Published on: February 20, 2023

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳು

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳು


ಸುದ್ದಿಯಲ್ಲಿ ಏಕಿದೆ? ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದ12 ಚಿರತೆಗಳನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಕುನೊ ರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಿದರು.


ಮುಖ್ಯಾಂಶಗಳು

  • ಅಲ್ಲಿ ಕೆಲ ದಿನಗಳ ಕಾಲ ಸಣ್ಣ ಆವರಣದಲ್ಲಿ ಇರಿಸಿ ನಂತರ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ನಂತರ ಬಯಲು ಅರಣ್ಯಕ್ಕೆ ಬಿಡಲಾಗುವುದು.
  • ಈ ಚಿರತೆಗಳಲ್ಲಿ ಏಳು ಗಂಡು ಮತ್ತು ಐದು ಹೆಣ್ಣು ಚಿರತೆಗಳು ಸೇರಿವೆ.
  • ಚಿರತೆಗಳಿಗಾಗಿ 10 ಕ್ವಾರಂಟೈನ್ ಆವರಣಗಳನ್ನು ಸಿದ್ಧಪಡಿಸಿದ್ದಾರೆ. ಭಾರತೀಯ ವನ್ಯಜೀವಿ ಕಾನೂನಿನ ಪ್ರಕಾರ, ಇತರ ದೇಶಗಳ ಪ್ರಾಣಿಗಳನ್ನು ಪ್ರತ್ಯೇಕವಾಗಿ ಇಡಬೇಕು.
  • 12 ಹೊಸ ಚಿರತೆಗಳ ಆಗಮನದ ನಂತರ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸಂಖ್ಯೆ 20ಕ್ಕೆ ಏರುತ್ತದೆ.

ಒಪ್ಪಂದ:

  • ಭಾರತ ಮತ್ತು ದಕ್ಷಿಣ ಆಫ್ರಿಕಾ ಸರ್ಕಾರಗಳ ನಡುವಿನ ತಿಳುವಳಿಕೆ ಒಪ್ಪಂದದ (ಎಂಒಯು) ಆಧಾರದ ಮೇಲೆ ಚೀತಾ ಮರುಪರಿಚಯ ಯೋಜನೆಯ ಭಾಗವಾಗಿ ಚಿರತೆಗಳನ್ನು ಭಾರತಕ್ಕೆ ತರಲಾಗಿದೆ.
  • ಭಾರತದಲ್ಲಿ ಕಾರ್ಯಸಾಧ್ಯವಾದ ಮತ್ತು ಸುರಕ್ಷಿತ ಚಿರತೆಗಳನ್ನು ಸ್ಥಾಪಿಸಲು ಎರಡು ದೇಶಗಳ ನಡುವಿನ ಸಹಕಾರವನ್ನು ಎಂಒಯು ಸುಗಮಗೊಳಿಸುತ್ತದೆ.
  • ಇದು ಮಾನವ-ವನ್ಯಜೀವಿ ಸಂಘರ್ಷ ಪರಿಹಾರ, ವನ್ಯಜೀವಿಗಳ ಸೆರೆಹಿಡಿಯುವಿಕೆ ಮತ್ತು ಸ್ಥಳಾಂತರ ಹಾಗೂ ಎರಡು ದೇಶಗಳಲ್ಲಿ ಸಂರಕ್ಷಣೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಒಳಗೊಂಡಿದೆ.

ಉದ್ದೇಶ

  • ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಜೊತೆಗೆ ಚಿರತೆಯ ಸಂರಕ್ಷಣೆಯನ್ನೂ ಉತ್ತೇಜಿಸಲು ಈವೊಂದು ದ್ವಿಪಕ್ಷೀಯ ಒಪ್ಪಂದದಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ. ಪರಿಸರ ವ್ಯವಸ್ಥೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರವು ಈ ಹಿಂದೆ ಆಫ್ರಿಕನ್ ದೇಶಗಳಿಂದ ಚಿರತೆಗಳನ್ನು ತರಲು ಯೋಜನೆಯನ್ನು ಸಿದ್ಧಪಡಿಸಿತ್ತು.

ನಿಮಗಿದು ತಿಳಿದಿರಲಿ

  • ಮೊದಲು ಸೆಪ್ಟೆಂಬರ್ 2022ರಲ್ಲಿ, ನಮೀಬಿಯಾದಿಂದ ಎಂಟು ಚಿರತೆಗಳನ್ನು ತರಲಾಗಿತ್ತು. ಗಮನಾರ್ಹವಾಗಿ, 1952ರಲ್ಲಿ ಚಿರತೆಗಳು ಭಾರತದ ನೆಲದಿಂದ ನಿರ್ನಾಮವಾದವು ಎಂದು ಘೋಷಿಸಲಾಯಿತು.

ಚೀತಾ

  • ಚಿರತೆ ಆಫ್ರಿಕಾ ಮತ್ತು ಮಧ್ಯ ಇರಾನ್ನಲ್ಲಿಹೆಚ್ಚಾಗಿ ಕಂಡುಬರುವ ದೊಡ್ಡಬೆಕ್ಕು. (ಅಸಿನೋ ನಿಕ್ಸ್ ಜುಬೆಟಸ್) ಫೆಲಿಡೆ ಎಂಬ ಬೆಕ್ಕಿನ ಜಾತಿಗೆ ಸೇರಿದ ಒಂದು ವಿಶಿಷ್ಟ ಪ್ರಾಣಿ. ಇದು ತನ್ನ ವೇಗಕ್ಕೆ ಹೆಸರುವಾಸಿಯಾಗಿದೆ, ಆದರೆ ಇದಕ್ಕೆ ಮರ ಏರುವ ಸಾಮರ್ಥ್ಯದ ಕೊರತೆ ಇದೆ. ಇದು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ. ಇದರ ವೇಗವು ಕಡಿಮೆ ಸಮಯದಲ್ಲಿ112 and 120 km/h (70 and 75 mph) ರಷ್ಟಿದೆ. ಜೊತೆಗೆ ಇದು 460 m (1,510 ft)ರಷ್ಟು ಅಂತರವನ್ನು ಕ್ರಮಿಸುತ್ತದೆ. ಜೊತೆಗೆ ಮೂರು ನಿಮಿಷಗಳಲ್ಲಿವೇಗವನ್ನು 0 ಯಿಂದ 103 km/h (64 mph) ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂ ದಿದೆ.

ಕುನೊ ರಾಷ್ಟ್ರೀಯ ಉದ್ಯಾನ·

  • ಕುನೋ ರಾಷ್ಟ್ರೀಯ ಉದ್ಯಾ ನವನವು ಭಾರತದ ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನವಾಗಿದ್ದು, 1981ರಲ್ಲಿ ವನ್ಯಜೀವಿ ಅಭಯಾರಣ್ಯವಾಗಿ ಷಿಯೋಪುರ್ ಮತ್ತು ಮೊರೆನಾ ಜಿಲ್ಲೆಗಳಲ್ಲಿಗುರುತಿಸಲಾಗಿದ್ದು 344.686 ಕಿಮೀ² ವಿಸ್ತೀರ್ಣವನ್ನು ಹೊಂದಿದೆ.· 2018 ರಲ್ಲಿ, ಇದನ್ನು ರಾಷ್ಟ್ರೀಯ ಉದ್ಯಾನವನದ ಸ್ಥಾನಮಾನವನ್ನು ನೀಡಲಾಯಿತು. ಇದು ಖಥಿಯರ್-ಗಿರ್ ಒಣ ಎಲೆ ಉದುರುವ ಕಾಡು ಪ್ರದೇಶದ ಭಾಗವಾಗಿದೆ.