Published on: April 6, 2023

ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ ವೇ

ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ ವೇ

ಸುದ್ದಿಯಲ್ಲಿ ಏಕಿದೆ? ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಆಗಿದ್ದು 2023 ರ    ಅಕ್ಟೋಬರ್ ವೇಳೆಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.

ಮುಖ್ಯಾಂಶಗಳು

  • ಸುಮಾರು ಮೂರೂವರೆ ಕಿಮೀ ಪ್ರದೇಶದಲ್ಲಿ ಹಲವೆಡೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದೆ. ಅದರ ಆಧಾರದ ಮೇಲೆ ಈ ಕಾರಿಡಾರ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.
  • ಡೆಹ್ರಾಡೂನ್‌ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮೂರು ವರ್ಷಗಳ ಅಧ್ಯಯನದ ನಂತರ ಆಶಾರೋಡಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಎರಡು ಆನೆ ಕಾರಿಡಾರ್‌ಗಳಿಗೆ ಸ್ಥಳವನ್ನು ಆಯ್ಕೆ ಮಾಡಲಾಗಿದೆ.
  • ಸುಮಾರು ರೂ. 13,000 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ನಿರ್ಮಿಸಲಾಗುತ್ತಿದೆ.
  • ಎಕ್ಸ್‌ಪ್ರೆಸ್‌ವೇ 210 ಕಿಮೀ ಉದ್ದವಿದ್ದು, ಆರು ಲೇನ್‌ಗಳನ್ನು ಹೊಂದಿದ್ದು, ಎಂಟು ಲೇನ್‌ಗಳಿಗೆ ವಿಸ್ತರಿಸಬಹುದಾಗಿದೆ.

ಪ್ರಯೋಜನಗಳು

  • ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ನಂತರ ದೆಹಲಿಯಿಂದ ಡೆಹ್ರಾಡೂನ್ ಗೆ ಪ್ರಯಾಣ ಸಮಯ 6 ಗಂಟೆಯಿಂದ ಕೇವಲ ಎರಡೂವರೆ ಗಂಟೆಗೆ ಇಳಿಯಲಿದೆ. ಆಗಾಗ್ಗೆ ಈ ಪ್ರಯಾಣವನ್ನು ಕೈಗೊಳ್ಳಬೇಕಾದ ಜನರಿಗೆ ಇದು ದೊಡ್ಡ ಪರಿಹಾರವಾಗಿದೆ.
  • ಎಕ್ಸ್‌ಪ್ರೆಸ್‌ವೇ ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ, ಏಕೆಂದರೆ ಉತ್ತರಾಖಂಡದ ರಮಣೀಯ ಗಿರಿಧಾಮಗಳಿಗೆ ಜನರು ಪ್ರಯಾಣಿಸಲು ಇದು ಸುಲಭವಾಗುತ್ತದೆ.
  • ಈ ಯೋಜನೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರದೇಶದ ಆರ್ಥಿಕತೆಗೆ ಉತ್ತೇಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾರಿಡಾರ್ ಮತ್ತು ದಾತ್ ಕಾಳಿ ಸುರಂಗ

  • ಡೆಹ್ರಾಡೂನ್‌ನಿಂದ ಉತ್ತರ ಪ್ರದೇಶದ ಗಣೇಶಪುರದವರೆಗಿನ ಸಂಪೂರ್ಣ ಪ್ರದೇಶವು ರಾಜಾಜಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅಡಿಯಲ್ಲಿ ಬರುತ್ತದೆ.
  • ಯೋಜನೆಯು ರಾಜಾಜಿ ರಾಷ್ಟ್ರೀಯ ಉದ್ಯಾನವನದಲ್ಲಿ 12 ಕಿಮೀ ಉದ್ದದ ವನ್ಯಜೀವಿ ಸಂರಕ್ಷಣಾ ಕಾರಿಡಾರ್‌ನ ನಿರ್ಮಾಣವನ್ನು ಒಳಗೊಂಡಿದೆ.
  • ಕಾರಿಡಾರ್ ವನ್ಯಜೀವಿಗಳ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಪ್ರಾಣಿ-ವಾಹನ ಘರ್ಷಣೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
  • ಇದು ವನ್ಯಜೀವಿಗಳ ಆವಾಸಸ್ಥಾನದ ಸಂರಕ್ಷಣೆಗೆ ಮತ್ತು ಪ್ರದೇಶದ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.
  • ಈ ಯೋಜನೆಯು ಗಣೇಶ್‌ಪುರ-ಡೆಹ್ರಾಡೂನ್ ವಿಭಾಗದಲ್ಲಿ ದಾತ್ ಕಾಳಿ ಸುರಂಗದ ನಿರ್ಮಾಣವನ್ನೂ ಒಳಗೊಂಡಿದೆ. ಸುರಂಗವು ವನ್ಯಜೀವಿಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ ಮತ್ತು ಅವುಗಳ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ಡೆಹ್ರಾಡೂನ್ ನ ಆಶಾರೋಡಿಯಿಂದ ದಾತ್ ಕಾಳಿ ದೇವಸ್ಥಾನದವರೆಗೆ ತಲಾ 200 ಮೀಟರ್‌ಗಳ ಎರಡು ಆನೆ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರ ಎತ್ತರ ಏಳು ಮೀಟರ್ ಆಗಿರಲಿದ್ದು ಈ ಮೂಲಕ ಆನೆಗಳು ಕೂಡ ಈ ರಸ್ತೆಯಿಂದ ಇನ್ನೊಂದು ಬದಿಗೆ ಬರಲು ಸಾಧ್ಯವಾಗುತ್ತದೆ.

ಹರಿದ್ವಾರಕ್ಕೆ ಸಂಪರ್ಕ

  • ನಿರ್ಮಾಣ ಹಂತದಲ್ಲಿರುವ ಸಹರಾನ್‌ಪುರ-ರೂರ್ಕಿ-ಹರಿದ್ವಾರ ಎಕ್ಸ್‌ಪ್ರೆಸ್‌ವೇ ಹರಿದ್ವಾರವನ್ನು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುತ್ತದೆ. ಇದು ದೆಹಲಿಯಿಂದ ಹರಿದ್ವಾರಕ್ಕೆ ಪ್ರಯಾಣಿಸುವ ಜನರಿಗೆ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತದೆ.

ಶಬ್ದ ಮತ್ತು ಹೆಡ್ ಲೈಟುಗಳಿಂದ ಪ್ರಾಣಿಗಳಿಗೆ  ಸುರಕ್ಷತೆ

  • ವಾಹನಗಳ ಹೆಡ್‌ಲೈಟ್‌ಗಳು, ಹಾರ್ನ್ ಮತ್ತು ವಾಹನಗಳ ಶಬ್ದಗಳು ವನ್ಯಜೀವಿಗಳಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಹೀಗಾಗಿ ಇದನ್ನು ಎನ್‌ಎಚ್‌ಎಐ ಶಬ್ದ ತಡೆ ರೂಪದಲ್ಲಿ ಪರಿಹರಿಸಿದ್ದು ಇದಕ್ಕಾಗಿ ಫೈಬರ್ ಶೀಟ್ ಗಳನ್ನು ಬಳಸಲಾಗುತ್ತಿದೆ. ಇದು ಪಾಲಿಕಾರ್ಬೊನೇಟ್ ವಸ್ತುಗಳಿಂದ ಮಾಡಲ್ಪಟ್ಟಿದ್ದು ಹೆದ್ದಾರಿಯ ಎರಡೂ ಬದಿಯಲ್ಲಿ ನಾಲ್ಕು ಮೀಟರ್ ಎತ್ತರದವರೆಗೆ ಇದನ್ನು ಅಳವಡಿಸಲಾಗುವುದು ಎಂದರು.

ರಾಜಾಜಿ ರಾಷ್ಟ್ರೀಯ ಉದ್ಯಾನವನ

 ಭಾರತೀಯ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವಾಗಿದೆ

  • ಇದು ಹಿಮಾಲಯದ ತಪ್ಪಲಿನಲ್ಲಿರುವ ಶಿವಾಲಿಕ್‌ಗಳನ್ನು ಒಳಗೊಂಡಿದೆ.
  • ಇದು 820 km² ಗಳಷ್ಟು ಹರಡಿದೆ
  • ಉತ್ತರಾಖಂಡದ ಮೂರು ಜಿಲ್ಲೆಗಳನ್ನು ಒಳಗೊಂಡಿದೆ: ಹರಿದ್ವಾರ, ಡೆಹ್ರಾಡೂನ್ ಮತ್ತು ಪೌರಿ ಗರ್ವಾಲ್.
  • ಸ್ಥಾಪನೆ: 1983