Published on: March 21, 2024

ಮಹಿಳಾ ಪ್ರೀಮಿಯರ್ ಲೀಗ್ (WPL) 2024

ಮಹಿಳಾ ಪ್ರೀಮಿಯರ್ ಲೀಗ್ (WPL) 2024

ಸುದ್ದಿಯಲ್ಲಿ ಏಕಿದೆ? ದೆಹಲಿಯ ಅರುಣ್‌ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಫೈನಲ್‌ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 8 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ವುಮೆನ್ಸ್ ಪ್ರೀಮಿಯರ್‌ ಲೀಗ್‌ ಮುಡಿಗೇರಿಸಿಕೊಂಡಿದೆ.

ಮುಖ್ಯಾಂಶಗಳು

ಆವೃತ್ತಿ: ಎರಡನೇ ಆವೃತ್ತಿ

ಬೆಂಗಳೂರು ಮತ್ತು ದೆಹಲಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು.

WPL ನ ಆರ್ ಸಿ ಬಿ ತಂಡದ ಕ್ಯಾಪ್ಟನ್: ಸ್ಮೃತಿ ಮಂದಣ್ಣ ಮತ್ತು ಕೋಚ್: ಲ್ಯೂಕ್ ವಿಲಿಯಮ್ಸ್

WPL ದೆಹಲಿ ತಂಡದ ಕ್ಯಾಪ್ಟನ್: ಮೆಗ್ ಲ್ಯಾನಿಂಗ್

ಅತಿ ಹೆಚ್ಚು ರನ್ ಗಳನ್ನು ಪಡೆದವರು:  ಎಲ್ಲಿಸ್ ಪೆರ್ರಿ: 9 ಪಂದ್ಯಗಳಲ್ಲಿ 347 ರನ್,

ಶ್ರೇಯಾಂಕ ಪಾಟೀಲ್: 8 ಪಂದ್ಯಗಳು, 21.3 ಓವರಗಳಲ್ಲಿ, 13 ವಿಕೆಟ್ಗಳನ್ನು ಪಡೆದಿದ್ದಾರೆ

ಮಹಿಳಾ ಪ್ರೀಮಿಯರ್ ಲೀಗ್ (WPL) ಬಗ್ಗೆ

ಪ್ರಾಯೋಜಕತ್ವದ ಕಾರಣಗಳಿಗಾಗಿ TATA WPL ಎಂದೂ ಕರೆಯಲ್ಪಡುತ್ತದೆ.

ಇದು ಭಾರತದಲ್ಲಿನ ಮಹಿಳಾ ಟ್ವೆಂಟಿ20 ಕ್ರಿಕೆಟ್ ಫ್ರಾಂಚೈಸ್ ಲೀಗ್ ಆಗಿದೆ.

ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಜ್ ಸೇರಿದಂತೆ ಒಟ್ಟು 5 ತಂಡಗಳು ಭಾಗವಹಿಸಿದ್ದವು

ಒಡೆತನ ಮತ್ತು ನಿರ್ವಹಣೆ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI).

ಮೊದಲ ಆವೃತ್ತಿ:

  • ಮಾರ್ಚ್ 2023
  • ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಉದ್ಘಾಟನಾ ಪ್ರಶಸ್ತಿಯನ್ನು ಗೆದ್ದುಕೊಂಡಿತು. ರನ್ನರ್ ಅಪ್ ತಂಡ :ದೆಹಲಿ
  • ಮುಂಬೈ ಮತ್ತು ನವಿ ಮುಂಬೈನಲ್ಲಿ ಪಂದ್ಯಗಳು ನಡೆದಿದ್ದು, ಐದು ಫ್ರಾಂಚೈಸಿಗಳು ಭಾಗವಹಿಸಿದ್ದವು