Published on: August 10, 2023

ಮಿಷನ್ ಇಂದ್ರಧನುಷ್ 5.0 ಅಭಿಯಾನ

ಮಿಷನ್ ಇಂದ್ರಧನುಷ್ 5.0 ಅಭಿಯಾನ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯದಲ್ಲಿ  ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ ಐದು ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಲು ಹಾಗೂ ಉತ್ತೇಜಿಸಲು ಸರ್ಕಾರ ಮಿಷನ್ ಇಂದ್ರ ಧನುಷ್ 5.0 ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಮುಖ್ಯಾಂಶಗಳು

  • ಆಯೋಜಿಸಿದವರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  • ಇಂದ್ರ ಧನುಷ್ 5.0 ಅಭಿಯಾನ ಆಗಸ್ಟ್ 7ರಿಂದ ಆರಂಭವಾಗಿ ಅಕ್ಟೋಬರ್ 12ರವರೆಗೆ ನಡೆಯಲಿದ್ದು, ಲಸಿಕೆ ಹಾಕದ ಮಕ್ಕಳನ್ನು ಗುರುತಿಸಲು ಆರೋಗ್ಯ ಇಲಾಖೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದೆ.
  • ಬಿಬಿಎಂಪಿ ಅಂಗನವಾಡಿ, ಆರೋಗ್ಯ ಕೇಂದ್ರ ಮತ್ತು ಸಮುದಾಯ ಕೇಂದ್ರಗಳಲ್ಲಿ ಆರು ದಿನಗಳ ಕಾಲ 114 ಸಂಚಾರಿ ತಂಡಗಳು ಸೇರಿದಂತೆ ಒಟ್ಟು 1,067 ಲಸಿಕಾ ಶಿಬಿರಗಳನ್ನು ನಿಯೋಜಿಸಲಾಗುವುದು.

ಪ್ರಯೋಜನ

  • ನಿತ್ಯದ ಸಮಯದಲ್ಲಿ ಲಸಿಕೆ ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚಲು ಮತ್ತು ಲಸಿಕೆ ನೀಡಲು ಅವರಿಗೆ ಅನುವು ಮಾಡಿಕೊಡಲು ಇದು ಸಹಕಾರಿಯಾಗಲಿದೆ.
  • ಡಿಫ್ತಿರಿಯಾ, ಪೋಲಿಯೊ, ಕ್ಷಯ, ದಡಾರ, ಹೆಪಟೈಟಿಸ್ ಬಿ, ನ್ಯುಮೋನಿಯಾ ಮತ್ತು ಇತರವುಗಳಂತಹ ಕೆಲವು ರೋಗಗಳನ್ನು ಲಸಿಕೆಯಿಂದ ಮಾತ್ರ ತಡೆಯಬಹುದು. ಮೆನಿಂಜೈಟಿಸ್‌ಗೆ ಕಾರಣವಾಗುವ ಹೀಮೊಫಿಲಸ್ ಇನ್‌ಫ್ಲುಯೆಂಜಾ ಟೈಪ್ ಬಿ ಅನ್ನು ಲಸಿಕೆ ಮೂಲಕವೂ ದೂರಾಗಿಸಬಹುದು.
  • ದಡಾರ ಮತ್ತು ರುಬೆಲ್ಲಾ ವಿರುದ್ಧ ಹೋರಾಡಲಿದೆ.

ಮಿಷನ್ ಇಂದ್ರಧನುಷ್

  • ಮಳೆಬಿಲ್ಲಿನ ಏಳು ಬಣ್ಣಗಳು ಸೂಚಿಸುವ, ಏಳು ರೋಗಗಳಾದ ಸಿಡುಬು ಡಿಫ್ತೀರಿಯಾ , ನಾಯಿಕೆಮ್ಮು, ಧನುರ್ವಾಯು, ಪೋಲಿಯೊ , ಕ್ಷಯರೋಗ, ದಡಾರ ಮತ್ತು ಹೆಪಟೈಟಿಸ್ B ಗಳನ್ನು ತಡೆಗಟ್ಟಬಹುದಾದ ಏಳು ಲಸಿಕೆಯನ್ನು ಮಕ್ಕಳಿಗೆ ಹಾಕುವ ಗುರಿ ಹೊಂದಿದೆ.
  • ಪ್ರಾರಂಭ : 2014
  • ಸಚಿವಾಲಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ