Published on: July 29, 2021

ಬ್ಯಾಂಕ್‌ ಠೇವಣಿಗೆ ವಿಮೆ

ಬ್ಯಾಂಕ್‌ ಠೇವಣಿಗೆ ವಿಮೆ

ಸುದ್ಧಿಯಲ್ಲಿ ಏಕಿದೆ ? ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇರಿಸುವವರಿಗೆ ಹೆಚ್ಚಿನ ನೆರವು ನೀಡುವ ಉದ್ದೇಶದಿಂದ ‘ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ’ಗೆ (ಡಿಐಸಿಜಿಸಿ ಕಾಯ್ದೆ) ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

  • ಈ ತಿದ್ದುಪಡಿಯು ಕಾಯ್ದೆಯ ಭಾಗವಾದ ನಂತರ, ಬ್ಯಾಂಕ್‌ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದರೆ ಠೇವಣಿದಾರರಿಗೆ 90 ದಿನಗಳಲ್ಲಿ ₹5ಲಕ್ಷದವರೆಗೆ ವಿಮಾ ಪರಿಹಾರ ಮೊತ್ತ ಸಿಗಲಿದೆ.
  • “ಆರ್‌ಬಿಐ ಬ್ಯಾಂಕುಗಳ ಮೇಲೆ ನಿಷೇಧ ಹೇರಿದ ನಂತರ ತೊಂದರೆಗಳನ್ನು ಎದುರಿಸುತ್ತಿರುವ ಜನರಿಗೆ ಅನುಕೂಲವಾಗುವಂತೆ, ‘ಠೇವಣಿ ವಿಮಾ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್’ ಅನ್ನು ರಚಿಸಲಾಗಿದೆ. 90 ದಿನಗಳಲ್ಲಿ ಠೇವಣಿದಾರರು ತಮ್ಮ 5 ಲಕ್ಷ ರೂ. ಹಣವನ್ನು ಸ್ವೀಕರಿಸುತ್ತಾರೆ ಎಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಕಾನೂನಿನ ಮೂಲಕ ಶೇ. 3 ರಷ್ಟು ಠೇವಣಿಗಳಿಗೆ ರಕ್ಷಣೆ ನೀಡಲು ಸಾಧ್ಯ
  • ಡಿಜಿಸಿಜಿಸಿ ರಿಸರ್ವ್‌ ಬ್ಯಾಂಕ್‌ನ ಅಂಗ ಸಂಸ್ಥೆಯಾಗಿದ್ದು ಬ್ಯಾಂಕ್‌ ಠೇವಣಿಗಳಿಗೆ ವಿಮೆಯ ಸುರಕ್ಷತೆ ನೀಡುತ್ತದೆ. ಡಿಜಿಸಿಜಿಸಿ ಕಾಯಿದೆಯ ಮೂಲಕ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆಗೊಳಿಸಲು ಸರಕಾರ ಉದ್ದೇಶಿಸಿದೆ. ಇತ್ತೀಚೆಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಮತ್ತು ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ಗಳು ಹಗರಣದ ಸುಳಿಗೆ ಸಿಲುಕಿ ಆರ್‌ಬಿಐನಿಂದ ನಿರ್ಬಂಧಕ್ಕೊಳಗಾಗಿದ್ದವು.
  • ಈ ವ್ಯವಸ್ಥೆಯು ಸರಕಾರಿ, ಖಾಸಗಿ, ಸಹಕಾರಿ ಮತ್ತು ಭಾರತದಲ್ಲಿರುವ ವಿದೇಶಿ ಬ್ಯಾಂಕ್‌ಗಳಿಗೆ ಅನ್ವಯಿಸುತ್ತದೆ. ಆದರೆ ಕೆಲವು ನಿರ್ದಿಷ್ಟ ಠೇವಣಿಗಳಿಗೆ ಇದು ಅನ್ವಯಿಸುವುದಿಲ್ಲ.
  • ಸಾಮಾನ್ಯವಾಗಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧಗಳನ್ನು ಹೇರಿದಾಗ ದೊಡ್ಡ ಮೊತ್ತದ ಹಣವನ್ನು ವಾಪಸ್‌ ಪಡೆಯಲು ಠೇವಣಿದಾರರಿಗೆ ಸಾಧ್ಯವಾಗುವುದಿಲ್ಲ. ಇಂಥಹವರಿಗೆ ಈ ಕಾನೂನಿನಿಂದ ನೆರವು ಸಿಗಲಿದೆ.