Published on: September 2, 2023

ಧೋಲ್ಪುರ್-ಕರೌಲಿ ಹುಲಿ ಸಂರಕ್ಷಿತ ಪ್ರದೇಶ

ಧೋಲ್ಪುರ್-ಕರೌಲಿ ಹುಲಿ ಸಂರಕ್ಷಿತ ಪ್ರದೇಶ

ಸುದ್ದಿಯಲ್ಲಿ ಏಕಿದೆ? ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಾಜಸ್ಥಾನದಲ್ಲಿ ಧೋಲ್ಪುರ್-ಕರೌಲಿ ಹುಲಿ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲು ಅನುಮೋದನೆಯನ್ನು ನೀಡಿದೆ.

ಮುಖ್ಯಾಂಶಗಳು

  • ಇದು ಮುಕುಂದ್ರ ಬೆಟ್ಟಗಳು, ರಾಮಗಢ ವಿಶ್ಧಾರಿ, ರಣಥಂಬೋರ್ ಮತ್ತು ಸರಿಸ್ಕಾ ನಂತರ ರಾಜಸ್ಥಾನದ ಐದನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

ಹುಲಿ ಸಂರಕ್ಷಿತ ಪ್ರದೇಶಗಳು

  • ಪಟ್ಟೆಯುಳ್ಳ ದೊಡ್ಡ ಬೆಕ್ಕುಗಳ (ಹುಲಿಗಳು) ಸಂರಕ್ಷಣೆಗಾಗಿ ಗೊತ್ತುಪಡಿಸಿದ ಸಂರಕ್ಷಿತ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುತ್ತದೆ. ಹುಲಿ ಸಂರಕ್ಷಿತ ಪ್ರದೇಶವು ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಅಭಯಾರಣ್ಯವೂ ಆಗಿರಬಹುದು.
  • ಉದಾಹರಣೆಗೆ: ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶವು ರಾಷ್ಟ್ರೀಯ ಉದ್ಯಾನವನವಾಗಿದೆ. ಏಕೆಂದರೆ ಈ ಸ್ಥಳವನ್ನು ಮೂಲತಃ ರಾಷ್ಟ್ರೀಯ ಉದ್ಯಾನವನವಾಗಿ ರಚಿಸಲಾಯಿತು ಮತ್ತು ನಂತರ ಹುಲಿ ಸಂರಕ್ಷಣೆ ಪ್ರದೇಶವನ್ನಾಗಿ ಮಾಡಲಾಯಿತು.
  • ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಲಹೆಯ ಮೇರೆಗೆ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 38V ರ ನಿಬಂಧನೆಗಳ ಪ್ರಕಾರ ರಾಜ್ಯ ಸರ್ಕಾರಗಳು ಹುಲಿ ಸಂರಕ್ಷಿತ ಪ್ರದೇಶಗಳನ್ನು ಸೂಚಿಸುತ್ತವೆ.
  • ಪ್ರಸ್ತುತ, ಭಾರತವು ಒಟ್ಟು 54 ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ

ನಿಮಗಿದು ತಿಳಿದಿರಲಿ

  • ವಿಶ್ವದ ಹುಲಿ ಜನಸಂಖ್ಯೆಯ 75% ಭಾರತಕ್ಕೆ ನೆಲೆಯಾಗಿದೆ. ಭಾರತದಲ್ಲಿನ ಹುಲಿಗಳ ಸ್ಥಿತಿಗತಿಯ ಇತ್ತೀಚಿನ ವರದಿಯ ಪ್ರಕಾರ, 2022 ರ ಹೊತ್ತಿಗೆ ದೇಶದಲ್ಲಿ ಹುಲಿಗಳ ಸಂಖ್ಯೆ 3,167 ಕ್ಕೆ ಏರಿದೆ.
  • ಅತಿ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಮಧ್ಯಪ್ರದೇಶ ಮತ್ತು ಎರಡನೆಯ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದೆ
  • ಪ್ರಾಜೆಕ್ಟ್ ಟೈಗರ್ ಎನ್ನುವುದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಇದು ಹುಲಿ ರಾಜ್ಯಗಳಿಗೆ ಗೊತ್ತುಪಡಿಸಿದ ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಹುಲಿ ಸಂರಕ್ಷಣೆಗಾಗಿ ಸರ್ಕಾರದ ಸಹಾಯವನ್ನು ಒದಗಿಸುತ್ತದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(NTCA)

ಎನ್‌ಟಿಸಿಎ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ  ಅಡಿಯಲ್ಲಿ ರಚಿಸಲಾಗಿದೆ. ಹುಲಿ ಸಂರಕ್ಷಣೆಯನ್ನು ಬಲಪಡಿಸಲು 2006 ಈ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ