Published on: October 1, 2021

‘ದೇಶಭಕ್ತಿ ಧ್ಯಾನ್’

‘ದೇಶಭಕ್ತಿ ಧ್ಯಾನ್’

ಸುದ್ಧಿಯಲ್ಲಿ ಏಕಿದೆ? ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ‘ದೇಶಭಕ್ತಿ ಧ್ಯಾನ್’ ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ.

  • ಪ್ರತಿದಿನ ಬೆಳಿಗ್ಗೆ ತರಗತಿ ಶುರುವಿನಲ್ಲಿ ವಿದ್ಯಾರ್ಥಿಗಳು ನಾನು ಭಾರತ ದೇಶವನ್ನು ಗೌರವಿಸುತ್ತೇನೆ ಎಂದು ಜೋರಾಗಿ ಪಠಿಸಬೇಕು.
  • 6ರಿಂದ ದ್ವಿತೀಯ ಪಿಯುಸಿ ತನಕ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು. ಪ್ರತಿದಿನ 5 ನಿಮಿಷಗಳ ದೇಶಭಕ್ತಿ ಕುರಿತ ವಿಚಾರ ಪ್ರಸ್ತುತಿ ಹೊರತಾಗಿ 40 ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು.
  • 6- 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಈ ಬೋಧನೆ ನಡೆಯಲಿದ್ದರೆ, 9- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ದಿನ ದೇಶಪ್ರೇಮ ಕುರಿತ ತರಗತಿ ನಡೆಸಲಾಗುವುದು.