Published on: April 6, 2024

ಲೀಫ್ ಹಾಪರ್

ಲೀಫ್ ಹಾಪರ್

ಸುದ್ದಿಯಲ್ಲಿ ಏಕಿದೆ? ಲೀಫ್ ಹಾಪರ್ ಎಂಬ ಮಿಡತೆ ಜಾತಿಯ ಕೀಟವು ಕಣ್ಣಿಗೆ ಕಾಣದಂತೆ ಅದೃಶ್ಯವಾಗುವ ಗುಣವನ್ನು ಹೊಂದಿದೆ ಎಂಬ ವಿಚಾರವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಲೀಫ್ ಹಾಪರ್ ಜಾತಿಯ ಈ ಮಿಡತೆಯು ತನ್ನನ್ನು ತಾನು ಅದೃಶ್ಯಗೊಳಿಸಿಕೊಳ್ಳಲು ಅನುಸರಿಸುವ ವಿಧಾನವನ್ನು ನಕಲು ಮಾಡಿ ಅದನ್ನು ವಿಮಾನಗಳಲ್ಲಿ ಬಳಕೆ ಮಾಡಬಹುದಾದ ಸಾಧ್ಯತೆಯನ್ನೂ ವಿಜ್ಞಾನಿಗಳು ಶೋಧಿಸಿದ್ದಾರೆ.

ಮುಖ್ಯಾಂಶಗಳು

  • ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿ ಲಿನ್ ವ್ಯಾಂಗ್ ಹಾಗೂ ಅವರ ತಂಡವು ಈ ಸಂಶೋಧನೆಯನ್ನು ನಡೆಸಿದೆ.
  • ಲೀಫ್ ಹಾಪರ್ ಜಾತಿಯ ಮಿಡತೆಯು ತನ್ನ ಮೈಯ ಮೇಲೆ ವಿಶೇಷವಾದ ಬೆವರನ್ನು ಹೊರ ಸೂಸುತ್ತದೆ. ಈ ಬೆವರನ್ನು ಬ್ರೋಕೋಸೋಮ್ಸ್ ಎಂದು ಕರೆಯಲಾಗುತ್ತದೆ.
  • ಈ ಬ್ರೋಕೋಸೋಮ್ಸ್ ಅನ್ನು ಸೂಕ್ಷ್ಮ ದರ್ಶಕದಲ್ಲಿ ವೀಕ್ಷಿಸಿದರೆ ಅದು ಜೇನಿನ ಗೂಡಿನಂತಹ ರಚನೆಯನ್ನು ಹೊಂದಿರುವ ಉದ್ದನೆಯ ಕಡ್ಡಿಗಳಂತೆ ಅಥವಾ ಫುಟ್ಬಾಲ್ ಆಕೃತಿಯನ್ನು ಹೊಂದಿರುವಂತೆ ಗೋಚರಿಸುತ್ತದೆ.
  • ಈ ಬ್ರೋಕೋಸೋಮ್ಸ್ ಇವು ಸಾಮಾನ್ಯ ಬೆಳಕು ಹಾಗೂ ನೇರಳಾತೀತ ಬಣ್ಣಗಳನ್ನು ಹೀರಿಕೊಳ್ಳುವ ವಿಶೇಷ ಗುಣವನ್ನು ಹೊಂದಿವೆ.

ರಾಸಾಯನಿಕ ಬೆವರಿನ ತಯಾರಿಕೆ

  • ಈ ಬೆವರನ್ನು(ಬ್ರೋಕೋಸೋಮ್ಸ್) ಪ್ರಯೋಗಾಲಯದಲ್ಲಿ ಅಧ್ಯಯನ ಮಾಡಿರುವ ವಿಜ್ಞಾನಿಗಳು ಬೆವರಿನ ರಚನೆ, ಅದಲ್ಲಿರುವ ರಾಸಾಯನಿಕ ಸಂಯೋಜನೆ ಇತ್ಯಾದಿ ಅಂಶಗಳನ್ನು ದಾಖಲಿಸಿ ಬಳಿಕ ರಾಸಾಯನಿಕವಾಗಿ ಬೆವರನ್ನು ನಕಲು ಮಾಡಿ ಕೃತಕವಾದ ಬೆವರನ್ನು ಸೃಷ್ಟಿಸಿದ್ದಾರೆ.
  • ಈ ದ್ರಾವಣವನ್ನು ಬಳಿಕ ಸಾಂಪ್ರಾದಾಯಿಕವಾಗಿ ಬಳಸುವ ಬಣ್ಣಗಳಿಗೆ ಬೆರಸಿ ವಾಹನಗಳಿಗೆ ಸಿಂಪಡಿಸಿ ಗಮನಿಸಿದ್ದಾರೆ. ರೇಡಾರ್ ಹೊರಸೂಸುವ ಮೈಕ್ರೋವೇವ್ ಅಲೆಗಳು ಈ ದ್ರಾವಣ ಲೇಪಿತ ವಾಹನಗಳ ಮೇಲ್ಮೈಯನ್ನು ತೂರಿಕೊಂಡು ಹೋಗಿದೆ. ಅಂದರೆ, ರೇಡಾರ್ ಕಣ್ಣಿಗೆ ವಾಹನವು ಕಂಡಿಲ್ಲ. ಬಳಿಕ ಈ ದ್ರಾವಣ ಮಿಶ್ರಿತ ಬಣ್ಣವನ್ನು ಸಣ್ಣ ಗಾತ್ರದ ವಿಮಾನಗಳಿಗೂ ಲೇಪಿಸಿ ಪ್ರಯೋಗಿಸಿದ್ದು ಪ್ರಯೋಗ ಯಶಸ್ವಿಯಾಗಿದೆ.

ಪ್ರಯೋಜನ

  • ‘ಈ ದ್ರಾವಣವನ್ನು ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪ್ರಮಾಣದಲ್ಲಿ ತಯಾರಿಸಬಹುದಾಗಿದ್ದು, ತಯಾರಿಯ ಬೆಲೆ ಅತಿ ಕಡಿಮೆಯಾಗಿದೆ. ಹಾಲಿ ಬಳಕೆಯಲ್ಲಿ ‘ಸ್ಟೆಲ್ತ್’ ತಂತ್ರಜ್ಞಾನದಲ್ಲಿ ಅತಿ ದುಬಾರಿ ವೆಚ್ಚದ ಲೋಹಗಳು, ಬಣ್ಣಗಳನ್ನು ಲೇಪಿಸಬೇಕಾಗುತ್ತದೆ.
  • ರೇಡಾರ್ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನವೊಂದನ್ನು ಅದೃಶ್ಯ

ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ. ಈ ವಿಮಾನಗಳಿಗಾಗಿಯೇ ವಿಶೇಷವಾದ ಲೋಹದ ಬಳಕೆ, ವಿಶೇಷ ಬಣ್ಣದ ಲೇಪನ ಇತ್ಯಾದಿ ಮಾಡಬೇಕಾಗುತ್ತದೆ. ಇವೆಲ್ಲವೂ ಅತಿ ದುಬಾರಿ ಆಗಿರುವುದರಿಂದ ಈ ಸಂಶೋಧನೆ ವೆಚ್ಚ ಪರಿಣಾಮಕಾರಿಯಾಗಲಿದೆ.