Published on: November 14, 2021

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ

ಸುದ್ಧಿಯಲ್ಲಿ ಏಕಿದೆ ? ನವೆಂಬರ್ 14 ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನ. ಈ ದಿನವನ್ನು ಮಕ್ಕಳ ದಿನಾಚರಣೆ ಎಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.

  • ಮಕ್ಕಳ ಬಗೆಗಿನ ಪ್ರೀತಿಯ ಕಾರಣದಿಂದಲೇ ನೆಹರು ಅವರಿಗೆ ಚಾಚಾ ನೆಹರು ಎಂಬ ಹೆಸರೂ ಬಂದಿತ್ತು. ಹೀಗಾಗಿ, ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ನವೆಂಬರ್ 20ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ, ನೆಹರು ಅವರ ನಿಧನಾನಂತರ ಅವರ ಗೌರವಾರ್ಥ 1964ರಿಂದ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು.
  • ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಅರಿವನ್ನು ಮೂಡಿಸುವ ಸಲುವಾಗಿ ಭಾರತದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಶಾಲೆಗಳಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ದಿನದ ಸಡಗರಕ್ಕೆ ಇನ್ನಷ್ಟು ರಂಗು ತರಲಾಗುತ್ತದೆ
  • ಮಕ್ಕಳ ಹಕ್ಕು ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20 ರಂದು ‘ಯುನಿವರ್ಸಲ್ ಚಿಲ್ಡ್ರನ್ ಡೇ ಜೂನ್ 1 ‘ಇಂಟರ್ ನ್ಯಾಷನಲ್ ಚಿಲ್ಡ್ರನ್ ಡೇ ಆಚರಣೆಯಲ್ಲಿದೆ. ಇಂದು ಬಹಳಷ್ಟು ದೇಶಗಳು ತಮ್ಮ ಮಕ್ಕಳ ಪ್ರೇಮಿ ರಾಷ್ಟ್ರ ನಾಯಕರೊಬ್ಬರ ಜನ್ಮದಿನವನ್ನು ಮಕ್ಕಳ ದಿನಾಚರಣೆ ರೂಪದಲ್ಲಿ ಆಚರಿಸುತ್ತವೆ.