Published on: June 30, 2023

‘ದಶ ದಾನ’ದ ಉಡುಗೊರೆ

‘ದಶ ದಾನ’ದ ಉಡುಗೊರೆ

ಸುದ್ದಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ದಂಪತಿಗೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ಭಾರತೀಯ ಸಂಸ್ಕೃತಿ ಬಿಂಬಿಸುವ 10 ವಸ್ತುಗಳಿರುವ ಸಹಸ್ರ ಚಂದ್ರ ದರ್ಶನದ ದಶ ದಾನ ಉಡುಗೊರೆಯಾಗಿ ನೀಡಿದ್ದಾರೆ.

ಮುಖ್ಯಾಂಶಗಳು

  • ಜೋ ಬೈಡೆನ್‌ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್‌ ಬೈಡೆನ್‌ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‌ನ ಹಸಿರು ವಜ್ರವನ್ನು ನೀಡಿದ್ದಾರೆ.
  • ಇದರ ಜೊತೆ “ಉಪನಿಷತ್ತಿನ ಹತ್ತು ತತ್ವಗಳು” ಪುಸ್ತಕದ ಮೊದಲ ಆವೃತ್ತಿ ಹಾಗೂ ಗಣೇಶನ ವಿಗ್ರಹವನ್ನು ಮೋದಿ ‌ ಉಡುಗೊರೆಯಾಗಿ ನೀಡಿರುವುದು ಗಮನ ಸೆಳೆದಿದೆ. ಪ್ರಮುಖವಾಗಿ ಮೈಸೂರಿನಿಂದ ತಂದ ಶ್ರೀಗಂಧದ ಮರದ ಕಟ್ಟಿಗೆಯಲ್ಲಿ ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಜೋ ಬೈಡೆನ್‌ ದಂಪತಿಗೆ ಉಡುಗೊರೆಯಾಗಿ ನೀಡಲಾಗಿದೆ.
  • ಈ ಶ್ರೀಗಂಧದ ಪೆಟ್ಟಿಗೆಯಲ್ಲಿ ಕೊಲ್ಕತ್ತಾದ ಐದನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬವು ತಯಾರಿಸಿದ ಬೆಳ್ಳಿ ಗಣೇಶನ ವಿಗ್ರಹ ಹಾಗೂ ದೀಪ ಇದ್ದು, ಸಹಸ್ರ ಚಂದ್ರ ದರ್ಶನದ ಪ್ರಯುಕ್ತ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ದಶದಾನದ ಉಡುಗೊರೆಯನ್ನು ನೀಡಿದ್ದಾರೆ.

ಸಹಸ್ರ ಚಂದ್ರ ದರ್ಶನದ ಅರ್ಥ

  • ವ್ಯಕ್ತಿಯು 80 ವರ್ಷದ ತುಂಬಿದಾಗ ಒಂದು ಸಾವಿರ ಹುಣ್ಣಿಮೆಗಳನ್ನು ನೋಡಿದ ಅನುಭವವನ್ನು ಗೌರವಿಸುವುದಕ್ಕಾಗಿ ಭಾರತೀಯ ಸಂಸ್ಕೃತಿಯಲ್ಲಿ ಈ ಆಚರಣೆ ಇದ್ದು, ಈ ವರ್ಷದ ನವೆಂಬರ್‌ನಲ್ಲಿ 81ನೇ ವರ್ಷಕ್ಕೆ ಕಾಲಿಡುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಧಾನಿ ಮೋದಿ ದಶದಾನದ ಉಡುಗೊರೆಯನ್ನು ನೀಡಿದರು.

ಶ್ರೀಗಂಧದ ಪೆಟ್ಟಿಗೆಯಲ್ಲಿರುವ 10 ವಸ್ತುಗಳು

  • ಗೋದಾನದ ಅನ್ವಯ ಹಸುವಿನ ಬದಲಿಗೆ ಬೆಳ್ಳಿ ತೆಂಗಿನಕಾಯಿ
  • ಭೂದಾನದ ಅನ್ವಯ ಭೂಮಿಗೆ ಬದಲಾಗಿ ಮೈಸೂರಿನಿಂದ ತಂದ ಶ್ರೀಗಂಧದ ತುಂಡನ್ನು ನೀಡಲಾಗಿದೆ.
  • ತಮಿಳುನಾಡಿನಿಂದ ತೆಗೆದುಕೊಂಡ ಹೋದ ಬಿಳಿ ಎಳ್ಳುಗಳನ್ನು ಎಳ್ಳಿನ ದಾನವಾಗಿ ನೀಡಲಾಗಿದೆ.
  • 24 ಕ್ಯಾರೆಟ್ ಶುದ್ಧ ಮತ್ತು ಹಾಲ್‌ಮಾರ್ಕ್ ಚಿನ್ನದ ನಾಣ್ಯವನ್ನು ಹಿರಣ್ಯದಾನ ಎಂದು ನೀಡಲಾಗಿದೆ.
  • ಪಂಜಾಬ್‌ ಮೂಲದ ತುಪ್ಪವನ್ನು ತುಪ್ಪ ದಾನವಾಗಿ
  • ಜಾರ್ಖಂಡ್‌ನಲ್ಲಿ ಕೈಯಿಂದ ನೇಯ್ದ ಟಸ್ಸಾರ್ ರೇಷ್ಮೆ ಬಟ್ಟೆಯನ್ನು ವಸ್ತ್ರದಾನವನ್ನಾಗಿ ನೀಡಲಾಗಿದೆ. ಉತ್ತರಾಖಂಡದಿಂದ ಪಡೆದ ಉದ್ದನೆ ಅಕ್ಕಿಯನ್ನು ಆಹಾರ ಧಾನ್ಯಗಳ ರೂಪದಲ್ಲಿ ನೀಡಲಾಗಿದೆ. ಮಹಾರಾಷ್ಟ್ರದಿಂದ ತಂದ ಬೆಲ್ಲವನ್ನು ಕೂಡ ನೀಡಲಾಗಿದೆ.
  • ರಾಜಸ್ಥಾನ ಮೂಲದ ಕುಶಲಕರ್ಮಿಗಳು ಕಲಾತ್ಮಕವಾಗಿ ರಚಿಸಿರುವ ಶೇ.99.5ರಷ್ಟು ಶುದ್ಧ ಮತ್ತು ಹಾಲ್‌ಮಾರ್ಕ್ ಬೆಳ್ಳಿಯ ನಾಣ್ಯ
  • ಜೊತೆಗೆ ಗುಜರಾತಿನ ಉಪ್ಪನ್ನು ಲವಣ ದಾನವಾಗಿ ಮೋದಿ ಬೈಡನ್‌ಗೆ ನೀಡಿದ್ದಾರೆ.

ಮೋದಿಗೆ ಪ್ರಾಚೀನ ಕ್ಯಾಮೆರಾ ಕೊಡುಗೆ

  • ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 20ನೇ ಶತಮಾನದ ಆರಂಭದಲ್ಲಿ ಮಾಡಿದ ಅಮೆರಿಕನ್ ಬುಕ್ ಗ್ಯಾಲರಿ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಪ್ರಾಚೀನ ಅಮೆರಿಕನ್ ಕ್ಯಾಮೆರಾ ಹಾಗೂ ಜಾರ್ಜ್ ಈಸ್ಟ್ಮನ್ ಅವರ ಮೊದಲ ಪೇಟೆಂಟ್ ಹೊಂದಿದ ಕೊಡ್ಯಾಕ್ ಕ್ಯಾಮೆರಾದ ಫೆಸಿಮೈನ್ ಪ್ರಿಂಟ್ ಪ್ರತಿಯನ್ನೂ ನೀಡಿದ್ದಾರೆ. ಜತೆಗೆ ಹಾರ್ಡ್ ಕವರ್ ಹೊಂದಿದ ಅಮೆರಿಕದ ವನ್ಯಜೀವಿ ಫೋಟೋಗಳ ಪುಸ್ತಕವನ್ನು ಬೈಡೆನ್‌ ಗಿಫ್ಟ್‌ ಆಗಿ ಮೋದಿಗೆ ನೀಡಿದ್ದಾರೆ.