Published on: June 8, 2022

ರಾಷ್ಟ್ರೀಯ ಆಹಾರ ಗುಣಮಟ್ಟ ಸೂಚ್ಯಂಕ:

ರಾಷ್ಟ್ರೀಯ ಆಹಾರ ಗುಣಮಟ್ಟ ಸೂಚ್ಯಂಕ:

ಸುದ್ಧಿಯಲ್ಲಿಏಕಿದೆ?

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ)ನಾಲ್ಕನೇ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ 2021-22ರ ವರದಿ ಬಿಡುಗಡೆಯಾಗಿದ್ದು, ಗುಜರಾತ್ ರಾಜ್ಯವನ್ನು ಹಿಂದಿಕ್ಕಿ ತಮಿಳುನಾಡು ಅಗ್ರ ಸ್ಥಾನಕ್ಕೇರಿದೆ.

ಮುಖ್ಯಾಂಶಗಳು

  • ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಾಲ್ಕನೇ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ 2021-22ರಲ್ಲಿ ತಮಿಳುನಾಡು ಅಗ್ರಸ್ಥಾನ ಪಡೆದಿದ್ದು, ದೇಶದ 17 ದೊಡ್ಡ ರಾಜ್ಯಗಳ ಪೈಕಿ ಎರಡನೇ ಸ್ಥಾನಕ್ಕೆ ಗುಜರಾತ್ ಕುಸಿದಿದ್ದು, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.
  • 2020-21 ಸೂಚ್ಯಂಕದಲ್ಲಿ ತಮಿಳುನಾಡು ದೊಡ್ಡ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಕೇರಳ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
  • ಚಿಕ್ಕ ರಾಜ್ಯಗಳಲ್ಲಿ ಗೋವಾ ತನ್ನ ಅಗ್ರ ಶ್ರೇಯಾಂಕವನ್ನು ಉಳಿಸಿಕೊಂಡರೆ ಮಣಿಪುರ ಮತ್ತು ಸಿಕ್ಕಿಂ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ.
  • ಕೇಂದ್ರಾಡಳಿತ ಪ್ರದೇಶಗಳಲ್ಲಿ, ಜಮ್ಮು ಮತ್ತು ಕಾಶ್ಮೀರ, ದೆಹಲಿ ಮತ್ತು ಚಂಡೀಗಢ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.
  • ವಿಶ್ವ ಆಹಾರ ದಿನದಂದು ಸೂಚ್ಯಂಕವನ್ನು ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಪ್ರತಿಯೊಬ್ಬ ನಾಗರಿಕನ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬದ್ಧವಾಗಿದೆ ಮತ್ತು ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಗಳ ಪಾತ್ರವನ್ನು ಒತ್ತಿ ಹೇಳಿದರು.
  • ರಾಜ್ಯಗಳನ್ನು ಐದು ನಿಯತಾಂಕಗಳ ಮೇಲೆ ನಿರ್ಣಯಿಸಲಾಗಿದ್ದು, ಮಾನವ ಸಂಪನ್ಮೂಲಗಳು ಮತ್ತು ಸಾಂಸ್ಥಿಕ ಡೇಟಾ, ಅನುಸರಣೆ, ಆಹಾರ ಪರೀಕ್ಷಾ ಸೌಲಭ್ಯ, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಮತ್ತು ಗ್ರಾಹಕರ ಸಬಲೀಕರಣ ಅಂಶಗಳ ಮೇಲೆ ವರ್ಗೀಕರಿಸಲಾಗಿದೆ.

ಉದ್ದೇಶ

  • “ಆರೋಗ್ಯಕರ ರಾಷ್ಟ್ರವನ್ನು ಖಚಿತಪಡಿಸಿಕೊಳ್ಳಲು ನಾವು ಒಗ್ಗೂಡುವುದು ಈ ಸಮಯದ ಅಗತ್ಯವಾಗಿದೆ”. 2018-19 ರಲ್ಲಿ ಪ್ರಾರಂಭವಾದ ಸೂಚ್ಯಂಕವು ದೇಶದಲ್ಲಿನ ಆಹಾರ ಸುರಕ್ಷತೆ ಪರಿಸರ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕ ಮತ್ತು ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು ನಾಗರಿಕರಿಗೆ ಸುರಕ್ಷಿತ ಆಹಾರವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸುತ್ತದೆ.
  • ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾದ ಎಫ್‌ಎಸ್‌ಎಸ್‌ಎಐ, ಜನರಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.
  • ‘ಈಟ್ ರೈಟ್’ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ, ಸುರಕ್ಷಿತ ಮತ್ತು ಸುಸ್ಥಿರ ಆಹಾರ ಪರಿಸರವನ್ನು ಬೆಂಬಲಿಸುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಸ್ಮಾರ್ಟ್ ಸಿಟಿಗಳನ್ನು ಪ್ರೇರೇಪಿಸಲು ಕಳೆದ ವರ್ಷ FSSAI ಪ್ರಾರಂಭಿಸಿದ ಈಟ್‌ಸ್ಮಾರ್ಟ್ ಸಿಟೀಸ್ ಚಾಲೆಂಜ್‌ನ 11 ವಿಜೇತರನ್ನು ಸನ್ಮಾನಿಸಿದರು.