Published on: July 23, 2023

ಮೈಸೂರ್ ಪಾಕ್

ಮೈಸೂರ್ ಪಾಕ್

ಸುದ್ದಿಯಲ್ಲಿ ಏಕಿದೆ?  ಮೈಸೂರ್​ ಪಾಕ್​ ಇದೀಗ ವಿಶ್ವ ಸ್ಟ್ರೀಟ್​ ಫುಡ್​ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.

ಮುಖ್ಯಾಂಶಗಳು

  • 4 ರೇಟಿಂಗ್ ಪಡೆದ ಮೈಸೂರು ಪಾಕ್, ಆನ್‌ಲೈನ್‌ ಮಾರ್ಕೆಟ್​ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ.

ಭಾರತದ ಮೂರು ಖಾದ್ಯಗಳು

  • ಆನ್​ಲೈನ್​ ಟೂರ್​ ಗೈಡ್​ ಟೇಸ್ಟ್​ ಅಟ್ಲಾಸ್​ ಇತ್ತೀಚಿಗೆ ಬಿಡುಗಡೆ ಮಾಡಿದ ವಿಶ್ವದ 50 ಅತ್ಯುತ್ತಮ ಬೀದಿ ಆಹಾರ ಸಿಹಿತಿಂಡಿಗಳು ಪಟ್ಟಿಯಲ್ಲಿ ಭಾರತದ ಮೂರು ಖಾದ್ಯಗಳು ಸ್ಥಾನ ಪಡೆದಿದೆ. ಮೈಸೂರು ಪಾಕ್​ 14ನೇ ಸ್ಥಾನದಲ್ಲಿದ್ದರೆ. ಕುಲ್ಫಿ 18ನೇ ಸ್ಥಾನ ಹಾಗೂ ಕುಲ್ಫಿ ಫಲೂದ 32ನೇ ಸ್ಥಾನದಲ್ಲಿದೆ. ಮೊಘಲ್ ಸಾಮ್ರಾಜ್ಯದ ಯುಗದಲ್ಲಿ ಹಿಮಾಲಯದ ಪ್ರಾಚೀನ ನಿವಾಸಿಗಳು ಕುಲ್ಫಿಯನ್ನು ಕಂಡುಹಿಡಿದರು ಎಂದು ನಂಬಲಾಗಿದೆ.

ಮೈಸೂರು ಪಾಕ್ ಹಿನ್ನಲೆ

  • 90 ವರ್ಷಗಳ ಹಿಂದೆ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಭಾಣಸಿಗರಾಗಿದ್ದ ಮಾದಪ್ಪ ಎಂಬುವವರು ಆಗಿನ ಮಹಾರಾಜ ಕೃಷ್ಣರಾಜ ಒಡೆಯರ್​ ಅವರು ಊಟಕ್ಕೆ ಕುಳಿತಾಗ ತಟ್ಟೆಯಲ್ಲಿ ಸಿಹಿ ಇಲ್ಲದಿರುವುದನ್ನು ಗಮನಿಸಿ ಅವಸರದಲ್ಲಿ ಸಕ್ಕರೆ, ತುಪ್ಪ ಹಾಗೂ ಕಡ್ಲೇಹಿಟ್ಟಿನ ಮಿಶ್ರಣದಿಂದ ಖಾದ್ಯವನ್ನು ತಯಾರಿಸಿಕೊಟ್ಟು ಬಾರಿ ಪ್ರಶಂಸೆ ಗಿಟ್ಟಿಸಿದ್ದರು.