Published on: June 14, 2023

ಪ್ರೌಢಶಾಲಾ ಹಂತದಲ್ಲಿ ಶಾಲೆ ಬಿಡುವ ಮಕ್ಕಳು

ಪ್ರೌಢಶಾಲಾ ಹಂತದಲ್ಲಿ ಶಾಲೆ ಬಿಡುವ ಮಕ್ಕಳು

ಸುದ್ದಿಯಲ್ಲಿ ಏಕಿದೆ? 2021–22ರಲ್ಲಿ ಕರ್ನಾಟಕದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಟ್ಟವರ ಪ್ರಮಾಣ ಶೇ 14.6ರಷ್ಟಿತ್ತು. ಇದು, ಅದೇ ಅವಧಿಯಲ್ಲಿದ್ದ ರಾಷ್ಟ್ರೀ ಯ ಸರಾಸರಿಗಿಂತ (ಶೇ 12.6) ಅಧಿಕ ಎಂಬ ಅಂಶ ತಿಳಿದುಬಂದಿದೆ. ಮೇಘಾಲಯ ದೇಶದಲ್ಲಿಯೇ ಗರಿಷ್ಟ(21 %)ಡ್ರಾಪ್ ಔಟ್ ಗೆ ಸಾಕ್ಷಿಯಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಶಾಲೆ ಬಿಡುವ ವಿದ್ಯಾರ್ಥಿಗಳ ಪೈಕಿ ಬಾಲಕರ ಪ್ರಮಾಣ ಶೇ.16.2ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ.13ರಷ್ಟಿದೆ.
  • ಕರ್ನಾಟಕದಲ್ಲಿ 2020-21ನೇ ಸಾಲಿನಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣ ಶೇ.16.6ರಷ್ಟಿತ್ತು. ಅದು ಇದೀಗ ಶೇ.14.6ಕ್ಕೆ ಇಳಿಕೆ ಕಂಡಿದೆ.
  • ಕರ್ನಾಟಕವಲ್ಲದೇ ಗುಜರಾತ್, ಬಿಹಾರ, ಅಸ್ಸಾಂ ಹಾಗೂ ಪಂಜಾಬ್ನಲ್ಲಿ ಕೂಡ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಮಕ್ಕಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಇದೆ ಎಂದು ‘ಯೋಜನಾ ಅನುಮೋದನೆ ಮಂಡಳಿ’ (ಪಿಎಬಿ) ಸಭೆಯ ಟಿಪ್ಪಣಿಯಲ್ಲಿ ಹೇಳಲಾಗಿದೆ.
  • 2023–24ನೇ ಸಾಲಿನಲ್ಲಿ ‘ಸಮಗ್ರ ಶಿಕ್ಷಣ’ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲು ಶಿಕ್ಷಣ ಸಚಿವಾಲಯ ಕಳೆದ ಮಾರ್ಚ್‌ ಹಾಗೂ ಮೇನಲ್ಲಿ ‘ಯೋಜನಾ ಅನುಮೋದನೆ ಮಂಡಳಿ’ಯ ಸಭೆಗಳನ್ನು ನಡೆಸಿತ್ತು. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
  • ಮಧ್ಯ ಪ್ರದೇಶದಲ್ಲಿ ಪ್ರೌಢ ಹಂತದಲ್ಲಿ 2020-21ರಲ್ಲಿ ಶೇ.23.8ರಷ್ಟಿದ್ದ ಡ್ರಾಪ್ಔಟ್ ಪ್ರಮಾಣವು 2021-22ರಲ್ಲಿ ಶೇ.10.1ಕ್ಕೆ ಇಳಿದಿದೆ. ಮೊಬೈಲ್ ಅಪ್ಲಿಕೇಶನ್ನ ಸಹಾಯದಿಂದ ರಾಜ್ಯದಲ್ಲಿ ಪ್ರತಿ ವರ್ಷ ವಿಶೇಷ ದಾಖಲಾತಿ ಅಭಿಯಾನವನ್ನು ನಡೆಸುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
  • ಪಶ್ಚಿಮ ಬಂಗಾಳದಲ್ಲಿ 2020–21 ರಿಂದ 2021–22ರ ವರಗಿನ ಅವಧಿಯಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
  • ಪ್ರೌಢಶಾಲಾ ಹಂತದಲ್ಲಿ ಈ ಪ್ರಮಾಣ ಹೆಚ್ಚುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
  • ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಸಂಖ್ಯೆ ದೆಹಲಿಯಲ್ಲಿ ಹೆಚ್ಚಿದೆ. ಇಂಥ ವಿದ್ಯಾರ್ಥಿಗಳ ಕುರಿತಮಾಹಿತಿಯನ್ನು ‘ಪ್ರಬಂಧ’ ಪೋರ್ಟಲ್ನಲ್ಲಿ ಅಳವಡಿಸಬೇಕು ಎಂದೂ ಹೇ ಳಲಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು ಡ್ರಾಪ್ಔಟ್?

  • 2021-22ರಲ್ಲಿ ಪ್ರೌಢ ಹಂತದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವು ದರವು ಬಿಹಾರದಲ್ಲಿ ಶೇ.20.46ರಷ್ಟು ಇದೆ.ನಂತರದಲ್ಲಿ ಗುಜರಾತ್ನಲ್ಲಿ ಶೇ.17.85ರಷ್ಟು, ಅಸ್ಸೋಂ ನಲ್ಲಿ ಶೇ.20.3ರಷ್ಟು, ಆಂಧ್ರ ಪ್ರದೇಶದಲ್ಲಿ ಶೇ.16.7ರಷ್ಟು,ಪಂಜಾಬ್ನಲ್ಲಿ ಶೇ.17.2ರಷ್ಟು ಮತ್ತು ಮೇಘಾ ಲಯದಲ್ಲಿಶೇ.21.7 ರಷ್ಟಿದೆ.

ಗುರಿ ಸಾಧನೆಗೆ ತೊಂದರೆ

  • 2030ರ ವೇಳೆಗೆ ಶಾಲೆಗಳಲ್ಲಿ ‘ಒಟ್ಟು ದಾಖಲಾತಿ ಪ್ರಮಾಣ’ (ಜಿಇಆರ್) ಶೇ. 100ರಷ್ಟಾಗಬೇಕು ಎಂಬ ಗುರಿಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ. ಆದರೆ, ಶಾಲೆಯನ್ನು ಅರ್ಧಕ್ಕೆ ಬಿಡುವ ಈ ವಿದ್ಯಮಾನ ನಿಗದಿತ ಗುರಿ ಸಾಧನೆಗೆ ಅಡ್ಡಿಯಾಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ಸಂಖ್ಯೆ ಹೆಚ್ಚಾಗಲು ಕಾರಣಗಳು

  • ದೇಶದಲ್ಲಿ ಶೇ 33ರಷ್ಟು ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಡಲು ಮನೆಗೆಲಸವೇ ಕಾರಣ ಎಂದು ಯುನಿಸೆಫ್ ನಡೆಸಿದ ಸಮೀಕ್ಷೆ ಹೇಳುತ್ತದೆ.
  • ಪಾಲಕರೊಂದಿಗೆ ಕೂಲಿ ಕೆಲಸ ಅಥವಾ ಇತರರ ಮನೆಗಳಲ್ಲಿ ದುಡಿಯುವ ಸಲುವಾಗಿ ಮಕ್ಕಳು ಶಾಲೆಗೆಹೋಗುವುದನ್ನು ನಿಲ್ಲಿಸುತ್ತಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
  • ಕೋವಿಡ್ ಕಾಲದಲ್ಲಿ ದೀರ್ಘಕಾಲ ಶಾಲೆ ಮುಚ್ಚಿದ ಕಾರಣ ಹಲವು ಮಕ್ಕಳು ಶಾಲೆಯಿಂದ ದೂರ ಉಳಿಯುವಂತಾಗಿತ್ತು. ನಂತರ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದಾಗ ಈ ಮಕ್ಕಳನ್ನು ಕರೆತರಲು ನಿರ್ದಿಷ್ಟ ಯೋಜನೆ ರೂಪಿಸುವಲ್ಲಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಲಿಲ್ಲ. ಜತೆಗೆ, ಕಲಿಕೆಯಲ್ಲಿ  ಉಂಟಾಗಿದ್ದ ನಷ್ಟವನ್ನು ಸರಿದೂಗಿಸಲು ವಿಫಲವಾದ  ಕಾರಣ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
  • ಮಕ್ಕಳು ಪ್ರೌಢಶಾಲೆ ಹಂತದಲ್ಲಿ ಶಿಕ್ಷಣದಿಂದ ದೂರವಾಗಲು ಕಾರಣ: ವಿದ್ಯಾರ್ಥಿಗಳ ಪೋಷಕರ ಆರ್ಥಿಕ ಸ್ಥಿತಿಗತಿ, ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ, ಆರೋಗ್ಯ ಸಮಸ್ಯೆ, ಶಾಲೆಗಳಿಗೆ ಇರುವ ದೂರ ಮೊದಲಾದ ವಿಷಯಗಳು.

ಪ್ರಬಂಧ ಪೋರ್ಟಲ್

  • ಇದು ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಎಲ್ಲಾ ಮಕ್ಕಳಿಗಾಗಿ ಶಿಕ್ಷಣ ಇಲಾಖೆಯು ಸ್ಥಾಪಿಸಿದ ಪರಿಣಾಮಕಾರಿ ಪೋರ್ಟಲ್ ಆಗಿದೆ. ವಿಶೇಷವಾಗಿ ಅವರ ಕೋವಿಡ್-19 ಕಾರಣದಿಂದಾಗಿ ಶಾಲೆಯಿಂದ ಹೊರಗಿರುವ ಮಕ್ಕಳ ಸಮಗ್ರ ಡೇಟಾವನ್ನು ಕಂಪೈಲ್ ಮಾಡಲು ಪ್ರಬಂಧ್ ಒಂದು ಅನನ್ಯ ಆನ್‌ಲೈನ್ ಮಾಡ್ಯೂಲ್ ಆಗಿದೆ.
  • ಡೇಟಾವು ಮಕ್ಕಳ ಟ್ರ್ಯಾಕಿಂಗ್ ಡೇಟಾವನ್ನು ಒಳಗೊಂಡಿರುತ್ತದೆ. ಪ್ರಬಂಧ್ ಎಂದರೆ ಪ್ರಾಜೆಕ್ಟ್ ಮೌಲ್ಯಮಾಪನ, ಬಜೆಟ್, ಕಾರ್ಯಕ್ಷಮತೆ ಮತ್ತು ಡೇಟಾ ಸಂಸ್ಕರಣಾ ವ್ಯವಸ್ಥೆ.