Published on: June 10, 2023

ಪುರಾತನ ಬೃಹತ್ ನಿಲುವುಗಲ್ಲು ಪತ್ತೆ

ಪುರಾತನ ಬೃಹತ್ ನಿಲುವುಗಲ್ಲು ಪತ್ತೆ

ಸುದ್ದಿಯಲ್ಲಿ ಏಕಿದೆ? ಸುಮಾರು 5 ಸಾವಿರ ವರ್ಷದ ಹಿಂದಿನ ಶಿಲಾಯುಗದ ಆಕರ್ಷಕ ನಿಲುವುಗಲ್ಲು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಇದೊಂದು ಶಿಲಾಯುಗದ ಸಂಸ್ಕೃತಿ ಎಂದು ಇತಿಹಾಸ ತಜ್ಞರು ಬಣ್ಣಿಸಿದ್ದಾರೆ.

ಮುಖ್ಯಾಂಶಗಳು

  • ಬೊ ಮ್ಮನಹಳ್ಳಿಯಲ್ಲಿಪತ್ತೆಯಾಗಿರುವ ನಿಲುವುಗಲ್ಲು 20 ಅಡಿಯಷ್ಟು ಉದ್ದವಿದ್ದು, ಸುಸ್ಥಿತಿಯಲ್ಲಿದೆ.
  • ಇಂತಹ ನಿಲುವುಗಲ್ಲುಗಳು ಕರ್ನಾಟಕ ರಾಜ್ಯದಲ್ಲಿಕ್ರಿ.ಪೂ 700-800 ರಷ್ಟು ಹಳೆಯದು ಎಂದು ಗುರುತಿಸಲಾಗಿದೆ. ಪಶ್ಚಿಮ ಯೂರೋಪಿನ ಕೆಲವು ಪ್ರದೇಶಗಳಲ್ಲೂಇಂತಹ ನಿಲುವು ಗಲ್ಲುಗಳು ಕಂಡುಬಂದಿದ್ದು, ಅವುಗಳನ್ನು ಇಂಗ್ಲಿಷಿನಲ್ಲಿ ‘ಮೆನ್ ಹಿರ್ಸ್’ ಎಂದು ಕರೆಯುವರು.

ನಿಲುವುಗಲ್ಲು

  • ಶಿಲಾಯುಗದಲ್ಲಿಮೃತರಾದ ವ್ಯಕ್ತಿಗಳ ಸಮಾಧಿಯ ಗುರುತಿಗಾಗಿ ಇದನ್ನು ಇಡುತ್ತಿದ್ದರು. ಶವವನ್ನು ಹೂತಿರುವ ನಿಗದಿತ ಅವಧಿಯ ನಂತರ ಅಲ್ಲಿನ ಅವಶೇಷಗಳನ್ನು ತೆಗೆದು ಮತ್ತೊಂದು ಗುಂಡಿಯಲ್ಲಿಹಾಕುವ ಕೆಲಸ ಮಾಡಲಾಗುತ್ತಿತ್ತು. ಅಲ್ಲಿಆಹಾರ, ಧಾನ್ಯ, ಪಾನೀಯಗಳನ್ನು ತುಂಬಿದ ಮಣ್ಣಿನ ಪಾತ್ರೆ, ಕಬ್ಬಿಣದ ವಸ್ತುಗಳನ್ನು ಇಡಲಾಗುತಿತ್ತು.  ಇಟ್ಟ ವಸ್ತುಗಳನ್ನು ಒಂದು ಕಡೆಯಲ್ಲಿಶೇಖರಣೆ ಮಾಡಿ ಗುಣಿಯ ಮೇಲೆ ನೆಡುತ್ತಿದ್ದ ಕಲ್ಲುಗಳೇ ಈ ನಿಲುವುಗಲ್ಲುಗಳು.