Published on: March 2, 2024

‘ಭಾರತದಲ್ಲಿ ಚಿರತೆಗಳ ಸ್ಥಿತಿ 2022’ ವರದಿ

‘ಭಾರತದಲ್ಲಿ ಚಿರತೆಗಳ ಸ್ಥಿತಿ 2022’ ವರದಿ

ಸುದ್ದಿಯಲ್ಲಿ ಏಕಿದೆ? ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ‘ಭಾರತದಲ್ಲಿ ಚಿರತೆಗಳ ಸ್ಥಿತಿ 2022’ ವರದಿಯನ್ನು ದೆಹಲಿಯಲ್ಲಿ ಬಿಡುಗಡೆ ಮಾಡಿದರು.

ಮುಖ್ಯಾಂಶಗಳು

  • ವರದಿಯ ಪ್ರಕಾರ, ಅರಣ್ಯ ಪ್ರದೇಶಗಳಲ್ಲಿ ಮಚ್ಚೆಯುಳ್ಳ ಚಿರತೆಗಳ ಸಂಖ್ಯೆಯನ್ನು ತೋರಿಸುತ್ತದೆ.
  • ಗಣತಿ: ಐದನೇ ಆವೃತ್ತಿಯ ಚಿರತೆ ಸಂಖ್ಯೆಯ ಅಂದಾಜು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ (WII), ರಾಜ್ಯ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ನಡೆಸಲಾಯಿತು.
  • ಇದು ಭಾರತದ 18 ರಾಜ್ಯಗಳನ್ನು ಒಳಗೊಂಡಿದೆ ಮತ್ತು ಸುಮಾರು 70% ಪ್ರಾಣಿಗಳ ನಿರೀಕ್ಷಿತ ಆವಾಸಸ್ಥಾನದ ಮೇಲೆ ಕೇಂದ್ರೀಕರಿಸಿದೆ.
  • ಪ್ರಮುಖ ಹುಲಿ ಸಂರಕ್ಷಣಾ ಭೂದೃಶ್ಯಗಳನ್ನು ಒಳಗೊಂಡಿರುವ 18 ಹುಲಿ ರಾಜ್ಯಗಳೊಳಗಿನ ಅರಣ್ಯದ ಆವಾಸಸ್ಥಾನಗಳ ಮೇಲೆ ಅಂದಾಜು ಕೇಂದ್ರೀಕರಿಸಿದೆ. ಅರಣ್ಯೇತರ ಅರೆ-ಶುಷ್ಕ ಪ್ರದೇಶ ಮತ್ತು ಎತ್ತರದ ಹಿಮಾಲಯ ಪ್ರದೇಶಗಳನ್ನು ಹೊರಗಿಡಲಾಗಿದೆ.
  • 6,41,449 ಕಿಮೀ ವ್ಯಾಪಿಸಿರುವ ಪ್ರದೇಶಗಳಲ್ಲಿ ಹೆಜ್ಜೆ ಗುರುತು ಮತ್ತು 32,803 ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳು ಚಿರತೆಗಳ 85,488 ಫೋಟೋ-ಕ್ಯಾಪ್ಚರ್‌ಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ವರದಿಯ ವಿವರ

ಚಿರತೆಗಳ ಸಂಖ್ಯೆಯ ಅಂದಾಜು: ದೇಶದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2018ರಲ್ಲಿ 12,852 ರಷ್ಟಿದ್ದ ಚಿರತೆಗಳು 2022 ರಲ್ಲಿ 13,874 ಕ್ಕೆ ಏರಿಕೆ ಕಂಡಿವೆ..

ಪ್ರಾದೇಶಿಕ ಬೆಳವಣಿಗೆ ದರ: ಮಧ್ಯ ಭಾರತವು ಚಿರತೆಗಳ ಸ್ಥಿರ ಅಥವಾ ಸ್ವಲ್ಪ ಬೆಳೆಯುತ್ತಿರುವ ಜನಸಂಖ್ಯೆಯನ್ನು ತೋರಿಸುತ್ತದೆ (2018: 8071, 2022: 8820), ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾ ಬಯಲು ಪ್ರದೇಶಗಳು ಅವನತಿಯನ್ನು ಅನುಭವಿಸಿವೆ (2018: 1253, 2022: 1109).  ಭಾರತದಾದ್ಯಂತ 2018 ಮತ್ತು 2022 ರಲ್ಲಿ ಸಮೀಕ್ಷೆ  ಮಾಡಿದ ಪ್ರದೇಶವನ್ನು ನೋಡಿದರೆ, ವಾರ್ಷಿಕವಾಗಿ 1.08% ಬೆಳವಣಿಗೆ ಇದೆ. ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ, ವಾರ್ಷಿಕವಾಗಿ -3.4% ಕುಸಿತವಿದೆ, ಆದರೆ ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳಲ್ಲಿ 1.5% ನಷ್ಟು ದೊಡ್ಡ ಬೆಳವಣಿಗೆಯ ದರ ಕಂಡುಬಂದಿದೆ.

ರಾಜ್ಯವಾರು ವಿತರಣೆ: ಮಧ್ಯಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ಚಿರತೆಗಳಿವೆ – 3907 (2018: 3421), ನಂತರ ಮಹಾರಾಷ್ಟ್ರ (2022: 1985; 2018: 1,690), ಕರ್ನಾಟಕ (2022: 1,879 ; 2018: 1,783) ಮತ್ತು ತಮಿಳುನಾಡು (2022: 1,070; 2018: 868). ಕರ್ನಾಟಕದ ಬಂಡೀಪುರ, ಭದ್ರಾ, ನಾಗರಹೊಳೆ, ದಾಂಡೇಲಿ- ಅಂಶಿ ಮತ್ತು ಬಿಆರ್‌ಟಿಯ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಚಿರತೆಗಳಿವೆ

ಆವಾಸಸ್ಥಾನಗಳು: ಹುಲಿ ಸಂರಕ್ಷಿತ ಪ್ರದೇಶಗಳು ಅಥವಾ ಅತಿ ಹೆಚ್ಚು ಚಿರತೆ ಜನಸಂಖ್ಯೆ ಹೊಂದಿರುವ ತಾಣಗಳು, ಆಂಧ್ರ ಪ್ರದೇಶದ ನಾಗಾರ್ಜುನಸಾಗರ ಶ್ರೀಶೈಲಂ, ಮಧ್ಯಪ್ರದೇಶದ ಪನ್ನ ಮತ್ತು ಸತ್ಪುರದ ಹುಲಿ ಮೀಸಲು ಭಾರತೀಯ ಚಿರತೆ

 ವೈಜ್ಞಾನಿಕ ಹೆಸರು: ಪ್ಯಾಂಥೆರಾ ಪಾರ್ಡಸ್ ಫುಸ್ಕಾ

ಸಂರಕ್ಷಣೆ ಸ್ಥಿತಿ:

IUCN ಕೆಂಪು ಪಟ್ಟಿ: ದುರ್ಬಲ

CITES: Appendix I

ವನ್ಯಜೀವಿ (ರಕ್ಷಣೆ) ಕಾಯಿದೆ, 1972: ಅನುಸೂಚಿ I

ವರದಿ ಪ್ರಕಾರ ಕರ್ನಾಟಕದ ಸ್ಥಿತಿ

ಒಟ್ಟು ಚಿರತೆಗಳು: 1,879