Published on: September 21, 2021

ಬಾಹ್ಯಾಕಾಶಕ್ಕೆ ಸಾಮಗ್ರಿ ರವಾನೆ:

ಬಾಹ್ಯಾಕಾಶಕ್ಕೆ ಸಾಮಗ್ರಿ ರವಾನೆ:

ಸುದ್ಧಿಯಲ್ಲಿ ಏಕಿದೆ? ಮುಂದಿನ ವರ್ಷದ ವೇಳೆಗೆ ಪೂರ್ಣಗೊಳ್ಳಲಿರುವ ನಿರ್ಮಾಣ ಹಂತದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿ ಸರಬರಾಜು ಮಾಡಲು ಚೀನಾ ಮಾನವ ರಹಿತ ಸರಕು ಹೊತ್ತ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

  • ಟಿಯಾನ್‌ಜೌ–3 ಹೆಸರಿನ ನೌಕೆಯನ್ನು ಹೊತ್ತ ಲಾಂಗ್ ಮಾರ್ಚ್ -7 ವೈ 4 ರಾಕೆಟ್ ಅನ್ನು ಹೈನಾನ್‌ನ ದಕ್ಷಿಣ ದ್ವೀಪ ಪ್ರಾಂತ್ಯದಲ್ಲಿನ ವೆಂಚಾಂಗ್ ಬಾಹ್ಯಾಕಾಶ ಉಡಾವಣಾ ನೆಲೆಯಿಂದ ಉಡ್ಡಯನ ಮಾಡಲಾಯಿತು.
  • ಟಿಯಾನ್‌ಜೌ ಸರಣಿಯ ಈ ನೌಕೆಯು ಬಾಹ್ಯಾಕಾಶ ನಿಲ್ದಾಣದ ಕೋರ್ ಮಾಡ್ಯೂಲ್ ಅನ್ನು ಹೊತ್ತೊಯ್ಯುತ್ತಿದ್ದು, ಮುಂದಿನ ವರ್ಷದ ವೇಳೆಗೆ ಸಿದ್ಧವಾಗಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿಗಳನ್ನು ಸಾಗಿಸುತ್ತಿದೆ.