Published on: September 16, 2023

ಭಾರತದಲ್ಲಿ ಆನೆ ಕಾರಿಡಾರ್ಗಳು

ಭಾರತದಲ್ಲಿ ಆನೆ ಕಾರಿಡಾರ್ಗಳು

ಸುದ್ದಿಯಲ್ಲಿ ಏಕಿದೆ? ದೇಶದಲ್ಲಿ ಕನಿಷ್ಠ 150 ಆನೆ ಕಾರಿಡಾರ್ಗಳನ್ನು ಗುರುತಿಸಲಾಗಿದೆ ಎಂದು ಪರಿಸರ ಸಚಿವಾಲಯದ ವರದಿ ಮಾಡಿದೆ.

ಮುಖ್ಯಾಂಶಗಳು

  • ಪರಿಸರ ಸಚಿವಾಲಯವು ರಾಜ್ಯಗಳ ಅರಣ್ಯ ಇಲಾಖೆಗಳ ಸಹಯೋಗದಲ್ಲಿಈ ವರದಿಯನ್ನು ಸಿದ್ಧಪಡಿಸಿದೆ.
  • ಈ ಪೈಕಿ ಗರಿಷ್ಠ 26 ಆನೆ ಕಾರಿಡಾರ್ಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ.
  • ಈ 150 ಕಾರಿಡಾರ್ಗಳು 15 ರಾಜ್ಯಗಳ ನಾಲ್ಕು ಪ್ರದೇಶಗಳಲ್ಲಿ ವ್ಯಾಪಿಸಿವೆ. ಆದರೆ, 2010ರಲ್ಲಿಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ‘ಆನೆ ಕಾರ್ಯಪಡೆ ವರದಿ’(ಗಜ ವರದಿ)ಯಲ್ಲಿ 88 ಕಾರಿಡಾರ್ಗಳನ್ನು ಪಟ್ಟಿ ಮಾಡಲಾಗಿತ್ತು. 59 ಕಾರಿಡಾರ್ಗಳಲ್ಲಿ ಆನೆಗಳ ಚಲನವಲನ ಹೆಚ್ಚಿರುವುದು ಕಂಡುಬಂದಿದೆ.
  • 29 ಕಾರಿಡಾರ್ಗಳಲ್ಲಿ ಯಥಾಸ್ಥಿತಿ ಕಂಡುಬಂದಿದ್ದರೆ, 29 ಕಾರಿಡಾರ್ಗಳಲ್ಲಿ ಕಡಿಮೆಯಾಗಿದೆ. 15 ಕಾರಿಡಾರ್ಗಳ ಪುನರುಜ್ಜೀವನ ಅಗತ್ಯವಿದ್ದರೆ, 18 ಕಾರಿಡಾರ್ಗಳ ಕುರಿತ ಮಾಹಿತಿ ಲಭ್ಯವಿಲ್ಲ.

ನಿಮಗಿದು ತಿಳಿದಿರಲಿ

  • ಆನೆ ಕಾರಿಡಾರ್‌ಗಳು ಕಿರಿದಾದ, ನೈಸರ್ಗಿಕ ಆವಾಸಸ್ಥಾನದ ಸಂಪರ್ಕಗಳಾಗಿದ್ದು, ಆನೆಗಳಿಗೆ ಮಾನವರಿಂದ ತೊಂದರೆಯಾಗದಂತೆ ಸುರಕ್ಷಿತ ಆವಾಸಸ್ಥಾನಗಳ ನಡುವೆ ಚಲಿಸಲು ಅನುವು ಮಾಡಿಕೊಡುತ್ತದೆ.
  • 2017ರಲ್ಲಿನ ಅಂದಾಜಿನಂತೆ, ಭಾರತದಲ್ಲಿ 30 ಸಾವಿರದಷ್ಟು ಆನೆಗಳಿದ್ದವು. ಇದು ಜಗತ್ತಿನಲ್ಲಿರುವ ಒಟ್ಟು ಪ್ರಾಣಿಗಳ ಸಂಖ್ಯೆಯ ಶೇ 60ರಷ್ಟಾಗುತ್ತದೆ.
  • 2023 ರ ಮೇ ತಿಂಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕರ್ನಾಟಕ ಅರಣ್ಯ ಇಲಾಖೆ ಆನೆಗಳ ಗಣತಿ ನಡೆಸಿದೆ. ರಾಜ್ಯದ 32 ವಿಭಾಗಗಳಲ್ಲಿ ನಡೆದ ಆನೆ ಗಣತಿ ನಡೆದಿದ್ದು, ಈ ಗಣತಿಯಲ್ಲಿ ಕರ್ನಾಟಕದಲ್ಲಿ ಒಟ್ಟು 6395 ಆನೆಗಳು ಇವೆ ಎಂದು ಖಚಿತವಾಗಿದೆ. ಅದರಲ್ಲೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಚ್ಚು ಆನೆಗಳು ಇರುವುದು ಪತ್ತೆಯಾಗಿವೆ. ಆ ಮೂಲಕ ಕರ್ನಾಟಕ  ರಾಜ್ಯವು ಆನೆಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ