Published on: November 18, 2021

ರಾಣಿ ಕಮಲಾಪತಿ ರೈಲ್ವೇ ನಿಲ್ದಾಣ

ರಾಣಿ ಕಮಲಾಪತಿ ರೈಲ್ವೇ ನಿಲ್ದಾಣ

ಸುದ್ಧಿಯಲ್ಲಿ ಏಕಿದೆ ?  ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ನವೀಕೃತ ಅತ್ಯಾಧುನಿಕ ರಾಣಿ ಕಮಲಾಪತಿ ರೈಲ್ವೇ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಮುಖ್ಯಾಂಶಗಳು

  • ಏರ್ಪೋರ್ಟ್‌ ಮಾದರಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲ್ವೇ ನಿಲ್ದಾಣ, ದೇಶದಲ್ಲೇ ಉತ್ತಮ ಸೌಕರ್ಯವುಳ್ಳ ರೈಲ್ವೇ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಡೆದಿದೆ.
  • ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಸುಮಾರು 450 ಕೋಟಿ ರುಪಾಯಿ ವೆಚ್ಚದಲ್ಲಿ ಈ ರೈಲ್ವೇ ನಿಲ್ದಾಣವನ್ನು ನವೀಕರಣ ಮಾಡಲಾಗಿದ್ದು, ವಿಶ್ವ ದರ್ಜೆಯ ವಿನ್ಯಾಸ, ವಿಕಲ ಚೇತನಿರಿಗೆ ವಿಶೇಷ ಸೌಲಭ್ಯ, ಬಹು-ಮಾದರಿ ಸಾರಿಗೆ, ಎಲ್‌ಇಡಿ ಪರದೆ ಮುಂತಾದ ವ್ಯವಸ್ಥೆ ಇಲ್ಲಿ ಇದೆ.
  • ನಿಲ್ದಾಣದಲ್ಲಿ ಫುಡ್‌ ಕೋರ್ಟ್‌, ರೆಸ್ಟೋರೆಂಟ್‌ಗಳು, ಹವಾನಿಯಂತ್ರಿತ ವೈಟಿಂಗ್‌ ರೂಮ್‌, ವಿಐಪಿ ಲಾಂಜ್‌ ಇದ್ದು , 160 ಸಿಸಿಟಿವಿ ಕ್ಯಾಮೆರಾಗಳು ದಿನ 24 ಗಂಟೆಯೂ ರೈಲ್ವೇ ನಿಲ್ದಾಣವನ್ನು ತಮ್ಮ ಕಣ್ಗಾವಲಿನಲ್ಲಿರಿಸಲಿವೆ. ಏಕಕಾಲಕ್ಕೆ 1110 ರಷ್ಟು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
  • ಈ ಹಿಂದೆ ಹಬೀಬ್‌ ಗಂಜ್‌ ರೈಲ್ವೇ ನಿಲ್ದಾಣವಾಗಿದ್ದ ಇದನ್ನು 18ನೇ ಶತಮಾನದ ಗೊಂಡಾ ಪ್ರದೇಶದ ಬುಡಕಟ್ಟು ರಾಣಿ ಕಮಲಾಪತಿ ಅವರ ಹೆಸರ ಹೆಸರಿನಿಂದ ಮರುನಾಮಕರಣ ಮಾಡಲಾಗಿದೆ.