Published on: November 19, 2021

ಮಹಿಳೆಯರ ಉದ್ಯಮ

ಮಹಿಳೆಯರ ಉದ್ಯಮ

ಸುದ್ಧಿಯಲ್ಲಿ ಏಕಿದೆ ? ದುರ್ಬಲ ವರ್ಗದ ಮಹಿಳೆಯರಿಗೆ ರಿಯಾಯಿತಿ ಸೇರಿದಂತೆ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಸ್ವಂತ ಉದ್ಯಮ ಆರಂಭಿಸಲು ಮುಂದೆ ಬಂದರೆ, ಅಂತಹವರಿಗೆ ಇಲಾಖೆಯ ವತಿಯಿಂದ ಸಾಧ್ಯವಿರುವ ಎಲ್ಲಾ ಅಗತ್ಯ ಸವಲತ್ತುಗಳನ್ನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.

ಮಹಿಳಾ ಉದ್ಯಮಿಗಳನ್ನು ಏಕೆ ಉತ್ತೇಜಿಸಬೇಕು ?

  • ಇಂದು ಭಾರತವು 13.5 – 15.7 ಮಿಲಿಯನ್ ಮಹಿಳಾ ಸ್ವಾಮ್ಯದ ಉದ್ಯಮಗಳನ್ನು ಹೊಂದಿದೆ. ಇದು ಎಲ್ಲಾ ಉದ್ಯಮಗಳಲ್ಲಿ 20% ಅನ್ನು ಪ್ರತಿನಿಧಿಸುತ್ತದೆ. ಇಂತಹ ಮಾನದಂಡಗಳ ಕಡೆಗೆ ಉದ್ಯಮ ಶೀಲತೆಯ ಪ್ರಮಾಣ ಮತ್ತು ಗುಣಮಟ್ಟವನ್ನು ವೇಗಗೊಳಿಸುವುದರಿಂದ 30 ಮಿಲಿಯನ್ ಮಹಿಳಾ ಸ್ವಾಮ್ಯದ ಉದ್ಯಮಗಳನ್ನು ರಚಿಸಬಹುದು. ಅದರಲ್ಲಿ 40% ಸ್ವಯಂ ಉದ್ಯೋಗಕ್ಕಿಂತ ಹೆಚ್ಚಾಗಿರುತ್ತದೆ. ಮಹಿಳಾ ಉದ್ಯಮಿಗಳು ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುವ ಉದ್ಯಮಗಳನ್ನು ಪ್ರಾರಂಭಿಸಲು ಇತರ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತಾರೆ

ಮಹಿಳಾ ಉದ್ಯಮ ಶೀಲತೆಯನ್ನು ಉತ್ತೇಜಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು

  • ಮಹಿಳಾ ಉದ್ಯಮ ಶೀಲತೆಯನ್ನು ಉತ್ತೇಜಿಸಲು ಸರ್ಕಾರವು ಮುದ್ರಾ ಯೋಜನೆ, ಅನ್ನಪೂರ್ಣ ಯೋಜನೆ, ದೀನ ಶಕ್ತಿ ಯೋಜನೆ ಮತ್ತು ಟ್ರೇಡ್ (ವ್ಯಾಪಾರ – ಸಂಬಂಧಿತ ಉದ್ಯಮಶೀಲತೆ ನೆರವು ಮತ್ತು ಅಭಿವೃದ್ಧಿ) ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳಾ ಉದ್ಯಮಿಗಳು ಹೊಸ ಯೋಜನೆಗಳನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲು ಇದು ಅನುಕೂಲ ಕಲ್ಪಿಸಲಿದೆ
  • ರಾಜ್ಯ ಸರ್ಕಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಕೌಶಲ್ಯ ತರಬೇತಿ ಕಾರ್ಯಕ್ರಮ, ದೇವದಾಸಿಯರ ಪುನರ್ವಸತಿ ಕಾರ್ಯಕ್ರಮ, ದೇವದಾಸಿ ಪಿಂಚಣಿ ಯೋಜನೆ, ಮಾಜಿ ದೇವದಾಸಿಯರಿಗೆ ವಸತಿ, ತೃತೀಯ ಲಿಂಗಿಗಳ ಪುನರ್ವಸತಿ ಯೋಜನೆ, ಮಹಿಳಾ ಉದ್ಯಮಿಗಳಿಗೆ ಬಡ್ಡಿ ಸಹಾಯ ಧನ ಯೋಜನೆ, ಸಮೃದ್ಧಿ ಯೋಜನೆಗಳಂತಹ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು,ಇದು ಮಹಿಳೆಯರ ಉನ್ನತಿಗಾಗಿ ಮಾರುಕಟ್ಟೆ ನೆರವು ಒದಗಿಸುತ್ತದೆ
  • ಮೈಸೂರು, ಧಾರವಾಡ, ಕಲಬುರಗಿ ‌ಮತ್ತು ಹಾರೋಹಳ್ಳಿಯಲ್ಲಿ ಮಹಿಳೆಯರಿಗೆ ಮೀಸಲಾದ ವಿಶೇಷ ಕೈಗಾರಿಕಾ ಪಾರ್ಕ್ ಅನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ.