Published on: February 19, 2024

ಚುನಾವಣಾ ಬಾಂಡ್ ಅಸಾಂವಿಧಾನಿಕ

ಚುನಾವಣಾ ಬಾಂಡ್ ಅಸಾಂವಿಧಾನಿಕ

ಸುದ್ದಿಯಲ್ಲಿ ಏಕಿದೆ? ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಸಂವಿಧಾನದ ವಿಧಿ 19(1)(a) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾದುದು ಎಂದು ಹೇಳಿದೆ.

ಮುಖ್ಯಾಂಶಗಳು

  • ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಎಲ್ಲಾ ವಿವರಗಳನ್ನು ಮಾರ್ಚ್ 6, 2024 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೂಚಿಸಿದೆ.
  • ಈ ಯೋಜನೆಯಡಿ ನೀಡಿದ ದೇಣಿಗೆಗಳು 100% ತೆರಿಗೆ ವಿನಾಯಿತಿಯನ್ನು ಅನುಭವಿಸಿದವು.

ಚುನಾವಣಾ ಬಾಂಡ್ ಎಂದರೇನು?

  • ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಂದು ಸಾಧನ.
  • 2017–18ರ ಬಜೆಟ್ನಲ್ಲಿ ಇದನ್ನು ಪರಿಚಯಿಸಲಾಗಿತ್ತು.
  • ಚುನಾವಣಾ ಬಾಂ ಡ್ ಎಂದರೆ ಪ್ರಾಮಿಸರಿ ನೋಟ್ನ ಸ್ವರೂಪದಲ್ಲಿ ನೀಡಲಾದ ಬಾಂಡ್.
  • ಇದರಲ್ಲಿ ಖರೀದಿದಾರ ಅಥವಾ ಪಾವತಿದಾರನನ ಹೆಸರು ಇರುವುದಿಲ್ಲ. ಯಾವುದೇ ಮಾಲೀಕತ್ವದ ಮಾಹಿತಿಯನ್ನೂ ದಾಖಲಿಸಿರುವುದಿಲ್ಲ.
  • ಈಯೋಜನೆಯಡಿ ದೇಶದ ಪ್ರಜೆಗಳು ಅಥವಾ ಕಂಪನಿಗಳು ₹1ಸಾವಿರ, ₹10 ಸಾವಿರ, ₹1 ಲಕ್ಷ, ₹10 ಲಕ್ಷ ಹಾಗೂ ₹1 ಕೋಟಿಯ ಅಪವರ್ತನದಲ್ಲಿ ರಾಜಕೀಯ ಪಕ್ಷಗಳಿಂದ ಬಾಂಡ್ಗಳನ್ನು ಖರೀದಿ ಮಾಡಬಹುದು.
  • ಈ ಬಾಂಡ್ಗಳು ಒಬ್ಬ ವ್ಯಕ್ತಿ ಅಥವಾ ಹಲವು ವ್ಯಕ್ತಿಗಳು ಸೇರಿ ಜಂಟಿಯಾಗಿ ಖರೀದಿ ಮಾಡಬಹುದು. ಇದಕ್ಕೆ ಯಾವುದೇ ಮಿತಿ ಇಲ್ಲ.
  • 15 ದಿನಗಳ ಒಳಗಾಗಿ ರಾಜಕೀಯ ಪಕ್ಷಗಳು ಇದನ್ನು ನಗದೀಕರಿಸಿಕೊಳ್ಳಬೇಕು. ಒಂದು ವೇಳೆ 15 ದಿನಗಳಲ್ಲಿ ಇದನ್ನು ನಗದೀಕರಿಸಿಕೊಳ್ಳದಿದ್ದಲ್ಲಿ, ಸಂಬಂಧಪಟ್ಟ ಬ್ಯಾಂಕ್ ಅದನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಜಮೆಮಾಡಬೇ ಕು.
  • ಚುನಾವಣಾ ಆಯೋಗಕ್ಕೆ ವಾರ್ಷಿಕ ದೇಣಿಗೆಯ ಮಾಹಿತಿಯನ್ನು ಸಲ್ಲಿಸುವಾಗಲೂ, ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯ ಕೂಡ ರಾಜಕೀಯ ಪಕ್ಷಗಳಿಗೆ ಇಲ್ಲ.
  • ಚುನಾವಣಾ ಬಾಂಡ್ನ ನಿಯಮದ ಪ್ರಕಾರ, ಭಾರತೀಯ ಸ್ಟೇಟ್ ಬ್ಯಾಂಕ್ (SBI)ಮಾತ್ರ ಈ ಬಾಂಡ್ಗಳನ್ನು ಮಾರಾಟಮಾಡಬಹುದು.