Published on: July 16, 2023

ರಾಜ್ಯ ಸರ್ಕಾರ ಪಂಚತಂತ್ರ 2.0 ಸಾಫ್ಟ್‌ವೇರ್‌ನ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಇದನ್ನು ಎರಡು ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗುವುದು.

ರಾಜ್ಯ ಸರ್ಕಾರ ಪಂಚತಂತ್ರ 2.0 ಸಾಫ್ಟ್‌ವೇರ್‌ನ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಇದನ್ನು ಎರಡು ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗುವುದು.

ಸುದ್ದಿಯಲ್ಲಿ ಏಕಿದೆ? ರಾಜ್ಯ ಸರ್ಕಾರ ಪಂಚತಂತ್ರ 2.0 ಸಾಫ್ಟ್‌ವೇರ್‌ನ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಇದನ್ನು ಎರಡು ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗುವುದು.

ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿಗಳಲ್ಲಿ ಕೋರಂ ಕೊರತೆಯಿಂದ ಶೇ 70ರಷ್ಟು ಸಭೆಗಳು ವಿಫಲವಾಗಿರುವುದು ರಾಜ್ಯ ಸರ್ಕಾರದ ಈ ಸಾಫ್ಟ್‌ವೇರ್‌ನ ಪ್ರಾಯೋಗಿಕ ಚಾಲನೆಯಿಂದ ತಿಳಿದು ಬಂದಿದೆ. ತಂತ್ರಜ್ಞಾನದ ಆಗಮನದೊಂದಿಗೆ, ಈ ರೀತಿಯ ವೈಪರೀತ್ಯಗಳನ್ನು ಸರಿಪಡಿಸಬಹುದು.
  • ಎಲ್ಲಾ ಉದ್ಯೋಗಿಗಳಿಗೆ ಸಂಬಳ ನೀಡಲು ಇ-ಎಫ್‌ಎಂಎಸ್ ಮಾಡ್ಯೂಲ್ ಅನ್ನು ಸಹ ಈ ಸಾಫ್ಟ್‌ವೇರ್‌ನಲ್ಲಿ ಸೇರಿಸಲಾಗಿದೆ. ಪ್ರಸ್ತುತ 46,375 ಉದ್ಯೋಗಿಗಳು ಈ ಹೊಸ ವೇದಿಕೆಯಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಏನಿದು ಯೋಜನೆ?

  • ಗ್ರಾಮ ಪಂಚಾಯಿತಿಗಳ ಲೆಕ್ಕ ಪತ್ರ ನಿರ್ವಹಣೆಗಾಗಿ ಎನ್ಐಸಿ ಅಭಿವೃದ್ಧಿ ಪಡಿಸಿದ್ದ ಪಂಚತಂತ್ರ ತಂತ್ರಾಂಶ 2011ರಲ್ಲಿ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಅನುಷ್ಠಾನ ಮಾಡಲಾಗಿತ್ತು. ಈಗ ಹಳೆಯ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುತ್ತಿದೆ.
  • ಪಂಚತಂತ್ರ 2.0 ಹೊಸ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಆಗಿದ್ದು,  ಗ್ರಾಮ ಪಂಚಾಯಿತಿಗಳು ತಮ್ಮ ಎಲ್ಲಾ ಪ್ರಮುಖ ಕಾರ್ಯಗಳು ಮತ್ತು ಕಾರ್ಯಾಚರಣೆಗಳನ್ನು ಬಲಪಡಿಸಲು, ಡಿಜಿಟಲೀರಣಗೊಳಿಸಲು ಮತ್ತು ಕೇಂದ್ರೀಕರಿಸಲು ವ್ಯಾಪಕ ಮತ್ತು ಸಮಗ್ರ ವೇದಿಕೆಯಾಗಿ ರೂಪಿಸಲಾಗಿದೆ.
  • ಗ್ರಾಮೀಣಾಭಿವೃದ್ಧಿ ಇಲಾಖೆಯ ಗಾಂಧಿ ಸಾಕ್ಷಿ ಕಾಯಕ, ಇ-ಸ್ವತ್ತು, ನರೇಗಾ, ಸ್ವತ್ಛ ಭಾರತ್ ಮಿಷನ್-ಗ್ರಾಮೀಣ, ಬಾಪೂಜಿ ಸೇವಾಕೇಂದ್ರ ಮತ್ತು ಇತರ ಇಲಾಖೆಗಳ ಸುಮಾರು 15ರಿಂದ 20 ತಂತ್ರಾಂ ಶಗಳನ್ನು ಬಳಸಲಾಗುತ್ತಿದ್ದು, ಒಂದೊಂದು ತಂತ್ರಾಂಶಕ್ಕೆ ಒಂದೊಂದು ಬಳಕೆದಾರರ ಐಡಿ ಮತ್ತು ಪಾಸ್ವರ್ಡ್‌ಗಳನ್ನು ಬಳಸಲಾಗುತ್ತಿದೆ. ಆದ್ದರಿಂದ ಈ ಎಲ್ಲ ತಂತ್ರಾಂಶಗಳನ್ನು ಸಂಯೋಜನೆ ಮಾಡಿ ಪಂಚತಂತ್ರ 2.0 ಮೂಲಕ “ಸಿಂಗಲ್ ಸೈನ್ ಆನ್’ (ಎಸ್ಎಸ್ಒ) ಪದ್ಧತಿ ಅಳವಡಿಸಿಕೊಳ್ಳಲಾಗುತ್ತಿದೆ.

ಪಂಚತಂತ್ರ 2.0 ಉದ್ದೇ ಶಗಳು

  • ಈಗಿರುವ ಎಲ್ಲ ತಂತ್ರಾಂಶಗಳ ಬಳಕೆಗಾಗಿ “ಸಿಂಗಲ್ ಸೈನ್ ಆನ್’ (ಏಕಗವಾಕ್ಷಿ) ವ್ಯವಸ್ಥೆ ಅಭಿವೃದ್ಧಿಪಡಿಸುವುದು. ಗ್ರಾಮ ಪಂಚಾಯಿತಿಗಳ ಲೆಕ್ಕಪತ್ರ ನಿರ್ವಹಣೆಯೊಂದಿಗೆ ಆಡಳಿತ ಸುಧಾರಣೆಗೆ ಅನುಕೂಲ. ಡಿಜಿಟಲ್ ಸಹಿ ಸರ್ಟಿಫಿಕೇಟ್ ಬದಲಿದೆ. ಇ-ಸೈನ್ ಬಳಕೆ.
  • ಯೋಜನೆಗಳ ಮೇಲ್ವಿಚಾರಣೆಗೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ “ಡ್ಯಾಶ್ಬೋರ್ಡ್‌’ ವಿನ್ಯಾಸಗೊಳಿಸುವುದು. ಪಂಚಾಯಿತಿಗಳ ಎಲ್ಲ ಬ್ಯಾಂಕ್ ಖಾತೆಗಳನ್ನು ಮೇಲ್ದರ್ಜೆಗೇರಿಸಿ “ಖಜಾನೆ 2.0′ ತಂತ್ರಾಂಶದೊಂದಿಗೆ ಸಂಯೋಜನೆ ಮಾಡುವುದು ಪಂಚತಂತ್ರ 2.0 ಪ್ರಮುಖ ಉದ್ದೇಶಗಳಾ ಗಿವೆ.