Published on: June 7, 2022

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ಸುದ್ಧಿಯಲ್ಲಿಏಕಿದೆ?

ಆಧುನಿಕ ಖಗೋಳಶಾಸ್ತ್ರದ ಅತ್ಯಂತ ಪರಿಣಾಮಕಾರಿ ಬಾಹ್ಯಾಕಾಶ ದೂರದರ್ಶಕ ಯಂತ್ರ ಎಂದೇ ಪರಿಗಣಿಸಲಾಗಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಮುಂಬುರವ ಜುಲೈ 12ರಂದು ತನ್ನ ಮೊಟ್ಟಮೊದಲ ವೈಜ್ಞಾನಿಕ ಬಾಹ್ಯಾಕಾಶ ಚಿತ್ರವನ್ನು ಭೂಮಿಗೆ ರವಾನಿಸಲಿದೆ.

ಮುಖ್ಯಾಂಶಗಳು

  • ಜುಲೈ 12ರಂದು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ ಕ್ಲಿಕ್ಕಿಸಿದ ಮೊದಲ ಚಿತ್ರ ಬಿಡುಗಡೆ.
  • ಬ್ರಹ್ಮಾಂಡದ ಅಧ್ಯಯನ ಆರಂಭಿಸಲಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್.
  • ತನ್ನ ಕಾರ್ಯಾಚರಣೆಯ ಮೊದಲ ಚಿತ್ರವನ್ನು ಭೂಮಿಗೆ ರವಾನಿಸಲಿದೆ ಜೇಮ್ಸ್ ವೆಬ್.
  • ಜೇಮ್ಸ್ ವೆಬ್ ಟೆಲಿಸ್ಕೋಪ್ ಬಾಹ್ಯಾಕಾಶದಲ್ಲಿ ಕಾರರ್ಯಾರಂಭ ಶುರು ಮಾಡಿ ಆರು ತಿಂಗಳಾಗುತ್ತಿದ್ದು, ತನ್ನ ಮೊದಲ ವೈಜ್ಞಾನಿಕ ಕಾರ್ಯಾಚರಣೆ ಚಿತ್ರವನ್ನು ಜುಲೈ 12ರಂದು ಹಂಚಿಕೊಳ್ಳಲಿದೆ ಎಂದು ನಾಸಾ ತಿಳಿಸಿದೆ.
  • ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಈಗಾಗಲೇ ಹಲವು ಬಾಹ್ಯಾಕಾಶ ಚಿತ್ರಗಳನ್ನು ಹಂಚಿಕೊಂಡಿದೆ. ಇವೆಲ್ಲವೂ ದೂರದರ್ಶಕ ಯಂತ್ರದ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಲು ತೆಗೆದ ಮಧ್ಯಂತರ ಜೋಡಣೆ ಚಿತ್ರಗಳಾಗಿವೆ. ಇದೀಗ ಜುಲೈ 12ರಂದು ಈ ದೂರದರ್ಶಕ ಯಂತ್ರ ರವಾನಿಸಲಿರುವ ಚಿತ್ರ ಸಂಪೂರ್ಣ ಅಧ್ಯಯನದ ಬಳಿಕ ತೆಗೆದ ಚಿತ್ರವಾಗಿರಲಿದೆ ಎಂದು ನಾಸಾ ಮಾಹಿತಿ ನೀಡಿದೆ.
  • ನಾಸಾದ ಹಬಲ್ ದೂರದರ್ಶಕ ಯಂತ್ರ ಕಳೆದ ಮೂರು ದಶಕಗಳಿಂದ ಬಾಹ್ಯಾಕಾಶ ಅಧ್ಯಯನದಲ್ಲಿ ನಿರತವಾಗಿದ್ದು, ಇರ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಬಾಹ್ಯಾಕಾಶದಲ್ಲಿ ಹಬಲ್ ಸ್ಥಾನವನ್ನು ತುಂಬಲಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಬಾಹ್ಯಾಕಾಶ ಅಧ್ಯಯನ ಪ್ರಕ್ರಿಯೆಯನ್ನು ಮುಂದುವರೆಸಲಿದೆ.