Published on: October 15, 2023

ರಾಜ್ಯ ಶಿಕ್ಷಣ ನೀತಿ

ರಾಜ್ಯ ಶಿಕ್ಷಣ ನೀತಿ

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್ ಇಪಿ) ಅನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ, ಎನ್ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಲು ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮಾಜಿ ಅಧ್ಯಕ್ಷ ಪ್ರೊ.ಸುಖ್‌ದೇವ್ ಥೋರಟ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

ಮುಖ್ಯಾಂಶಗಳು

  • 23 ಸದಸ್ಯರ ಸಮಿತಿಯಲ್ಲಿ ಒಟ್ಟಾರೆ 15 ಸದಸ್ಯರು ಮತ್ತು 8 ಶಿಕ್ಷಣ ತಜ್ಞರು/ವಿಷಯ ತಜ್ಞರನ್ನು ನೇಮಿಸಿಲಾಗಿದೆ.
  • 2024ರ ಫೆಬ್ರವರಿ 28ರೊಳಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡುವಂತೆ ಈ ಸಮಿತಿಗೆ ನಿರ್ದೇಶನ ನೀಡಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020

  • 2020 ರಲ್ಲಿ ಕೇಂದ್ರ ಸಚಿವ ಸಂಪುಟ ಎನ್ಇಪಿ ಗೆ ಅನುಮತಿ ನೀಡಿತು.
  • ಹೊಸ ನೀತಿಯು ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿ, 1986 ಅನ್ನು ಬದಲಿಸುತ್ತದೆ.

ಪ್ರೊ.ಸುಖ್ದೇವ್ ಥೋರಟ್        

  • ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರೊಫೆಸರ್, ಆರ್ಥಿಕ ಶಿಕ್ಷಣ ತಜ್ಞರು, ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಸಂಶೋಧಕರಿಗಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸರಕಾರ ಇವರಿಗೆ 2008 ರಲ್ಲಿ ಪದ್ಮಶ್ರೀ ಪ್ರಶಸ್ತಿ , 2011 ರಲ್ಲಿ ಅಂಬೇಡ್ಕರ ನ್ಯಾಷನಲ್ ಅವಾರ್ಡ್ ನೀಡಿ ಗೌರವಿಸಿದೆ.