Published on: August 2, 2021

ಪಿಂಚಣಿ ಕಾನೂನು ಸುಧಾರಣೆ

ಪಿಂಚಣಿ ಕಾನೂನು ಸುಧಾರಣೆ

ಸುದ್ಧಿಯಲ್ಲಿ ಏಕಿದೆ ?  ಸರಕಾರ ಪಿಂಚಣಿಗೆ ಸಂಬಂಧಿಸಿದ ಕಾನೂನು ಸುಧಾರಣೆಗೆ ಮುಂದಾಗಿದೆ. ಇದರಿಂದ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಪಿಎಫ್‌ಆರ್‌ಡಿಎ) ಹೆಚ್ಚಿನ ಅಧಿಕಾರ ಮತ್ತು ಪಿಂಚಣಿದಾರರಿಗೆ ತಮ್ಮ ಹೂಡಿಕೆಯ ವ್ಯವಸ್ಥಿತ ವಿತ್‌ ಡ್ರಾವಲ್ಸ್‌ಗೆ ಹಾಗೂ ಪಿಂಚಣಿಯಲ್ಲಿ ಮತ್ತಷ್ಟು ಆಯ್ಕೆಯ ಅವಕಾಶ ಸಿಗುವ ನಿರೀಕ್ಷೆ ಇದೆ.

ಪಿಂಚಣಿ ಪ್ರಾಧಿಕಾರಕ್ಕೆ ಬಲ:

  • ಮೊದಲನೆಯದಾಗಿ ಪ್ರತ್ಯೇಕ ವಿಧೇಯಕದ ಮೂಲಕ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಲು ಸರಕಾರ ಉದ್ದೇಶಿಸಿದೆ
  • ಎರಡನೆಯದಾಗಿ ನ್ಯಾಶನಲ್‌ ಪೆನ್ಷನ್‌ ಸಿಸ್ಟಮ್‌ ಟ್ರಸ್ಟ್‌ ಅನ್ನು ಪಿಎಫ್‌ಆರ್‌ಡಿಎಯಿಂದ ಪ್ರತ್ಯೇಕಿಸುವ ನಿರೀಕ್ಷೆ ಇದೆ.
  • ಮೂರನೆಯದಾಗಿ ವಿಮೆ ವಲಯಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯ ಈಗಿನ ಶೇ.74ರ ಮಿತಿಯನ್ನು ವಿಧೇಯಕದ ಮೂಲಕ ಖಾತರಿಪಡಿಸುವ ಸಾಧ್ಯತೆ ಇದೆ.
  • ದೇಶದಲ್ಲಿ ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫಂಡ್‌ (ಇಪಿಎಸ್‌) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ನಿಯಂತ್ರಕ ವ್ಯವಸ್ಥೆ ಇದೆ. ಇವುಗಳನ್ನು ಹೊರತುಪಡಿಸಿಯೂ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸೂಪರ್‌ ಆನ್ಯುಯೇಷನ್‌ ಫಂಡ್‌ (ವರ್ಷಾಸನ ನಿಧಿ) ಯೋಜನೆಯನ್ನು ಒದಗಿಸುತ್ತವೆ. ಸುಮಾರು 400-500 ‘ಅನಿಯಂತ್ರಿತ’ ಸೂಪರ್‌ ಆನ್ಯುಯೇಷನ್‌ ಫಂಡ್‌ಗಳೂ ಇವೆ ಎಂಬ ಅಂದಾಜು ಇದೆ. ಇವುಗಳನ್ನು ಪಿಎಫ್‌ಆರ್‌ಡಿಎ ವ್ಯಾಪ್ತಿಗೆ ತರಲು ಚಿಂತನೆ ನಡೆದಿದೆ.
  • ಮೂಲಗಳ ಪ್ರಕಾರ ಎನ್‌ಪಿಎಸ್‌ ಪಿಂಚಣಿ ಯೋಜನೆಯಲ್ಲಿ ಹೆಚ್ಚುವರಿ ವಿತ್‌ಡ್ರಾವಲ್ಸ್‌ ಆಯ್ಕೆಯನ್ನು ಕಲ್ಪಿಸುವ ಮೂಲಕ ಅದನ್ನು ಆಕರ್ಷಕವಾಗಿಸುವ ನಿರೀಕ್ಷೆ ಇದೆ. ಈಗ ಚಂದಾದಾರರು ನಿವೃತ್ತಿಯ ವೇಳೆಗೆ ನಿಧಿಯಲ್ಲಿನ ಶೇ.60 ಪಾಲನ್ನು ಹಿಂತೆಗೆದುಕೊಳ್ಳಬಹುದು.
  • ಉಳಿದ ಹಣ ಆನ್ಯುಯಿಟಿ ಪ್ಲಾನ್‌ (ವರ್ಷಾಶನ) ಖರೀದಿಸಲು ಬಳಕೆಯಾಗುತ್ತದೆ. ಸಿಸ್ಟಮ್ಯಾಟಿಕ್‌ ವಿತ್‌ಡ್ರಾವಲ್ಸ್‌ ಪ್ಲಾನ್‌ಗಳಲ್ಲಿ (ವ್ಯವಸ್ಥಿತ ಹೂಡಿಕೆ ಯೋಜನೆ) ಹೂಡಿಕೆ ಮಾಡಲು ಚಂದಾದಾರರಿಗೆ ಅವಕಾಶ ಕೊಡುವುದರಿಂದ ನಿವೃತ್ತಿಯ ನಂತರ ನಿಯಮಿತ ಆದಾಯ ಸಿಗುತ್ತದೆ. ಹಣದುಬ್ಬರ ಆಧಾರಿತ ಪ್ಲಾನ್‌ನಲ್ಲಿ 10 ವರ್ಷಗಳ ಸರಕಾರಿ ಸಾಲಪತ್ರಗಳ ಆದಾಯ ಮಾನದಂಡವಾಗಿರುತ್ತದೆ.

ನಿವೃತ್ತಿಯ ವೇಳೆಗೆ ಹಲವು ಆಯ್ಕೆ:

  • ವ್ಯವಸ್ಥಿತ ಹೂಡಿಕೆ ಹಿಂತೆಗೆತವನ್ನು ಒಳಗೊಂಡಿರುವ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆಯ ಆಯ್ಕೆಯು ಪಿಂಚಣಿದಾರರಿಗೆ ಸಿಗಬಹುದು. ಹಣದುಬ್ಬರ ಸೂಚ್ಯಂಕ ಆಧರಿಸಿದ ಪಿಂಚಣಿ ಯೋಜನೆಯ ಆಯ್ಕೆಯೂ ದೊರೆಯಬಹುದು.