Published on: November 21, 2022

ದತ್ತಾಂಶ ರಕ್ಷಣೆ ಕರಡು ಮಸೂದೆ:

ದತ್ತಾಂಶ ರಕ್ಷಣೆ ಕರಡು ಮಸೂದೆ:

ಸುದ್ದಿಯಲ್ಲಿ ಏಕಿದೆ?

ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ 2022ರ ಅಡಿಯಲ್ಲಿನ ನಿಬಂಧನೆಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡದ ಮೊತ್ತವನ್ನು 6 ಬಗೆಯಲ್ಲಿ 500 ಕೋಟಿ ರೂವರೆಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಉದ್ದೇಶಿತ ಕರಡು ಪ್ರಸ್ತಾವನೆ ಹೊರಡಿಸಿದೆ.

ಮುಖ್ಯಾಂಶಗಳು

  • 2019ರಲ್ಲಿ ಹೊರಡಿಸಲಾದ ಕರಡು ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆಯಲ್ಲಿ ದಂಡದ ಮೊತ್ತವನ್ನು 15 ಕೋಟಿ ಅಥವಾ ಸಂಬಂಧಿಸಿದ ಕಂಪನಿಯ ಜಾಗತಿಕ ವಹಿವಾಟಿನ ಶೇ 4ರಷ್ಟನ್ನು ಪಾವತಿಸುವಂತೆ ನಿಗದಿಪಡಿಸಲಾಗಿತ್ತು.
  • ಆದರೆ, ಈ ಮಸೂದೆಯನ್ನು ಸರ್ಕಾರ ಇದೇ ವರ್ಷದ ಆಗಸ್ಟ್‌ನಲ್ಲಿ ಹಿಂತೆಗೆದುಕೊಂಡಿತ್ತು. ಪ್ರಸ್ತಾವಿತ 2022ರ ಮಸೂದೆಯು, ದತ್ತಾಂಶ ರಕ್ಷಣೆ ಮಸೂದೆ ಬದಲಿಗೆ ಜಾರಿಗೆ ಬರಲಿದೆ.
  • ಭಾರತದ ದತ್ತಾಂಶ ರಕ್ಷಣಾ ಮಂಡಳಿ ಸ್ಥಾಪಿಸುವ ಪ್ರಸ್ತಾವನೆಯನ್ನೂ ಈ ಉದ್ದೇಶಿತ ಕರಡು ಒಳಗೊಂಡಿದೆ. ಇದು ಮಸೂದೆಯ ನಿಬಂಧನೆಗಳ ಅನುಸಾರವೇ ಕಾರ್ಯನಿರ್ವಹಿಸಲಿದೆ.
  • . ಕಾನೂನುಬದ್ಧ ಉದ್ದೇಶಗಳಿಗಾಗಿ ಮತ್ತು ಇತರ ಸಂದರ್ಭೋಚಿತ ಉದ್ದೇಶಗಳಿಗಾಗಿ ವೈಯಕ್ತಿಕ ದತ್ತಾಂಶ ರಕ್ಷಿಸುವ ಪ್ರಕ್ರಿಯೆಯ ಅವಶ್ಯಕತೆ ಇದೆ. ವೈಯಕ್ತಿಕ ಡಿಜಿಟಲ್‌ ದತ್ತಾಂಶ ರಕ್ಷಣೆ ಮಸೂದೆ ನಾಗರಿಕರ (ಡಿಜಿಟಲ್ ನಾಗರಿಕ್‌) ಹಕ್ಕುಗಳು ಮತ್ತು ಕರ್ತವ್ಯಗಳನ್ನು ರೂಪಿಸುವ ಶಾಸನವಾಗಿದೆ. ಒಂದೆಡೆ ಸಂಗ್ರಹಿಸಿದ ದತ್ತಾಂಶವನ್ನು ಕಾನೂನುಬದ್ಧವಾಗಿ ಬಳಸಲು ಕಟ್ಟುಪಾಡುಗಳನ್ನು ವಿಧಿಸಿದರೆ, ಇನ್ನೊಂದೆಡೆ ದತ್ತಾಂಶದ ವಿಶ್ವಾಸಾರ್ಹತೆ ಕಾಯುತ್ತದೆ.

ಉದ್ದೇಶ

  • ಈ ಮಸೂದೆಯ ಉದ್ದೇಶವು ಡಿಜಿಟಲ್ ವೈಯಕ್ತಿಕ ದತ್ತಾಂಶವನ್ನು ತಮ್ಮ ವೈಯಕ್ತಿಕ ದತ್ತಾಂಶವಾಗಿ ರಕ್ಷಿಸುವವರ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿತ್ತು

ಆರು ರೀತಿಯ ದಂಡ

  • ಮರುಪರಿಚಯಿಸಲಾದ ಕರಡು ಡಿಜಿಟಲ್ ಪರ್ಸನಲ್ (ವೈಯುಕ್ತಿಕ ದತ್ತಾಂಶ ಸಂರಕ್ಷಣೆ) ಡಾಟಾ ಪ್ರೊಟೆಕ್ಷನ್ ಬಿಲ್, 2022, ಕಂಪನಿಗಳಲ್ಲದವರ ಮೇಲೆ ಆರು ರೀತಿಯ ದಂಡವನ್ನು ಕಂಪನಿಗಳಿಗೆ ಪ್ರಸ್ತಾಪಿಸಿದೆ.
  • ವೈಯಕ್ತಿಕ ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ ಮಂಡಳಿ ಮತ್ತು ಸಂತ್ರಸ್ಥ ಸಂಸ್ಥೆಗಳಿಗೆ ತಿಳಿಸಲು ವಿಫಲವಾದರೆ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಹೊಣೆಗಾರಿಕೆಗಳನ್ನು ಪೂರೈಸದಿದ್ದಲ್ಲಿ ರೂ 200 ಕೋಟಿಗಳವರೆಗೆ ದಂಡವನ್ನು ವಿಧಿಸಬಹುದು.

ಒಳಗೊಂಡಿರುವ ಅಂಶಗಳು

  • ದೂರಸಂಪರ್ಕ ಮಸೂದೆ-2022 ಮತ್ತು 2000ರ ಪರಿಷ್ಕೃತ ಐಟಿ ಕಾಯ್ದೆಯು ಈ ವೈಯಕ್ತಿಕ ಡೇಟಾ ಸಂರಕ್ಷಣೆಗೆ ಕಾನೂನು ಅಡಿಪಾಯ ಹಾಕಿಕೊಡುತ್ತದೆ.
  • ಪ್ರತಿಯೊಬ್ಬರ ವೈಯಕ್ತಿಕ ಡೇಟಾಗಳನ್ನು ಸಂರಕ್ಷಿಸಲು, ವ್ಯಕ್ತಿಯ ಹಕ್ಕು ಹಾಗೂ ಕಾನೂನು ಬದ್ಧ ಉದ್ದೇಶಗಳನ್ನು ಈಡೇರಿಸಲು ಇದು ಶಾಸನ ಬದ್ಧ ಕ್ರಮವಾಗಿದ್ದು, ಅದಕ್ಕಾಗಿ ಭಾರತೀಯ ಡೇಟಾ ಸಂರಕ್ಷಣಾ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಲಾಗುತ್ತದೆ.
  • ಡೇಟಾಗಳಿಗೆ ಭದ್ರತಾ ಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾದ್ರೆ ಅಥವಾ ಲೋಪಗಳು ಕಂಡುಬಂದಲ್ಲಿ ಅಂತಹ ಸಂಸ್ಥೆಗಳಿಗೆ 500 ಕೋಟಿ ರೂ. ದಂಡ ವಿಧಿಸುವ ಅಂಶವನ್ನು ಸೇರಿಸಲಾಗಿದೆ