Published on: December 10, 2021

ರಾಯಲ್ ಗೋಲ್ಡ್ ಮೆಡಲ್ 2022

ರಾಯಲ್ ಗೋಲ್ಡ್ ಮೆಡಲ್ 2022

ಸುದ್ಧಿಯಲ್ಲಿ ಏಕಿದೆ ?  ಖ್ಯಾತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ವಾಸ್ತುಶಿಲ್ಪಕ್ಕಾಗಿ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್(RIBA) ಪ್ರಕಟಿಸಿದೆ.

ಮುಖ್ಯಾಂಶಗಳು

  • 70 ವರ್ಷಗಳ ವೃತ್ತಿಜೀವನ ಮತ್ತು 100ಕ್ಕೂ ಹೆಚ್ಚು ವಾಸ್ತು ರಚನೆಗಳ ನಿರ್ಮಾಣದೊಂದಿಗೆ, 94 ವರ್ಷದ ದೋಷಿ ಅವರು ತಮ್ಮ ವಾಸ್ತುಶಿಲ್ಪ ಮತ್ತು ಬೋಧನೆಗಳ ಮೂಲಕ ಭಾರತ ಹಾಗೂ ಇತರೆ ದೇಶಗಳಲ್ಲಿನ ವಾಸ್ತುಶಿಲ್ಪದ ದಿಕ್ಕಿನ ಮೇಲೆ ಪ್ರಭಾವ ಬೀರಿದ್ದಾರೆ
  • ದೋಶಿ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ, ರಾಯಲ್ ಗೋಲ್ಡ್ ಮೆಡಲ್ ಅನ್ನು ರಾಣಿ ಎಲಿಜೆಬ್ತ್ II ವೈಯಕ್ತಿಕವಾಗಿ ಅನುಮೋದಿಸಿದ್ದಾರೆ ಮತ್ತು ಈ ಪ್ರಶಸ್ತಿಯನ್ನು ವಾಸ್ತುಶಿಲ್ಪದ ಪ್ರಗತಿಯ ಮೇಲೆ ಮಹತ್ವದ ಪ್ರಭಾವ ಬೀರಿದ ವ್ಯಕ್ತಿ ಅಥವಾ ಜನರ ಗುಂಪಿಗೆ ನೀಡಲಾಗುತ್ತದೆ.
  • ದೋಶಿ ಮಹಾರಾಷ್ಟ್ರದ ಪುಣೆ ಮೂಲದ ವಾಸ್ತುಶಾಸ್ತ್ರಜ್ಞರಾಗಿದ್ದಾರೆ. ಜೆಫಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನ ಹಳೆ ವಿದ್ಯಾರ್ಥಿಯಾಗಿರುವ ದೋಶಿ 1950ರಲ್ಲಿ ಪ್ಯಾರೀಸ್ ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು.