Published on: October 10, 2023

‘ಮುಖ್ಯಮಂತ್ರಿ ಉಪಹಾರ ಯೋಜನೆ’

‘ಮುಖ್ಯಮಂತ್ರಿ ಉಪಹಾರ ಯೋಜನೆ’

ಸುದ್ದಿಯಲ್ಲಿ ಏಕಿದೆ? ತೆಲಂಗಾಣದಲ್ಲಿ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬೆಳಗ್ಗಿನ ತಿಂಡಿ ನೀಡುವ ‘ಮುಖ್ಯಮಂತ್ರಿ ಉಪಹಾರ ಯೋಜನೆ’ಗೆ ತೆಲಂಗಾಣದಲ್ಲಿ ಚಾಲನೆ ದೊರೆತಿದೆ.

ಮುಖ್ಯಾಂಶಗಳು

  • ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 23 ಲಕ್ಷ ಮಕ್ಕಳಿಗೆ ನಿತ್ಯವೂ ಆಹಾರ ಒದಗಿಸುವ ಗುರಿ ಈ ಯೋಜನೆಯದ್ದು.
  • ‘ಪೌಷ್ಠಿಕಾಂಶವುಳ್ಳ ಹಾಗೂ ರುಚಿಕಟ್ಟಾದ ಉಪಹಾರ ನೀಡಲಾಗುವುದು’ ಆಹಾರದ ಗುಣಮಟ್ಟ ಕಾಪಾಡುವ ಉದ್ದೇಶದಿಂದ ನಿಯಮಿತವಾಗಿ ಹಾಗೂ ನಿರಂತರವಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು.
  • ಸರ್ಕಾರಿ ಶಾಲೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯಾಪ್ತಿಗೆ ಬರುವ ಎಲ್ಲ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದೆ.

ಉದ್ದೇಶ

  • ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಗೆ ಹೋಗುವ ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆಯಾಗದಂತೆ ಮತ್ತು ದುಡಿಯುವ ವರ್ಗದ ತಾಯಂದಿರಿಗೆ ನೆರವಾಗುವ ಸಲುವಾಗಿ ಈ ಯೋಜನೆ ಆರಂಭಿಸಲಾಗಿದೆ.