Published on: March 13, 2023

ದೇಶದ ಪ್ರಥಮ ಹಸಿರು ಐಐಟಿ ಕ್ಯಾಂಪಸ್

ದೇಶದ ಪ್ರಥಮ ಹಸಿರು ಐಐಟಿ ಕ್ಯಾಂಪಸ್


ಸುದ್ದಿಯಲ್ಲಿ ಏಕಿದೆ? ಧಾರವಾಡದಲ್ಲಿ ಸುಮಾರು 535 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ, ಭಾರತದ ಪ್ರಥಮ ಹಸಿರು ಐಐಟಿ ಖ್ಯಾತಿಯ, ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.


ಮುಖ್ಯಾಂಶಗಳು.

  • ವೆಚ್ಚ : 852 ಕೋಟಿ ರೂ.
  • ಪ್ರಕತಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡದೇ ಸುಮಾರು 18 ಬೃಹತ್ ಕಟ್ಟಡಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗಿದೆ.
  • ಈ ಸ್ಥಾಯಿ ಕ್ಯಾಂಪಸ್ 65 ಎಕರೆ ಸಂರಕ್ಷಿತ ಅರಣ್ಯ ವಲಯ ಹೊಂದಿದ್ದು ಅಲ್ಲಿನ ಪ್ರಾಣಿ ಹಾಗೂ ಪಕ್ಷಿ ಸಂಕುಲಕ್ಕೂ ಆಶ್ರಯ ತಾಣವಾಗಿದೆ.

ಪರಿಸರ ಸ್ನೇಹಿ ಹೇಗೆ?

  • ಈ ಕ್ಯಾಂಪಸ್‌ನಲ್ಲಿ ಮೊದಲೇ ಇದ್ದ ಆರು ಚಿಕ್ಕ-ಚಿಕ್ಕ ಕೆರೆಗಳು ಹಾಗೂ 400 ಮಾವಿನ ಗಿಡಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
  • ಹುಲ್ಲುಹಾಸು ನಿರ್ಮಾಣ ಮಾಡಲು ಮಣ್ಣಿನ ಮರುಪೂರಣ ಮಾಡಲಾಗಿದೆ. ಪ್ರತಿಯೊಂದು ಕಟ್ಟಡಕ್ಕೂ ಮಳೆ ನೀರು ಕೊಯ್ಲು ನಿರ್ಮಿಸಿದ್ದು, ಮಳೆಯಿಂದ ಬಿದ್ದ ನೀರು ಪೋಲಾಗದಂತೆ ಹಾಗೂ ಸೂರ್ಯ ಬಿಸಿಲಿನಿಂದ ಸಿಗುವ ಸೌರಶಕ್ತಿ ಬಳಕೆ, ಘನತ್ಯಾಜ್ಯ ವಿಲೇವಾರಿ ಘಟಕಗಳು ಆವರಣದಲ್ಲಿವೆ.
  • ಐಐಟಿಗೆ ಹೋಗುವ ಸುಮಾರು ಎರಡು ಕಿ.ಮೀ. ಉದ್ದದ ರಸ್ತೆಯನ್ನು ಕೂಡ ಕಟ್ಟಡ ಸಾಮಗ್ರಿ ತ್ಯಾಜ್ಯದಿಂದಲೇ ನಿರ್ಮಿಸಲಾಗಿದೆ.
  • ಇಡೀ ಕ್ಯಾಂಪಸ್​​ನ್ನು ಪರಿಸರ ಸ್ನೇಹಿಯಾಗಿ ರೂಪಿಸಲಾಗಿದ್ದು, ಜೀವವೈವಿಧ್ಯ ಕಾಪಾಡಲು ಇಲ್ಲಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಇತರೆ ಸಿಬ್ಬಂದಿ ಶಬ್ದ ಮಾಲಿನ್ಯ ಉಂಟು ಮಾಡದೆ ಇರುವ ಇಲೆಕ್ಟ್ರಿಕಲ್ ಬೈಕ್, ಕಾರು ಹಾಗೂ ಸೈಕಲ್‌ಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಐದು ಸಾವಿರ ಗಿಡಗಳನ್ನು ಆವರಣದಲ್ಲಿ ನೆಡುವ ಮೂಲಕ ಒಟ್ಟಾರೆ ಉಷ್ಣಾಂಶವನ್ನು 2 ಡಿಗ್ರಿಯಷ್ಟು ಕಡಿಮೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ವಿಶೇಷತೆ

  • ಚಾಲುಕ್ಯ ಮತ್ತು ವಿಜಯ ನಗರ ಸಾಮ್ರಾಜ್ಯದ ವಾಸ್ತುಶಿಲ್ಪವನ್ನು ಮುಖ್ಯದ್ವಾರಕ್ಕೆ ಬಳಸಿಕೊಳ್ಳಲಾಗಿದೆ.
  • ಹಂಪಿಯ ಪ್ರಸಿದ್ಧ ಕಲ್ಲಿನ ರಥ ಐಐಟಿ ಮುಖ್ಯದ್ವಾರದಲ್ಲಿ ಕಂಗೊಳಿಸುತ್ತಿದೆ.
  • ದೇಶದಲ್ಲಿ 2016ರಲ್ಲಿ ಘೋಷಣೆ ಮಾಡಿದ 3ನೇ ಜನರೇಶನ್ 6 ಐಐಟಿಗಳಲ್ಲಿ ಧಾರವಾಡ ಒಂದು.