Published on: September 16, 2023

ನಿಪಾ ವೈರಸ್‌

ನಿಪಾ ವೈರಸ್‌

ಸುದ್ದಿಯಲ್ಲಿ ಏಕಿದೆ? ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕೇರಳ ಆರೋಗ್ಯ ಇಲಾಖೆ ನಿಪಾ ವೈರಸ್‌ನಿಂದ ಕೋಯಿಕ್ಕೋಡ್‌ನಲ್ಲಿ ಇಬ್ಬರು ಸಾವಿಗೀಡಾಗಿರುವುದನ್ನು ದೃಢಪಡಿಸಿದ ನಂತರ, ಮಡಿಕೇರಿ, ದಕ್ಷಿಣ ಕನ್ನಡ ಗಡಿಜಿಲ್ಲೆಗಳಲ್ಲೂ ಕರ್ನಾಟಕ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.

ನಿಪಾ ವೈರಸ್ (NiV) ಎಂದರೆ

  • ಒಂದು ಝೂನೋಟಿಕ್ ವೈರಸ್ (ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ) ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಜನರ ನಡುವೆ ಹರಡಬಹುದು.
  • Pteropodidae ಕುಟುಂಬದ ಹಣ್ಣು ತಿನ್ನುವ ಬಾವಲಿಗಳು ನಿಪಾ ವೈರಸ್‌ನ  ಆತಿಥೇಯ ಪ್ರಾಣಿಗಳಾಗಿವೆ

ನಿಪಾ ವೈರಸ್‌ ಜ್ವರದ ರೋಗ ಲಕ್ಷಣಗಳು

  • ಜ್ವರ, ತಲೆ ನೋವು, ವಾಂತಿ, ತಲೆ ಸುತ್ತು, ಪ್ರಜ್ಞಾ ಹೀನತೆ, ಅತೀಯಾದ ಜ್ವರ ಮೆದುಳಿಗೆ ವ್ಯಾಪಿಸುವುದು, ಮಾತುಗಳಲ್ಲಿ ತೊದಲುವಿಕೆ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಇದೆ
  • 4 ರಿಂದ 18 ದಿನಗಳಲ್ಲಿ ನಿಪಾ ವೈರಸ್‌ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತವೆ

ನಿಪಾ ವೈರಸ್‌ ಜ್ವರ ಹರಡುವ ವಿಧಾನ

  • ನಿಪಾಹ್ ವೈರಸ್ ಪ್ರಾಣಿಗಳಿಂದ (ಬಾವಲಿಗಳು ಅಥವಾ ಹಂದಿಗಳು) ಅಥವಾ ಕಲುಷಿತ ಆಹಾರಗಳಿಂದ ಮನುಷ್ಯರಿಗೆ ಹರಡಬಹುದು ಮತ್ತು ನೇರವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡಬಹುದು.
  • ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಹರಡುತ್ತದೆ.
  • ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತದ ಸಂಪರ್ಕದಿಂದ ವ್ಯಾಪಿಸುತ್ತದೆ.
  • ಸೋಂಕಿತ ವ್ಯಕ್ತಿಯ ಮಲ, ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ ಹರಡುತ್ತದೆ.

ರೋಗ ಪತ್ತೆ ವಿಧಾನ

  • ಸೋಂಕಿತ ವ್ಯಕ್ತಿಯ ಗಂಟಲಿನ ದ್ರವದ ಪರೀಕ್ಷೆ ಮೂಲಕ ದೃಢಪಡಿಸಬಹುದು. ಪ್ರಸ್ತುತ ಈ ಪರೀಕ್ಷೆಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ನಡೆಸಲಾಗುತ್ತದೆ.

ಚಿಕಿತ್ಸೆ

  • ಜನರು ಅಥವಾ ಪ್ರಾಣಿಗಳಿಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಮಾನವರಿಗೆ ಪ್ರಾಥಮಿಕ ಚಿಕಿತ್ಸೆಯು ಪೋಷಕ ಆರೈಕೆಯಾಗಿದೆ.

ನಿಮಗಿದು ತಿಳಿದಿರಲಿ

  • ನಿಪಾ ವೈರಸ್‌ ಕಾಯಿಲೆ 1998 ಮತ್ತು 1999ನೇ ಇಸವಿಯಲ್ಲಿ, ಮಲೇಶಿಯಾ ಮತ್ತು ಸಿಂಗಪೂರ್‌ ದೇಶಗಳಲ್ಲಿನ ಮನೆಯಲ್ಲಿ ಸಾಕಿರುವ ಹಂದಿಗಳಲ್ಲಿ ಪತ್ತೆಯಾಗಿದ್ದು, ಮಲೇಶಿಯಾ ದೇಶದ ನಿಪಾ ಗ್ರಾಮದಲ್ಲಿ ಈ ವೈರಸ್‌ ಪ್ರಭೇದವನ್ನು ಪ್ರಪ್ರಥಮವಾಗಿ ಕಂಡು ಹಿಡಿಯಲಾಗಿದೆ.
  • ಮನೆಯಲ್ಲಿ ಸಾಕುವ ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳೂ ಸೋಂಕಿಗೆ ತುತ್ತಾಗುವ ಸಂಭವವಿದ್ದು, ಮಲೇಷಿಯಾ, ಸಿಂಗಪೂರ್‌, ಬಾಂಗ್ಲಾದೇಶ ಮತ್ತು ಭಾರತದಲ್ಲಿಈವರೆಗೆ 477 ಖಚಿತ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 248 ಸಾವುಗಳು ಸಂಭವಿಸಿದೆ.
  • 2018 ರಲ್ಲಿ ಕೇರಳದಲ್ಲಿ 14 ಖಚಿತ ನಿಪಾ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 11 ಸಾವುಗಳು ಸಂಭಸಿದ್ದವು. 2021 ರಲ್ಲಿ ಕೇರಳದಲ್ಲಿ ಒಂದು ನಿಪಾ ವೈರಸ್‌ ರೋಗದ ಪ್ರಕರಣ ವರದಿಯಾಗಿತ್ತು.