Published on: June 4, 2023

ಜಗತ್ತಿನ ಪ್ರಥಮ 3ಡಿ ದೇವಸ್ಥಾನ

ಜಗತ್ತಿನ ಪ್ರಥಮ 3ಡಿ ದೇವಸ್ಥಾನ

ಸುದ್ದಿಯಲ್ಲಿ ಏಕಿದೆ? ಜಗತ್ತಿನ ಪ್ರಥಮ 3ಡಿ ಮುದ್ರಿತ ಹಿಂದು ದೇವಾಲಯವೊಂದನ್ನು ತೆಲಂಗಾಣದಲ್ಲಿ ನಗರದ ಸಿದ್ದಪೇಟೆಯ ಬುರುಗಪಲ್ಲಿಯಲ್ಲಿರುವ ಗೇಟೆಡ್ ವಿಲ್ಲಾ ಕಮ್ಯುನಿಟಿ ‘ಚರ್ವಿತ ಮೀಡೋಸ್’ನಲ್ಲಿ  ನಿರ್ವಿುಸಲಾಗುತ್ತಿದೆ.

ದೇವಸ್ಥಾನದ ವಿವರ

  • ಇದು ಮೂರು ಹಂತದ ಪ್ರಿಂಟೆಡ್ ಮಂದಿರವಾಗಿದೆ.
  • ನಿರ್ಮಾಣ: ಅಪ್ಸುಜಾ ಇನ್​ಫ್ರಾಟೆಕ್ ಸಂಸ್ಥೆ ನಿರ್ವಿುಸುತ್ತಿದೆ.
  • 3,800 ಚದರ ಅಡಿ ಪ್ರದೇಶದಲ್ಲಿ ಈ ವಿಶಿಷ್ಟ ಮಂದಿರ ನಿರ್ವಣಗೊಳ್ಳಲಿದೆ.
  • ದೇವಸ್ಥಾನ ನಿರ್ವಣಕ್ಕಾಗಿ 3ಡಿ-ಪ್ರಿಂಟೆಡ್ ನಿರ್ಮಾಣ ಕಂಪನಿಯಾದ ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್​ನೊಂದಿಗೆ ಅಪ್ಸುಜಾ ಇನ್​ಫ್ರಾಟೆಕ್ ಒಪ್ಪಂದ ಮಾಡಿಕೊಂಡಿದೆ.
  • 3 ಗರ್ಭಗುಡಿ: ದೇವಸ್ಥಾನದಲ್ಲಿ 3 ಗರ್ಭಗುಡಿ ಇರುತ್ತವೆ. ಗಣಪತಿಗೆ ಸಮರ್ಪಿತವಾದ ‘ಮೋದಕ’ ಆಕಾರದ ಗರ್ಭಗುಡಿ, ಶಂಕರನಿಗೆ ಚೌಕಾಕಾರ ಮತ್ತು ದೇವಿ ಪಾರ್ವತಿಗೆ ಕಮಲಾಕಾರದ ಗರ್ಭಗುಡಿಗಳು ಮಂದಿರದಲ್ಲಿರುತ್ತವೆ.

ಸೇತುವೆ ನಿರ್ಮಾಣ : ಹೈದರಾಬಾದ್​ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಹಯೋಗದೊಂದಿಗೆ ಸಿಂಪ್ಲಿ ಫೋರ್ಜ್ ಕ್ರಿಯೇಷನ್ಸ್ ಇದೇ ಮಾರ್ಚ್​ನಲ್ಲಿ ಕೇವಲ 2 ಗಂಟೆಯೊಳಗೆ ಸೇತುವೆಯ ಮೂಲ ಮಾದರಿ ನಿರ್ವಿುಸಿತ್ತು. ಅದು ಭಾರತದ ಆ ಬಗೆಯ ಮೊದಲ ಸೇತುವೆಯಾಗಿದೆ. ಆ ಸೇತುವೆಯನ್ನು ಕೂಡ ಚರ್ವಿತ ಮೀಡೋಸ್​ನಲ್ಲೇ ಜೋಡಿಸಲಾಗಿತ್ತು.