Published on: March 4, 2024

ನಮ್ಮ ಮೆಟ್ರೊ ಒನ್ ನೇಷನ್ ಒನ್ ಕಾರ್ಡ್‌

ನಮ್ಮ ಮೆಟ್ರೊ ಒನ್ ನೇಷನ್ ಒನ್ ಕಾರ್ಡ್‌

ಸುದ್ದಿಯಲ್ಲಿ ಏಕಿದೆ? ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುವ ಸೌಲಭ್ಯದೊಂದಿಗೆ, ಡೆಬಿಟ್ ಕಾರ್ಡ್‌ನಂತೆ ವಾಣಿಜ್ಯ ಮಳಿಗೆಗಳಲ್ಲೂ ಉಪಯೋಗಿಸಬಹುದಾದ ‘ಒನ್ ನೇಷನ್ ಒನ್ ಕಾರ್ಡ್‌’ ಅನ್ನು ಪರಿಚಯಿಸಲಾಗಿದೆ.

ಮುಖ್ಯಾಂಶಗಳು 

  • ಸಹಯೋಗ: ಆರ್ ಬಿಎಲ್ ಬ್ಯಾಂಕ್ನ ಸಹಯೋಗದಲ್ಲಿ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜಿ ಕಾರ್ಡ್‌ ಅನ್ನು ಸಿದ್ಧಪಡಿಸಿದೆ.
  • ನಮ್ಮ ಮೆಟ್ರೊದ ಕೌಂಟರನಲ್ಲಿ ಕಾರ್ಡ್‌ಗಳನ್ನು ಖರೀದಿಸಬಹುದಾಗಿದೆ.
  • ‘ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ಈ ಕಾರ್ಡ್‌ ಬಳಸುವ ಜೊತೆಗೆ, ಚೆನ್ನೈ, ದೆಹಲಿ ಮೆಟ್ರೊಗಳಲ್ಲೂ ಬಳಸಬಹುದಾಗಿದೆ.
  • ಕೆವೈಸಿ ಸಲ್ಲಿಸದೆ ಹೆಸರು ಹಾಗೂ ಮೊಬೈಲ್ ಸಂಖ್ಯೆ ನೀಡುವ ಮೂಲಕ ‘ಒನ್ ನೇಷನ್ ಒನ್ ಕಾರ್ಡ್‌’ ಪಡೆಯಬಹುದು. ಆಗ ಅದನ್ನು ಮೆಟ್ರೊದಲ್ಲಿ ಮಾತ್ರ ಉಪಯೋಗಿಸಬಹುದು. ಡೆಬಿಟ್ ಕಾರ್ಡ್‌ನಂತೆ ಎಲ್ಲೆಡೆ ಬಳಸುವ ಮೊದಲು ಕೆವೈಸಿಯನ್ನು ಆನ್ಲೈನ್ ಅಥವಾ ‘BMRCLRBLBankNCMC’ ಮೊಬೈಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು.

ಉದ್ದೇಶ: ಹಣವನ್ನು ಟಾಪ್ಅಪ್ ಮಾಡಿಕೊಂಡು ಅದರಲ್ಲಿ ಎಷ್ಟು ಅಗತ್ಯವೋ ಅಷ್ಟನ್ನು ನಮ್ಮ ಮೆಟ್ರೊ

ಪ್ರಯಾಣದ ಸೌಲಭ್ಯಕ್ಕೆ ವರ್ಗಾಯಿಸಿಕೊಳ್ಳಬಹುದು. ಉಳಿದ ಹಣವನ್ನು ಡೆಬಿಟ್ ಕಾರ್ಡ್‌ ಆಗಿ ಎಲ್ಲೆಡೆಯೂ ಬಳಸಿಕೊಳ್ಳಬಹುದು.

ನಿಮಗಿದು ತಿಳಿದಿರಲಿ 

‘ಕೆವೈಸಿ ಇಲ್ಲದೆ ಸಾರಿಗೆ ವ್ಯವಸ್ಥೆಗಳಲ್ಲಿ ಪ್ರೀಪೇಯ್ಡ್ ಕಾರ್ಡ್‌ಗಳನ್ನು ಬ್ಯಾಂಕ್ಗಳು ಒದಗಿಸಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್ಬಿಐ) ಸುತ್ತೋಲೆ ಹೊರಡಿಸಿದೆ.