Published on: July 2, 2023

ಯುಕೆ ಇಂಡಿಯಾ ಪ್ರಶಸ್ತಿಗಳು

ಯುಕೆ ಇಂಡಿಯಾ ಪ್ರಶಸ್ತಿಗಳು

ಸುದ್ದಿಯಲ್ಲಿ ಏಕಿದೆ? 5 ನೇ ವಾರ್ಷಿಕ  ಯುಕೆ ಇಂಡಿಯಾ ಪ್ರಶಸ್ತಿ ಸಮಾರಂಭವನ್ನು ವೀಕ್ ಅಂಗವಾಗಿ ಇಂಡಿಯನ್ ಗ್ಲೋಬಲ್ ಫೋರಮ್ ಆಯೋಜಿಸಿತ್ತು.

ಸಂದ ಪ್ರಶಸ್ತಿಗಳು

  • ಕ್ರೀಡಾ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರತಿ ಮತ್ತು ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಅವರಿಗೆ ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
  • ‘ಎಲಿಜಬೆತ್: ದಿ ಗೋಲ್ಡನ್ ಏಜ್’ ಚಲಚಿತ್ರದ ನಿರ್ದೇಶಕ ಶೇಖರ್ ಕಪೂರ್ ಅವರು ಎರಡೂ ದೇಶಗಳಲ್ಲಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.
  • ಹಿರಿಯ ಸೈನಿಕ ರಾಜಿಂದರ್ ಸಿಂಗ್ ಧತ್ ಅವರಿಗೆ ಪ್ರತಿಷ್ಠಿತ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಯನ್ನು ನೀಡಿದರು. ಅವರು “ಅವಿಭಜಿತ ಭಾರತೀಯ ಮಾಜಿ ಸೈನಿಕರ ಸಂಘ” ದ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ, ಈ ಸಂಘಟನೆಯು ಬ್ರಿಟಿಷ್ ಭಾರತೀಯ ಯುದ್ಧ ಪರಿಣತರನ್ನು ಒಗ್ಗೂಡಿಸುವ ಮೇಲೆ ಕೇಂದ್ರೀಕರಿಸಿದೆ.
  • ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಸಾಂಸ್ಕೃತಿಕ ವಿಭಾಗವಾದ ಲಂಡನನ ನೆಹರು ಸೆಂಟರ್, ಯುಕೆ-ಭಾರತ ಸಂಬಂಧಗಳಿಗೆ ಮಹತ್ವದ ಕೊಡುಗೆಗಾಗಿ ಯುಕೆ-ಭಾರತ ಪ್ರಶಸ್ತಿಯನ್ನು ಸ್ವೀಕರಿಸಿದೆ.
  • ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಎಫ್‌ಐಸಿಸಿಐ) ಯುಕೆ, ಯುಕೆ-ಇಂಡಿಯಾ ಅವಾರ್ಡ್ ಫಾರ್ ದಿ ಇಯರ್ ಬ್ಯುಸಿನೆಸ್ ಪ್ರಮೋಷನ್ ಆರ್ಗನೈಸೇಶನ್ ಪ್ರಶಸ್ತಿಯನ್ನು ಸ್ವೀಕರಿಸಿದೆ.
  • ಬ್ಲಾಕ್ ಫಾರ್ಮ್ ಕ್ರೌಡ್ ಇನ್ವೆಸ್ಟ್ ಗೆ ವರ್ಷದ ಮಾರುಕಟ್ಟೆ ಪ್ರವೇಶ, ಸನಮ್ ಎಸ್ 4 ಗಾಗಿ ವರ್ಷದ ಕನ್ಸಲ್ಟೆನ್ಸಿ ಸಿರಿಲ್ ಅಮರ್ ಚಂದ ಮಂಗಲ್ ದಾಸ್ ಅವರಿಗೆ ವರ್ಷದ ಕಾನೂನು ಅಭ್ಯಾಸ ಮತ್ತು ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ ಸಿ ಗೆ ವರ್ಷದ ಹಣಕಾಸು ಸೇವೆಗಳ ಸಂಸ್ಥೆಗಳ ಪ್ರಶಸ್ತಿಗಳು, ಎಂಫಾಸಿಸ್ ವರ್ಷದ ಟೆಕ್ನಾಲಜಿ ಕಂಪನಿ ಪ್ರಶಸ್ತಿಯನ್ನು ಪಡೆದರೆ ಆಕ್ಷನ್ ಏಡ್ ಯುಕೆ ವರ್ಷದ ಸಾಮಾಜಿಕ ಪರಿಣಾಮ ಯೋಜನೆ ಎಂದು ಘೋಷಿಸಲಾಯಿತು.

ಪ್ರಶಸ್ತಿ ಯಾರಿಗೆ ನೀಡಲಾಗುತ್ತದೆ?

  • ಈ ಪ್ರಶಸ್ತಿ ವ್ಯಾಪಾರ ವೃತ್ತಿಪರ ಸೇವೆಗಳು ಸರ್ಕಾರ ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಾಯಕರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸುತ್ತವೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಗಮನಹರ ಸಾಧನೆಗಳನ್ನು ಎತ್ತಿ ತೋರಿಸುತ್ತವೆ.
  • ಈ ಪ್ರಶಸ್ತಿಗಳು ಯುಕೆ ಇಂಡಿಯಾ ಕಾರಿಡಾರ್ಗೆ ಅತ್ಯುತ್ತಮ ಕೊಡುಗೆ ನೀಡಿದವರ ಸಾಧನೆಯನ್ನು ಸಾಧನೆಗಳನ್ನು ಗುರುತಿಸುತ್ತವೆ.