Published on: December 7, 2022

‘ಝೋಂಬಿ ವೈರಸ್’

‘ಝೋಂಬಿ ವೈರಸ್’

ಸುದ್ದಿಯಲ್ಲಿ ಏಕಿದೆ?

ಸುಮಾರು 48,500 ವರ್ಷಗಳ ಹಿಂದೆ ಹಿಮದ ಅಡಿ ಹೂತುಹೋಗಿದ್ದ ವೈರಸ್‌ಗಳನ್ನು ಸಂಶೋಧಕರು ಪುನಶ್ಚೇತನಗೊಳಿಸಿದ್ದಾರೆ.

ಮುಖ್ಯಾಂಶಗಳು

  • ಹಿಮದ ಅಡಿ ಹೂತುಹೋಗಿರುವ ಪುರಾತನ ವೈರಸ್‌ಗಳು ಹವಾಮಾನ ವೈಪರೀತ್ಯದ ಪರಿಣಾಮ ಜಗತ್ತಿಗೆ ಹೊಸ ಬೆದರಿಕೆ ಉಂಟುಮಾಡುವ ಅಪಾಯವಿದೆ.
  • 8,500ಕ್ಕೂ ಅಧಿಕ ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಘನೀಕೃತಗೊಂಡಿದ್ದ ವೈರಸ್ ಸೇರಿದಂತೆ ಸುಮಾರು ಎರಡು ಡಜನ್ ವೈರಸ್‌ಗಳನ್ನು ಸಂಶೋಧಕರು ಪುನಶ್ಚೇತನಗೊಳಿಸಿದ್ದಾರೆ.
  • ಶೀತಲೀಕರಣಗೊಂಡ ನೆಲದಡಿಯಲ್ಲಿ ಅನೇಕ ಶತಮಾನಗಳ ಕಾಲ ಹುಗಿದು ಹೋಗಿದ್ದರೂ, ಝೋಂಬಿ ವೈರಸ್‌ಗಳು ಈಗಲೂ ಸೋಂಕು ಹರಡುವಷ್ಟು ಪ್ರಬಲವಾಗಿ ಉಳಿದಿವೆ ಎಂಬ ಆಘಾತಕಾರಿ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದಾರೆ.
  • “ಪುರಾತನ ಹಿಮಹಾಸುಗಳು ತಾವು ಕರಗಿ ಹೋದಂತೆ ಈ ಅಪರಿಚಿತ ವೈರಸ್‌ಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ”.
  • ಸ್ಥಳ : ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಸಾವಿರಾರು ವರ್ಷಗಳಿಂದ ಹಿಮಾಚ್ಛಾದಿತ ಮಣ್ಣಿನ ತಳದಲ್ಲಿ ಹೂತುಹೋಗಿದ್ದ ಪುರಾತನ ಮಾದರಿಗಳನ್ನು ಯುರೋಪ್‌ನ ಸಂಶೋಧಕರು ತಪಾಸಣೆಗೆ ಒಳಪಡಿಸಿದ್ದಾರೆ. ಅವರು 13 ಹೊಸ ರೋಗಕಾರಕ ವೈರಸ್‌ಗಳನ್ನು ಪುನಶ್ಚೇತನ ಹಾಗೂ ವರ್ಗೀಕರಿಸಿದ್ದಾರೆ. ಅವುಗಳಿಗೆ ‘ಝೋಂಬಿ ವೈರಸ್’ ಎಂದು ಹೆಸರು ನೀಡಿದ್ದಾರೆ.

 ಹವಾಮಾನ ಬದಲಾವಣೆ ಪರಿಣಾಮ

  • ವಾತಾವರಣದ ತಾಪಮಾನದ ಕಾರಣದಿಂದ ಕರಗುತ್ತಿರುವ ಹಿಮದ ಹೊದಿಕೆಯು, ಮೀಥೇನ್‌ನಂತಹ ಈ ಹಿಂದೆ ಹಿಮದಡಿ ಸಿಲುಕಿದ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುವ ಮೂಲಕ ಹವಾಮಾನ ಬದಲಾವಣೆಯನ್ನು ಮತ್ತಷ್ಟು ಭೀಕರಗೊಳಿಸಲಿವೆ ಎಂದು ವಿಜ್ಞಾನಿಗಳು ಅನೇಕ ಸಮಯದಿಂದ ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ಸುಪ್ತ ರೋಗಕಾರಕಗಳ (ಪ್ಯಾಥೋಜೆನ್‌ಗಳು) ಪರಿಣಾಮದ ಬಗ್ಗೆ ಇನ್ನೂ ಹೆಚ್ಚಿನ ತಿಳಿವಳಿಕೆ ಇಲ್ಲ.
  • ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳ ಸಂಶೋಧಕರ ತಂಡ ಈ ವೈರಸ್‌ಗಳ ಕುರಿತು ಅಧ್ಯಯನ ನಡೆಸಿದೆ. ತಾವು ಅಧ್ಯಯನಕ್ಕೆ ಒಳಪಡಿಸಿದ ವೈರಸ್‌ಗಳ ಪುನಶ್ಚೇತನದ ಪರಿಣಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಹುದಾಗಿದೆ. ಏಕೆಂದರೆ ತಾವು ಸಂಶೋಧನೆಗೆ ಒಳಪಡಿಸಿದ ಮಾದರಿಗಳು ಅಮೀಬಾ ಸೂಕ್ಷ್ಮಜೀವಿಗಳ ಮೇಲೆ ಸೋಂಕು ಉಂಟುಮಾಡುವಷ್ಟು ಸಮರ್ಥವಾಗಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ವೈರಸ್ ಒಂದರ ಪರಿಣಾಮಕಾರಿ ಪುನಶ್ಚೇತನವು ಪ್ರಾಣಿಗಳು ಅಥವಾ ಮನುಷ್ಯರಿಗೆ ಸೋಂಕು ಹರಡಿದರೆ ಹೆಚ್ಚಿನ ಸಮಸ್ಯೆ ಉಂಟಾಗಬಹುದು.