದು, ಜಾಗತಿಕ ಭಾರತೀಯ ಡಯಾಸ್ಪೊರಾದಲ್ಲಿ ಶ್ರೇಷ್ಠತೆಯನ್ನು  ಮತ್ತು ಸಾಧನೆಯನ್ನು ಗುರುತಿಸಿ ನೀಡಲಾಗುತ್ತದೆ. 2014  ರಲ್ಲಿ ನಾರಾಯಣ ಮೂರ್ತಿ ಅವರಿಗೂ ಕೂಡ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.2022  ರಲ್ಲಿ ವೇದಾಂತ ಗ್ರೂಪ್ ನ ಅಧ್ಯಕ್ಷರಾದ ಶ್ರೀ ಅನಿಲ್ ಅಗರ್ವಾಲ್ ಅವರಿಗೆ ನೀಡಲಾಗಿತ್ತು. 2008ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡಾ ಅವರಿಗೆ ನೀಡಲಾಗಿತ್ತು.