Published on: January 10, 2022

ಮಾವು, ದಾಳಿಂಬೆ ರಫ್ತು

ಮಾವು, ದಾಳಿಂಬೆ ರಫ್ತು

ಸುದ್ಧಿಯಲ್ಲಿ ಏಕಿದೆ ? ಭಾರತದ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಭಾರತದಿಂದ ಅಮೆರಿಕಾಗೆ ಮಾವು ಮತ್ತು ದಾಳಿಂಬೆ ರಫ್ತಾಗಲಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಹಿನ್ನಲೆ

  • 2021 ರ ನ.23 ರಂದು ನಡೆದ 12 ನೇ ಭಾರತ- ಅಮೆರಿಕ ವ್ಯಾಪಾರ ನೀತಿ ವೇದಿಕೆ ಸಭೆಯಲ್ಲಿ ಉಭಯ ರಾಷ್ಟ್ರಗಳನಡುವೆ 2 Vs 2 ಕೃಷಿ ಮಾರುಕಟ್ಟೆ ಪ್ರವೇಶ ಅಂಶಗಳಿಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು
  • ಈ ಒಪ್ಪಂದದ ಪ್ರಕಾರ, ಭಾರತದ ಮಾವು, ದಾಳಿಂಬೆ, ದಾಳಿಂಬೆ ಆರಿಲ್ ನ್ನು ಅಮೆರಿಕಾದ ಮಾರುಕಟ್ಟೆಗೆ ರಫ್ತು ಮಾಡುವುದು, ಅಮೆರಿಕಾದ ಚೆರ್ರಿ, ಅಲ್ಫಾಲ್ಫಾ ಹೇ ಗಳನ್ನು ಭಾರತದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಫೆಬ್ರವರಿಯಿಂದ ಪ್ರಾರಂಭವಾಗಲಿದೆ.
  • ಕಳೆದ 2 ವರ್ಷಗಳಿಂದ ಭಾರತ ಅಮೆರಿಕಾಗೆ ಮಾವನ್ನು ರಫ್ತು ಮಾಡಿರಲಿಲ್ಲ.