Published on: October 15, 2023

ಭಾರತದ ಹೊರಗಿನ ಅತಿ ದೊಡ್ಡ ಹಿಂದೂ ದೇವಾಲಯ

ಭಾರತದ ಹೊರಗಿನ ಅತಿ ದೊಡ್ಡ ಹಿಂದೂ ದೇವಾಲಯ

ಸುದ್ದಿಯಲ್ಲಿ ಏಕಿದೆ? ಭಾರತದ ಹೊರಗಿನ ಅತಿ ದೊಡ್ಡ ಹಿಂದೂ ದೇವಾಲಯ ಅಮೆರಿಕದಲ್ಲಿ ಉದ್ಘಾಟನೆಗೊಂಡಿದೆ. ಬೋಚಸನ್ವಾಸಿ ಶ್ರೀ ಅಕ್ಷರಪುರುಷೋತ್ತಮ ಸ್ವಾಮಿ ಸಂಸ್ಥಾನ್ (BAPS) ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆ ನಗರದಲ್ಲಿ ಆರಂಭಗೊಂಡಿದೆ.

ಮುಖ್ಯಾಂಶಗಳು

  • ಈ ದೇವಾಲಯವನ್ನು ಇಟಲಿ ಮತ್ತು ಬಲ್ಗೇರಿಯಾ ವಿಧದ ಅಮೃತಶಿಲೆಯಿಂದ ರಚಿಸಲಾಗಿದೆ.
  • ದೇವಾಲಯವು 183 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.
  • ದೇವಾಲಯದ ಗೋಡೆಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಅಬ್ರಹಾಂ ಲಿಂಕನ್ ಸೇರಿದಂತೆ ಐತಿಹಾಸಿಕ ವ್ಯಕ್ತಿಗಳ ಪ್ರತಿರೂಪವನ್ನು ಕೆತ್ತನೆ ಮಾಡಲಾಗಿದೆ.
  • ಪ್ರಪಂಚದಾದ್ಯಂತದ 12,500 ಸ್ವಯಂಸೇವಕರು ಈ ದೇವಾಲಯವನ್ನು ನಿರ್ಮಿಸಿದ್ದಾರೆ.
  • 2011 ರಲ್ಲಿ ಅಕ್ಷರಧಾಮ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

ಶಿಲ್ಪ ವಿನ್ಯಾಸ: ಪ್ರಾಚೀನ ಹಿಂದೂ ದೇವಸ್ಥಾನದ ಶಿಲ್ಪ ವಿನ್ಯಾಸ ಆಧರಿಸಿದ  10,000 ಮೂರ್ತಿಗಳನ್ನು ಮಂದಿರದ ಸುತ್ತಲೂ ಕಾಣಬಹುದಾಗಿದೆ

ವಿಶೇಷತೆ : ವಿಶ್ವದ 300 ಪ್ರಮುಖ ನದಿಗಳ ನೀರನ್ನು  ತುಂಬಿಸಲಾಗಿರುವ ಬ್ರಹ್ಮಕುಂಡವನ್ನು  ಮಂದಿರದ ಸಂಕೀರ್ಣದಲ್ಲಿ ಕಾಣಬಹುದಾಗಿದೆ 

ನಿಮಗಿದು ತಿಳಿದಿರಲಿ

  • ವಿಶ್ವದಲ್ಲಿ ಅತ್ಯಂತ ದೊಡ್ಡ ದೇವಾಲಯ ಸಂಕೀರ್ಣ ಎಂಬ ಹೆಗ್ಗಳಿಕೆಗೆ 12ನೇ ಶತಮಾನದಲ್ಲಿ ನಿರ್ಮಿತ  ಕಾಂಬೋಡಿಯಾದ ಆಂಗ್ ಕೋರ್ ವ್ಯಾಟ್ (400 ಎಕರೆ) ಪಾತ್ರವಾಗಿದೆ. ಇದು ರಾಜ    ಸೂರ್ಯವರ್ಮನನಿಂದ  ನಿರ್ಮಿತ ಮಂದಿರವಾಗಿದೆ  ಸದ್ಯ ಯೂನೆಸ್ಕೋದ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ.