Published on: September 27, 2022

ರಕ್ತದಾನ ಅಮೃತ ಮಹೋತ್ಸವ

ರಕ್ತದಾನ ಅಮೃತ ಮಹೋತ್ಸವ

ಸುದ್ದಿಯಲ್ಲಿ ಏಕಿದೆ?

ರಕ್ತದಾನ ಅಮೃತ ಮಹೋತ್ಸವ’ ಅಭಿಯಾನಕ್ಕಾಗಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ಇದಕ್ಕಾಗಿ ಇ-ರಕ್ತ್‌ ಕೋಶ್‌ ಎಂಬ ಆನ್‌ಲೈನ್‌ ಪೋರ್ಟಲ್‌ ಲಾಂಚ್‌ ಮಾಡಲಿದ್ದು, ಸೆಪ್ಟೆಂಬರ್‌ 17ರಿಂದ ಜನರು ಇದರಲ್ಲಿ ತಮ್ಮ ಹೆಸರು ನೋಂದಾಯಿಸಿ ಸ್ವಯಂಪ್ರೇರಿತ ರಕ್ತದಾನದಲ್ಲಿ ಪಾಲ್ಗೊಳ್ಳಬಹುದು.

  • ಈ ವೆಬ್‌ಸೈಟ್‌ ಮಾತ್ರವಲ್ಲದೆ ಆರೋಗ್ಯ ಸೇತು ಆಪ್‌ ಮೂಲಕವೂ ರಕ್ತದಾನಕ್ಕೆ ಹೆಸರು ನೋಂದಾಯಿಸಬಹುದಾಗಿದೆ.

ಮುಖ್ಯಾಂಶಗಳು

  • ಸೆಪ್ಟೆಂಬರ್‌ 17ಕ್ಕೆ ಒಂದು ಲಕ್ಷ ಯುನಿಟ್‌ ರಕ್ತವನ್ನು ಸಂಗ್ರಹಿಸುವ ದೊಡ್ಡ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಅಂಗವಾಗಿ ಈ ಅಭಿಯಾನ ಕೈಗೊಳ್ಳಲಾಗಿದೆ.
  • ಕೇಂದ್ರ ಆರೋಗ್ಯ ಸಚಿವಾಲಯವು ಈ ಸಂಬಂಧ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
  • ಈ ಅಭಿಯಾನವು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ (ಅ.1) ವರೆಗೆ ಮುಂದುವರೆಯಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳಲ್ಲಿ ಅಭಿಯಾನದ ಕುರಿತು ಜಾಗೃತಿ ಮೂಡಿಸಬೇಕು ಎಂದೂ ಸಚಿವಾಲಯ ಹೇಳಿದೆ.
  • “ಭಾರತದಲ್ಲಿ ರಕ್ತ ಸಂಗ್ರಹ ಸಾಮರ್ಥ್ಯವು ಉತ್ತಮವಾಗಿದೆ. ಜನರ ಪ್ರತಿಕ್ರಿಯೆಯನ್ನು ನೋಡಿಕೊಂಡು ಸಾಧ್ಯವಿರುವಷ್ಟು ದಾನಿಗಳಿಂದ ರಕ್ತ ಸಂಗ್ರಹಿಸುವ ಯೋಜನೆಯಿದೆ. ಇದು ವಿಶ್ವ ದಾಖಲೆಯನ್ನೂ ನಿರ್ಮಿಸುವ ನಿರೀಕ್ಷೆಯನ್ನು ಹೊಂದಿದೆ.

 ಉದ್ದೇಶ :

ಜನರಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ..

ವಿಶ್ವ ರಕ್ತದಾನಿಗಳ ದಿನ

  • ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್‌ನೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ.
  • ಯಾರ ಸಹಯೋಗದಲ್ಲಿ ಆಚರಿಸಲಾಗುತ್ತದೆ?ಇಂಟರ್ನ್ಯಾಷನಲ್‌ ಫೆಡರೇಶನ್ ಆಫ್‌ ರೆಡ್‌ ಕ್ರಾಸ್‌ ಮತ್ತು ರೆಡ್‌ ಕ್ರೆಸೆಂಟ್‌ ಸೊಸೈಟಿ, ಇಂಟರ್ನ್ಯಾಷನಲ್‌ ಫೆಡರೇಶನ್ ಆಫ್‌ ಬ್ಲಡ್‌ ಡೋನರ್ ಆರ್ಗನೈಸೇಶನ್‌ ಮತ್ತು ಇಂಟರ್ನ್ಯಾಷನಲ್‌ ಸೊಸೈಟಿ ಆಫ್‌ ಬ್ಲಡ್ ಟ್ರಾನ್ಸ್‌ಫ್ಯೂಷನ್‌ ಸಹಯೋಗದಲ್ಲಿ ವಿಶ್ವಾ ಆರೋಗ್ಯ ಸಂಸ್ಥೆ ಈ ದಿನವನ್ನು ಸ್ಮರಿಸುತ್ತದೆ.
  • 2022 ರ ವಿಶ್ವ ರಕ್ತದಾನಿಗಳ ಆತಿಥೇಯ ನಗರ :ಮೆಕ್ಸಿಕೋ

ಜೂನ್ 14 ರಂದು ಏಕೆ ಆಚರಿಸಲಾಗುತ್ತದೆ? 

  • ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೇನರ್‌ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್‌ಗಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್‌ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿಅಕ್ಟೋಬರ್‌ 1 ಅನ್ನು ಪ್ರತಿ ವರ್ಷ ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.
  • 2022ರ ವಿಶ್ವ ರಕ್ತದಾನಿಗಳ ದಿನದ ಥೀಮ್ : ‘ಇತರಿಗಾಗಿ ಬದುಕಿ, ರಕ್ತ ನೀಡಿ, ಜೀವವನ್ನೇ ಹಂಚಿಕೊಳ್ಳಿ’
  • ಭಾರತದಲ್ಲಿ ಪ್ರತಿ ವರ್ಷ ಬೇಕಾಗುವ ರಕ್ತ: ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್‌ ರಕ್ತ ಬೇಕಾಗುತ್ತದೆ. ಆದರೆ, ಕೇವಲ 2.5 ಕೋಟಿ ಯೂನಿಟ್‌ ಮಾತ್ರ ರಕ್ತ ಲಭ್ಯವಾಗುತ್ತದೆ.

ರಕ್ತದಾನದ ಉಪಯೋಗಗಳು

  • 18ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು. ದಾನಿಗಳು ಒಮ್ಮೆ ರಕ್ತ ದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು.
  • ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು.
  • ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ.
  • ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ.
  • ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲು ಕೂಡ ರಕ್ತದಾನ ಸಹಕಾರಿಯಾಗಲಿದೆ.