Published on: March 17, 2024

ಭಾರತ್ ಶಕ್ತಿ ಪ್ರದರ್ಶನ

ಭಾರತ್ ಶಕ್ತಿ ಪ್ರದರ್ಶನ

ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, ರಾಜಸ್ಥಾನದ ಪೋಖ್ರಾನ್‌ನಲ್ಲಿ ಭಾರತದ ಮೂರು ಸೇನೆಗಳ ಅಂದರೆ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಗಳ ಮಿಲಿಟರಿ ವ್ಯಾಯಾಮ 2024 ರ ಭಾರತ್ ಶಕ್ತಿ ವ್ಯಾಯಾಮ ನಡೆಯಿತು. ಸೇನೆಯ ವಿಶೇಷ ಪಡೆಗಳು, ಭಾರತೀಯ ನೌಕಾಪಡೆಯ ಮಾರ್ಕೋಸ್ ಮತ್ತು ಭಾರತೀಯ ವಾಯುಪಡೆಯ ಗರುಡನೊಂದಿಗೆ ಅಭ್ಯಾಸವು ಪ್ರಾರಂಭವಾಯಿತು.

ಮುಖ್ಯಾಂಶಗಳು

  • ಈ ಪ್ರದರ್ಶನದಲ್ಲಿ ಎಲ್ಸಿಎ ತೇಜಸ್, ಎಎಲ್ಎಚ್ ಎಂಕೆ–4, ಎಲ್ಸಿಎಚ್ ಪ್ರಚಂಡ, ಮೊಬೈಲ್ಡ್ರೋ ಣ್ ನಿರೋಧಕ ವ್ಯವಸ್ಥೆ, ಬಿಎಂಪಿ–2 ಹಾಗೂ ಅದರ ಇತರಮಾದರಿಗಳು, ನಾಗ್ ಕ್ಷಿಪಣಿ ವಾಹಕ, ಟಿ90 ಟ್ಯಾಂ ಕ್ಗಳು, ಧನುಶ್, ಕೆ9 ವಜ್ರ ಮತ್ತು ಪಿನಾಕ ರಾಕೇಟ್ಗಳು ತಮ್ಮ ಸಾಮರ್ಥ್ಯ ತೋರಿದವು.
  • ‘ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಏನನ್ನೂ ಗುರಿಯಾಗಿರಿಸಿಕೊಳ್ಳದೇ ನಡೆದ ಮೊದಲ ಸೇನಾ ಪ್ರದರ್ಶನ ಇದಾಗಿದೆ’

ವ್ಯಾಯಾಮದ ಉದ್ದೇಶ

ಆತ್ಮರಕ್ಷಣೆಯ ಶಕ್ತಿಯ ಪ್ರದರ್ಶನ: ಇದು ದೇಶದ ಪರಾಕ್ರಮದ ಪ್ರದರ್ಶನವಾಗಿ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ವೇದಿಕೆಗಳ ಒಂದು ಶ್ರೇಣಿಯನ್ನು ಪ್ರದರ್ಶಿಸಿತು. ಸ್ಥಳೀಯ ರಕ್ಷಣಾ ಸಾಮರ್ಥ್ಯಗಳ ಜೊತೆಗೆ, ಸಂವಹನ, ತರಬೇತಿ, ಪರಸ್ಪರ ಕಾರ್ಯಸಾಧ್ಯತೆ ಮತ್ತು ಸರಕು ಸೇವೆ ಕ್ಷೇತ್ರಗಳಲ್ಲಿ ಮೂರು ಪಡೆಗಳ ಏಕೀಕರಣವನ್ನು ಪ್ರದರ್ಶಿಸುವ ಗುರಿಯನ್ನುಹೊಂದಿದೆ.