Published on: July 6, 2023

ನಾಮಕ್ಕಲ್ ಜಿಲ್ಲೆ

ನಾಮಕ್ಕಲ್ ಜಿಲ್ಲೆ

ಸುದ್ದಿಯಲ್ಲಿ ಏಕಿದೆ? ಭಾರತದ ತಮಿಳುನಾಡಿನ ನಾಮಕ್ಕಲ್ ಜಿಲ್ಲೆ ತನ್ನ ನೀರಿನ ಕೊರತೆಯ ಸವಾಲುಗಳನ್ನು ಎದುರಿಸುವಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದೆ ಮತ್ತು ಎರಡನೇ ಅತ್ಯುತ್ತಮ ಅಂತರ್ಜಲ ಲಭ್ಯತೆಯನ್ನು ಸಾಧಿಸಿದೆ.

ಅಳವಡಿಸಿಕೊಂಡ ವಿಧಾನಗಳು

  • ಜಿಲ್ಲೆಯ ಸಮಗ್ರ ವಿಧಾನವು ಸಮುದಾಯ ಭಾಗವಹಿಸುವಿಕೆ, ಮಳೆನೀರು ಕೊಯ್ಲು, ಸುಸ್ಥಿರ ಕೃಷಿ, ಸಮರ್ಥ ನೀರು ನಿರ್ವಹಣಾ ವ್ಯವಸ್ಥೆಗಳು ಮತ್ತು ದೃಢವಾದ ನೀತಿಗಳನ್ನು ಒಳಗೊಂಡಿತ್ತು.

ಕೈಗೊಂಡ ಕ್ರಮಗಳು

  • ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ಮೇಲ್ಛಾವಣಿ ಸಂಗ್ರಹ ವ್ಯವಸ್ಥೆಗಳು, ಮಾನವ ನಿರ್ಮಿತ ಟ್ಯಾಂಕಗಳು ಮತ್ತು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸುವಂತಹ ಕ್ರಮಗಳನ್ನು ಅಳವಡಿಸಲಾಗಿದೆ. ನದಿ ಪುನರುಜ್ಜೀವನ, ಕಾಲುವೆಗಳ ಹೂಳು ತೆಗೆಯುವುದು ಮತ್ತು ಒತ್ತುವರಿ ತೆರವು ಸಹ ಕೈಗೊಳ್ಳಲಾಯಿತು.

ಇದರಿಂದ ಅರಿತ ಪಾಠಗಳು

  • ನೀರಿನ ಸಂರಕ್ಷಣೆಗಾಗಿ ಸಮರ್ಥ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸುವುದು.
  • ನೈಸರ್ಗಿಕ ಜಲಮೂಲಗಳ ಮರುಸ್ಥಾಪನೆ ಮತ್ತು ಮಾಲಿನ್ಯ ಮತ್ತು ಅತಿಕ್ರಮಣವನ್ನು ಎದುರಿಸಲು ಆದ್ಯತೆ ನೀಡುವುದು.
  • ಮೇಲ್ವಿಚಾರಣೆ ಮತ್ತು ಸಮರ್ಥ ನೀರು ವಿತರಣೆಗಾಗಿ ಸುಧಾರಿತ ತಂತ್ರಜ್ಞಾನಗಳನ್ನು ಬಳಸುವುದು.
  • ಶಿಕ್ಷಣ ಮತ್ತು ಸಹಯೋಗದ ಉಪಕ್ರಮಗಳ ಮೂಲಕ ಸಮುದಾಯ ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವುದು.

ನಿಮಗಿದು ತಿಳಿದಿರಲಿ

  • ಭಾರತದಲ್ಲಿ ಅತಿ ಹೆಚ್ಚು ಅಂತರ್ಜಲ ಲಭ್ಯತೆಯನ್ನು ಹೊಂದಿರುವ ರಾಜ್ಯ ತಮಿಳು ನಾಡು.
  • ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಲವನ್ನು ಬಳಸುತ್ತದೆ.
  • ಭಾರತದಲ್ಲಿ ಹೆಚ್ಚು ಅಂತರ್ಜಲದ ಬಳಕೆಯಾಗುವ ವಲಯ : ಕೃಷಿ ವಲಯ